Cannes Film Festival 2023: ಕೇನ್ಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಕ್ಯಾಟ್ ವಾಕ್ ಮಾಡಿದ ಇಶಾ ಗುಪ್ತಾ
ಈ ವರ್ಷದ ಕೇನ್ಸ್ ಚಲನಚಿತ್ರೋತ್ಸವ ತುಂಬಾ ಅದ್ದೂರಿಯಾಗಿ ಶುರುವಾಗಿದೆ. ಮೇ 16 ರಂದು 76 ನೇ ಆವೃತ್ತಿ ಕೇನ್ಸ್ ಚಲನಚಿತ್ರೋತ್ಸವ ಆರಂಭವಾಗಿದೆ. ಈ ಉತ್ಸವವನ್ನು 10 ದಿನಗಳವರೆಗೆ ಅಂದರೆ ಮೇ 27 ರವರೆಗೆ ನಡೆಸಲಾಗುತ್ತದೆ. ಕೇನ್ಸ್ ಚಲನಚಿತ್ರೋತ್ಸದ ಆರಂಭದ ದಿನ ಸ್ಟಾರ್ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ನೃತ್ಯ ಕಲಾವಿದರು, ಸಿಂಗರ್ಸ್ ಇತರರು ಭಾಗಿಯಾಗಿದ್ದರು. ಬಾಲಿವುಡ್‌ನ ಅನೇಕ ದೊಡ್ಡ ತಾರೆಯರು ತಮ್ಮ ಉಪಸ್ಥಿತಿಯೊಂದಿಗೆ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದರು.
ಜನ್ನತ್ 2 ಚಿತ್ರದ ತಾರೆ ನಟಿ ಇಶಾ ಗುಪ್ತಾ ವಿಶ್ವದ ಅತ್ಯಂತ ಮನಮೋಹಕ ರೆಡ್ ಕಾರ್ಪೆಟ್ ಮೇಲೆ ಪಾದಾರ್ಪಣೆ ಮಾಡಿದರು. ಭಾರತ ಸರ್ಕಾರದ ನಿಯೋಗದ ಭಾಗವಾಗಿ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ ಇಶಾ ವಿಶೇಷ ಉಡುಗೆಯಲ್ಲಿ ಕಾಣಿಸಿಕೊಂಡರು. ಜಾನಿ ಡೆಪ್ ಅವರ ಪುನರಾಗಮನದ ಚಲನಚಿತ್ರವಾದ ಜೀನ್ ಡು ಬ್ಯಾರಿ ಎಂಬ ಆರಂಭಿಕ ಚಲನಚಿತ್ರದ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ಪ್ರದರ್ಶನದಲ್ಲಿ ಇಶಾ ಭಾಗವಹಿಸಿದ್ದರು. ಆಕರ್ಷಕ ಗುಲಾಬಿ ಬಣ್ಣದ ಗೌನ್‌ನಲ್ಲಿ ಇಶಾ ರೆಡ್ ಕಾರ್ಪೆಟ್‌ನಲ್ಲಿ ನಡೆಯುವ ಮೂಲಕ ನೆರೆದವರ ಗಮನ ಸೆಳೆದಿದ್ದಾರೆ.

ಫೋಟೋಗಳನ್ನು ಇಲ್ಲಿ ನೋಡಿ:
ಇಶಾ ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ:
ಇದಕ್ಕೂ ಮೊದಲು ನಟಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಮತ್ತು "ಭಾರತ ಸರ್ಕಾರದ ನಿಯೋಗದ ಭಾಗವಾಗಿ 2023 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ನಾನು ಸಂತೋಷಪಡುತ್ತೇನೆ. ಜಾಗತಿಕ ವೇದಿಕೆಯಲ್ಲಿ ಈ ಅವಕಾಶ ಒದಗಿಸಿದ್ದಕ್ಕೆ ಭಾರತ ಸರ್ಕಾರ ಮತ್ತು FICCI ಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಈ ಕ್ಷಣದಲ್ಲಿ ಬಯಸುತ್ತೇನೆ. ಭಾರತವು ಈಗ ಸಿನಿಮಾ ಜಗತ್ತಿನಲ್ಲಿ ಜಾಗತಿಕ ವೇದಿಕೆಯಲ್ಲಿದೆ ಮತ್ತು ಸಿನಿಮಾ ಜಗತ್ತಿನಲ್ಲಿ ತನ್ನ ವಿಶಿಷ್ಟ ಧ್ವನಿ ಮತ್ತು ದೃಷ್ಟಿಕೋನವನ್ನು ಜಗತ್ತಿಗೆ ಪ್ರದರ್ಶಿಸಲು ನನ್ನ ದೇಶವನ್ನು ಪ್ರತಿನಿಧಿಸುತ್ತಿರುವುದು ಸಂತೋಷವಾಗಿದೆ. ಕೇನ್ಸ್‌ನಲ್ಲಿ ರೆಡ್ ಕಾರ್ಪೆಟ್ ವಾಕಿಂಗ್ ಕನಸು ನನಸಾಗುವುದಲ್ಲದೆ ಬೇರೇನೂ ಇಲ್ಲ" ಎಂದು ಅವರು ಬರೆದಿದ್ದಾರೆ.
