Canada PM: ಮುರಿದು ಬಿತ್ತು ಮುದ್ದಾದ ಜೋಡಿಯ ಅಂದವಾದ ಸಂಸಾರ!

ಟೊರೊಂಟೊ: ಅದು ಮುದ್ದಾದ ಜೋಡಿ, ಆ ಜೋಡಿಯನ್ನು ನೋಡಿ ಎಷ್ಟೋ ಜನರು ಹೊಟ್ಟೆ ಉರಿದುಕೊಳ್ಳೋರು. ಈಗಿನ ಮಟ್ಟಿಗೆ ಹೋಲಿಸಿದರೆ ದೇಶದ ಮುಖ್ಯಸ್ಥನೊಬ್ಬನಿಗೆ ಇದ್ದ ಅದ್ಭುತ ಸಂಸಾರ ಅದು. ಕಳೆದ 18 ವರ್ಷಗಳಿಂದ ಅದ್ಭುತವಾಗಿದ್ದ ಆ ಸಂಸಾರಕ್ಕೆ ಈಗ ಕಿಡಿ ಬಿದ್ದಿದೆ. ಮುದ್ದಾದ ಮೂರು ಮಕ್ಕಳಿದ್ದ ಜೋಡಿ ಈಗ ದೂರವಾಗಲು ನಿರ್ಧಾರ ಕೈಗೊಂಡಿದ್ದಾರೆ. ಹಾಗಾದ್ರೆ ಯಾರದು ಮುದ್ದಾದ ಜೋಡಿ? ತಿಳಿಯೋಣ ಬನ್ನಿ.

ಹೌದು, ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಮತ್ತು ಅವರ ಪತ್ನಿ ಸೋಫಿ ಗ್ರೆಗೊರಿ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ. ತಾವು ವೈವಾಹಿಕ ಜೀವನವನ್ನ ಮುರಿದುಕೊಳ್ಳುವುದಾಗಿ ಘೋಷಿಸಿದ್ದಾರೆ ಇಬ್ಬರೂ. ಈ ನಿರ್ಧಾರದ ಮೂಲಕ ಇವರಿಬ್ಬರ ಬರೋಬ್ಬರಿ 18 ವರ್ಷದ ವೈವಾಹಿಕ ಜೀವನವು ಕೊನೆಯಾಗುತ್ತಿದೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಹಾಕಿದ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೊ, ಹಲವು ಅರ್ಥಪೂರ್ಣ ಮತ್ತು ಕ್ಲಿಷ್ಟಕರ ಮಾತುಕತೆ ಬಳಿಕ ನಾವಿಬ್ಬರು ಬೇರೆಯಾಗುತ್ತಿದ್ದೇವೆ ಎನ್ನುವ ವಿಚಾರವನ್ನು ನಾನು ಮತ್ತು ಸೋಫಿ ಹಂಚಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಜಸ್ಟಿನ್ ಟ್ರೂಡೊ ಪೋಸ್ಟ್ ಅಭಿಮಾನಿ ಬಳಗಕ್ಕೆ ಶಾಕ್ ಕೊಟ್ಟಿದೆ.

Canadian PM Justin Trudeau Announces Separation From Her Wife Sophie Grégoire After 18 Long Years

ಸುಂದರ ಸಂಸಾರದಲ್ಲಿ ಏನಾಯ್ತೋ ಗೊತ್ತಿಲ್ಲ!

2005ರಲ್ಲಿ ವಿವಾಹವಾಗಿದ್ದ ಜಸ್ಟಿನ್ ಟ್ರೂಡೊ ಹಾಗೂ ಸೋಫಿ ಗ್ರೆಗೊರಿ ಅವರಿಗೆ ಒಟ್ಟಾರೆ 3 ಮಕ್ಕಳಿದ್ದಾರೆ. ಜಸ್ಟಿನ್ ಟ್ರೂಡೊಗೆ ಈಗ 51 ವರ್ಷ ಮತ್ತು ಅವರ ಪತ್ನಿ ಸೋಫಿ ಗ್ರೆಗೊರಿಗೆ 48 ವರ್ಷ. ಹೀಗೆ ಸುಮಾರು 18 ವರ್ಷಗಳ ಹಿಂದೆ ವಿವಾಹವಾಗಿದ್ದ ಇಬ್ಬರ ಸಂಸಾರವೂ ಅನ್ಯೂನ್ಯವಾಗಿತ್ತು. ಆದರೆ ದಿಢೀರ್ ಏನಾಯ್ತೋ ಗೊತ್ತಿಲ್ಲ, ಇಂತಹ ಕಠಿಣ ನಿರ್ಧಾರಕ್ಕೆ ಇಬ್ಬರೂ ಬಂದಿದ್ದಾರೆ. ತಮ್ಮ ಸಂಬಂಧದಲ್ಲಿ ಹಿಂದೆ ಬಂದ ಕಷ್ಟಗಳ ಬಗ್ಗೆ ಮಾತನಾಡಿರುವ ದಂಪತಿ, ಡಿವೋರ್ಸ್ ಬಗ್ಗೆ ತಿಳಿಸಿದ್ದಾರೆ. ಮತ್ತೊಂದು ಗಮನಾರ್ಹ ಸಂಗತಿ ಏನೆಂದರೆ, ಕೆಲ ವರ್ಷದಿಂದ ಇಬ್ಬರು ಸಾರ್ವಜನಿಕವಾಗಿ ಭಾರಿ ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದರು.

