ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶತಮಾನದ ಕ್ರಿಶ್ಚಿಯನ್ ಸ್ಮಶಾನ ಧ್ವಂಸ

|
Google Oneindia Kannada News

ಖಾನೇವಾಲ್, ಮೇ 22: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಖಾನೇವಾಲ್‌ನಲ್ಲಿರುವ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಸ್ಮಶಾನ ಹಾಗೂ ಮನೆಗಳನ್ನು ನೆಲಸಮ ಮಾಡಲಾಗಿದೆ.

ಪ್ರಧಾನಿ ಇಮ್ರಾನ್ ಖಾನ್ ಪಕ್ಷ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಕಾರ್ಯಕರ್ತರು ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ಜಫರ್ ಇಕ್ಬಾಲ್ ನುನಾರಿ ಸ್ಥಳೀಯ ಜಮೀನ್ದಾರನಾಗಿದ್ದಾನೆ, ಹಾಗೆಯೇ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಸದಸ್ಯ ಕೂಡ ಆಗಿದ್ದಾನೆ. ಆತನ ಗುಂಪು ಬಂದು ಸ್ಮಶಾನವನ್ನು ನೆಲಸಮಮಾಡಿ ಜಾಗವನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಾಕಿಸ್ತಾನದಲ್ಲಿ ಮಹಿಳಾ ರಾಜಕಾರಣಿ ಕೊರೊನಾ ವೈರಸ್‌ನಿಂದ ಸಾವುಪಾಕಿಸ್ತಾನದಲ್ಲಿ ಮಹಿಳಾ ರಾಜಕಾರಣಿ ಕೊರೊನಾ ವೈರಸ್‌ನಿಂದ ಸಾವು

ನುನಾರಿ ಹಾಗೂ ಆತನ ಸಂಚಾಲಕರು ಜೊತೆಗೆ ಅಕ್ರಮ್ ಗುಲಾಮ್ ಹೈದರ್, ಇಕ್ಬಾಲ್ ಗುಲಾಮ್ ಖಾದಿರ್ ಇನ್ನಿತರರು ಒತ್ತಾಯಪೂರ್ವಕವಾಗಿ ಸ್ಮಶಾನಕ್ಕೆ ನುಗ್ಗಿ ಟ್ರ್ಯಾಕ್ಟರ್‌ನಲ್ಲಿ ಎಲ್ಲಾ ಸಮಾಧಿಯನ್ನು ನೆಲಸಮಗೊಳಿಸಿದ್ದಾರೆ.

Century Old Christian Graveyard Homes In Pakistans Punjab Demolished

ಅಲ್ಲಿದ್ದ ಸ್ಥಳೀಯರು ಈ ಕೃತ್ಯವನ್ನು ತಡೆಯಲು ಸಾಕಷ್ಟು ಪ್ರಯತ್ನ ಪಟ್ಟರು.ಸಾಕಷ್ಟು ಕ್ರಿಶ್ಚಿಯನ್ನರ ಮನೆಯನ್ನು ಕೂಡ ಕೆಡವಿದ್ದು, ಅವರನ್ನು ಆ ಪ್ರದೇಶದಿಂದ ತೆರಳುವಂತೆ ಒತ್ತಾಯಿಸಿದ್ದಾರೆ.

ಮಹಿಳಾ ದಿನಾಚರಣೆ ವಿಶೇಷ:ಸ್ಮಶಾನದಲ್ಲಿ ಕೆಲಸ ಮಾಡುವ ನೀಲಮ್ಮನ ಸಾಹಸಗಾಥೆಮಹಿಳಾ ದಿನಾಚರಣೆ ವಿಶೇಷ:ಸ್ಮಶಾನದಲ್ಲಿ ಕೆಲಸ ಮಾಡುವ ನೀಲಮ್ಮನ ಸಾಹಸಗಾಥೆ

ಕ್ರಿಶ್ಚಿಯನ್ನರ ಸಂಖ್ಯೆ ಕಡಿಮೆಯಿರುವುದರಿಂದ ಅವರ ಮೇಲೆ ದರ್ಪ ತೋರಲಾಗುತ್ತಿದೆ. ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ನರು ಕಳೆದುಕೊಂಡ ಜಾಗವನ್ನು ಮರಳಿ ಪಡೆಯುವುದು ಕಷ್ಟ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

English summary
Houses and a graveyard belonging to The Christian Community in Khanewal district of Punjab province in Pakistan were destroyed and grabbed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X