ಈ ವರ್ಷ ಚಲನಚಿತ್ರೋತ್ಸವದ ಆರಂಭದ ದಿನ ಭಾಗವಹಿಸಿದ ಇತರ ದೇಸಿ ತಾರೆಗಳೆಂದರೆ ಸಾರಾ ಅಲಿ ಖಾನ್, ಅನುಷ್ಕಾ ಶರ್ಮಾ, ಮೃಣಾಲ್ ಠಾಕೂರ್ ಮತ್ತು ಮಾನುಷಿ ಚಿಲ್ಲರ್ ಸೇರಿದಂತೆ ಇತರರು ಸೇರಿದ್ದರು. ಕಂಟೆಂಟ್ ಕ್ರಿಯೇಟರ್ ಡಾಲಿ ಸಿಂಗ್, ಟಿವಿ ರಿಯಾಲಿಟಿ ಶೋ ತಾರೆ ಸಾಕ್ಷಿ ಪ್ರಧಾನ್ ಹಾಗೂ ಕೇನ್ಸ್‌ನಲ್ಲಿ ಈ ಹಿಂದೆ ಹಲವಾರು ಭಾಗವಹಿಸಿದ್ದ ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೇನ್ಸ್ ಫಿಲ್ಮ್ ಫೆಸ್ಟಿವಲ್ ಅಂತರಾಷ್ಟ್ರೀಯ ಸಿನಿಮಾಗಳ ವಾರ್ಷಿಕ ಆಚರಣೆಯಾಗಿದೆ. ಇದು ಪ್ರಪಂಚದಾದ್ಯಂತದ ನಿರ್ದೇಶಕರು, ನಟರು, ನಿರ್ಮಾಪಕರು, ವಿತರಕರು ಮತ್ತು ಚಲನಚಿತ್ರ ವಿಮರ್ಶಕರನ್ನು ಒಂದೇ ವೇದಿಕೆಯಲ್ಲಿ ತರುತ್ತದೆ. ಹೀಗಾಗಿ ಕೇನ್ಸ್ ಚಲನಚಿತ್ರೋತ್ಸವ ಸಾಕಷ್ಟು ಪ್ರಸಿದ್ಧವಾಗಿದೆ. ವಿಶ್ವದ ಚಲನಚಿತ್ರೋದ್ಯಮದ ಅತ್ಯುತ್ತಮ ಚಲನಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಈ ಉತ್ಸವದಲ್ಲಿ, ಎಲ್ಲಾ ಕ್ಷೇತ್ರಗಳ ತಜ್ಞರು ಮತ್ತು ಪರಿಣಿತರು ತೀರ್ಪುಗಾರರ ಸದಸ್ಯರಾಗಿರುತ್ತಾರೆ.
ಕೇನ್ಸ್ ಚಲನಚಿತ್ರೋತ್ಸವ ಯಾವಾಗ ಮತ್ತು ಎಲ್ಲಿ..?
ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾ ಪ್ರದೇಶದ ಕ್ಯಾನೆಸ್ ಪಟ್ಟಣದಲ್ಲಿ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ. ಈ ಸಮಾರಂಭವನ್ನು ನೇರವಾಗಿ ಕೇನ್ಸ್ ಚಲನಚಿತ್ರೋತ್ಸವದ ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. ಇದಲ್ಲದೆ, ಕಾನ್ಸ್ ಫಿಲ್ಲಿ ಫೆಸ್ಟಿವಲ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಇದನ್ನು ವೀಕ್ಷಿಸಬಹುದು.
ಕೇನ್ಸ್ ಫಿಲ್ಮ್ ಫೆಸ್ಟಿವಲ್ 2023 ರಲ್ಲಿ ಭಾರತದಿಂದ ಎಷ್ಟು ಚಿತ್ರಗಳು..?
ಆಸ್ಕರ್‌ನಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಿದ ಪ್ಯಾನ್ ಇಂಡಿಯಾ ಮೂವಿ ಆರ್‌ಆರ್‌ಆರ್ ಕೇನ್ಸ್‌ನಲ್ಲಿ ನಿರಾಶೆಯಾಗಿ ಉಳಿದಿದೆ. ಆದರೆ ಕಾನು ಭೇಲ್ ಅವರ ಆಗ್ರಾ ಚಿತ್ರ ತೆರೆ ಕಾಣಲಿದೆ. ಹಿರಿಯ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನದ ಕೆನಡಿ ಚಿತ್ರವೂ ಪ್ರದರ್ಶನಗೊಳ್ಳಲಿದೆ. ಅದರಲ್ಲಿ ಸನ್ನಿ ಲಿಯೋನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯುಧಾಜಿತ್ ಬಸು ಅವರ ನೆಹಿಮಿಕ್ ಸಿನಿಮಾ ಕೂಡ ಲಾ ಸಿನೆಫ್ ವಿಭಾಗದಲ್ಲಿ ಪ್ರೀಮಿಯರ್ ಆಗಲಿದೆ. ಮಣಿಪುರಿ ಸಿನಿಮಾ ಇಶಾನ್ಹೋ ಕ್ಲಾಸಿಕ್ ವಿಭಾಗದಲ್ಲಿ ತೆರೆಕಾಣಲಿದೆ.












Click it and Unblock the Notifications