Cannes 2023: ರೆಡ್ ಕಾರ್ಪೆಟ್ ಮೇಲೆ ಹಾರಾಡಿದ ಸನ್ನಿ ಲಿಯೋನ್ ಗೌನ್, ಅನುರಾಗ್ ಕಶ್ಯಪ್ ಸಹಾಯ

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಭಾಗವಹಿಸಿ ನೋಡುಗರ ಗಮನ ಸೆಳೆದಿದ್ದಾರೆ. ಅವರ ಮುಂಬರುವ ಚಿತ್ರ 'ಕೆನಡಿ' ವಿಶ್ವ ಪ್ರಥಮ ಪ್ರದರ್ಶನದಿಂದಾಗಿ ಕೇನ್ಸ್ ಚಲನಚಿತ್ರೋತ್ಸವ 2023ರಲ್ಲಿ ಪಾದಾರ್ಪಣೆ ಮಾಡಿದ ಸನ್ನಿ ವಿಶೇಷ ಉಡುಗೆಯ ಮೂಲಕ ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಚಿತ್ರದ ಇಡೀ ತಂಡವೇ ಹಾಜರಿದ್ದರು.

ಕೇನ್ಸ್‌ನಲ್ಲಿ ಮಧ್ಯರಾತ್ರಿಯ ಪ್ರದರ್ಶನದ ಸಮಯದಲ್ಲಿ ಪ್ರಥಮ ಪ್ರದರ್ಶನ ನೀಡಿದರು. ಈ ಸಮಾರಂಭದಲ್ಲಿ ಸನ್ನಿ ಲಿಯೋನ್ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈವೆಂಟ್‌ಗೆ ಹಾಜರಾಗಲು ನಟಿ ಸುಂದರವಾದ ಶಾಂಪೇನ್ ಉಡುಪನ್ನು ಆಯ್ಕೆ ಮಾಡಿದ್ದರು. ಸನ್ನಿ ಲಿಯೋನ್ ಅವರ ಈ ರೆಡ್ ಕಾರ್ಪೆಟ್ ಲುಕ್ ಅನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಆದ್ರೆ ಈ ಡ್ರೆಸ್ ಬಗ್ಗೆ ನಟಿ ತುಂಬಾ ಅಪ್ಸೆಟ್ ಆಗಿ ಕಾಣ್ತಿರುವಂತೆ ಕಾಣಿಸುತ್ತದೆ.

Cannes Film Festival 2023

ಅನುರಾಗ್ ಕಶ್ಯಪ್ ನೆರವು

ವಾಸ್ತವವಾಗಿ, ಸನ್ನಿ ಲಿಯೋನ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ನಟಿ ರೆಡ್ ಕಾರ್ಪೆಟ್ ಮೇಲೆ ಪೋಸ್ ನೀಡಲು ಮುಂದಾದಾಗ ಅದೇ ಸಮಯದಲ್ಲಿ ಸನ್ನಿಯ ಉಡುಗೆ ಗಾಳಿಯಲ್ಲಿ ಹಾರಲು ಪ್ರಾರಂಭಿಸಿತು. ಈ ಸಮಯದಲ್ಲಿ, ನಟಿ ತನ್ನ ಡ್ರೆಸ್ ಅನ್ನು ಎಲ್ಲರ ಮುಂದೆ ನಿಭಾಯಿಸಲು ಪ್ರಯತ್ನಿಸಿದರು. ಆದರೆ ಅದನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಆಗ ಅನುರಾಗ್ ಕಶ್ಯಪ್ ತಕ್ಷಣ ಮುಂದೆ ಬಂದು ಆಕೆಯ ಡ್ರೆಸ್ ನೋಡಿಕೊಂಡರು. ಈ ವೇಳೆ ಇಡೀ ತಂಡ ಫೋಟೋ ಪೋಸ್ ಕೊಟ್ಟಿತು.

ವಿಡಿಯೋ ವೈರಲ್

ಸದ್ಯ, ಸನ್ನಿ ಲಿಯೋನ್ ಮತ್ತು ಅನುರಾಗ್ ಕಶ್ಯಪ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋಗೆ ಅಭಿಮಾನಿಗಳು ನಿರಂತರವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸನ್ನಿ ಲಿಯೋನ್ ಅವರ ಕೆಲಸದ ಬಗ್ಗೆ ಮಾತನಾಡುವುದಾದರೆ ಅವರು ಶೀಘ್ರದಲ್ಲೇ 'ಕೆನಡಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ರಾಹುಲ್ ಭಟ್ ಜೊತೆ ನಟಿ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ. ಇದುವರೆಗೂ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಫ್ರಾನ್ಸ್‌ನಲ್ಲಿ 76ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ ಆಯೋಜಿಸಲಾಗಿದ್ದು ಇದರಲ್ಲಿ ವಿಶ್ವದಾದ್ಯಂತದ ನಟ-ನಟಿಯರು ಭಾಗವಹಿಸುತ್ತಿದ್ದಾರೆ. ಈ ಚಲನಚಿತ್ರೋತ್ಸವ ಮೇ 27 ರಂದು ಕೊನೆಗೊಳ್ಳುತ್ತದೆ. ಇಲ್ಲಿ ಬಾಲಿವುಡ್‌ನ ಅನೇಕ ಪ್ರಸಿದ್ಧ ತಾರೆಯರು ಸೇರಿದಂತೆ ಪ್ರಪಂಚದಾದ್ಯಂತ ಜನರು ಫ್ಯಾಷನ್ ಲೋಕವನ್ನೇ ಸೃಷ್ಟಿ ಮಾಡುತ್ತಿದ್ದಾರೆ. ಕ್ಯಾನೆಸ್ ಚಲನಚಿತ್ರೋತ್ಸದಲ್ಲಿ ಸ್ಟಾರ್‌ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ನೃತ್ಯ ಕಲಾವಿದರು, ಸಿಂಗರ್ಸ್ ಇತರರು ನಿತ್ಯ ಭಾಗವಹಿಸುತ್ತಿದ್ದಾರೆ. ಅನೇಕ ಪ್ರಸಿದ್ಧ ತಾರೆಯರು ತಮ್ಮ ಉಪಸ್ಥಿತಿಯೊಂದಿಗೆ ರೆಡ್ ಕಾರ್ಪೆಟ್ ಅನ್ನು ಅಲಂಕರಿಸುತ್ತಿದ್ದಾರೆ.

ಕ್ಯಾನೆಸ್ ಚಲನಚಿತ್ರೋತ್ಸದಲ್ಲಿ ಈವರೆಗೆ ಐಶ್ವರ್ಯ ರೈ ಬಚ್ಚನ್, ಊರ್ವಶಿ ರೌಟೇಲಾ, ಇಶಾ ಗುಪ್ತಾ, ದೀಪಿಕಾ ಪಡಕೊಣೆ ಮತ್ತಿತರ ಸ್ಟಾರ್ ನಟಿಯರು ಭಾಗವಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+