ಅಪ್ಪನಂತೆ ಮಗನಿಂದಲೂ ಡಿವೋರ್ಸ್!

ಹೌದು, ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಇದೆ. ಅದೇನೆಂದರೆ ಇದೀಗ ಪತ್ನಿಯಿಂದ ದೂರ ಆಗುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ತಂದೆಯ ಹಾದಿಯಲ್ಲಿ ಸಾಗಿದ್ದಾರೆ ಅನ್ನೋ ಟೀಕೆ ಕೇಳಿಬಂದಿದೆ. ಕೆನಡಾ ಹಾಲಿ ಪಿಎಂ ಜಸ್ಟಿನ್ ಟ್ರೂಡೊ ಅವರ ತಂದೆ ಪಿರೆ ಟ್ರೂಡೊ ಕೂಡ ಹಿಂದೆ ಕೆನಡಾ ಪ್ರಧಾನಿಯಾಗಿದ್ರು. ಪಿರೆ ಟ್ರೂಡೊ ಕೂಡ ಅಧಿಕಾರದಲ್ಲಿ ಇದ್ದಾಗಲೇ ವಿಚ್ಛೇದನ ಪಡೆದಿದ್ದರು. ಈಗ ಮಗ ಕೂಡ ಅಂತಹದ್ದೇ ನಿರ್ಧಾರ ಕೈಗೊಂಡು ಗಮನ ಸೆಳೆದಿದ್ದಾರೆ. ಪಿರೆ ಟ್ರೂಡೊ, 1977ರಲ್ಲಿ ಮಾರ್ಗರೇಟ್ ಅವರಿಂದ ಬೇರೆಯಾಗಿದ್ದರು. ಇದೀಗ ಜಸ್ಟಿನ್ ಟ್ರೂಡೊಗೆ 9, 14 ಹಾಗೂ 15 ವರ್ಷದ ಒಟ್ಟು ಮೂವರು ಮಕ್ಕಳಿದ್ದಾರೆ.

ಜಗಳ ಶುರುವಾಗಿದ್ದು ಎಲ್ಲಿಂದ?

ಅಷ್ಟಕ್ಕೂ ಕಿರಿಕ್ ಶುರುವಾಗಲು ಕಾರಣವೇ ಪ್ರಧಾನಿ ಪಟ್ಟವೆಂಬ ಆರೋಪ ಕೇಳಿಬಂದಿದೆ. 2015ರಲ್ಲಿ ಜಸ್ಟಿನ್ ಟ್ರೂಡೊ ಕೆನಡಾ ಪ್ರಧಾನಿಯಾದ ಬಳಿಕ ಕುಟುಂಬದ ಬಗ್ಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗುತ್ತಿರಲಿಲ್ಲ, ಇದೇ ಕಾರಣಕ್ಕೆ ಈ ಇಬ್ಬರ ನಡುವೆ ಮನಸ್ತಾಪ ಮೂಡಿತ್ತು ಅಂತಾ ಹೇಳಲಾಗುತ್ತಿದೆ. ಹೀಗಾಗಿಯೇ ಸಾಕಷ್ಟು ಚರ್ಚೆಯ ಬಳಿಕ ಇಬ್ಬರೂ ದೂರವಾಗಿ ಬಾಳಲು ನಿರ್ಧಾರ ಕೈಗೊಂಡಿದ್ದಾರೆ. ವಿಚ್ಛೇದನದ ಕಾನೂನು ಕಡತಗಳಿಗೆ ಈ ದಂಪತಿ ಸಹಿ ಹಾಕಿದ್ದು, ಆದರೆ ಮಕ್ಕಳನ್ನು ಇಬ್ಬರೂ ಸೇರಿ ಪೋಷಿಸಲು ಒಪ್ಪಿಕೊಂಡಿದ್ದಾರೆ. ಹೀಗೆ ತಮ್ಮ ವೈವಾಹಿಕ ಸಂಬಂಧ ಮುರಿದುಬಿದ್ದರೂ ಮಕ್ಕಳಿಗಾಗಿ ಇಬ್ಬರೂ ಒಟ್ಟಾಗಿ ಇರಲಿದ್ದಾರೆ.

Canadian PM Justin Trudeau Announces Separation From Her Wife Sophie Grégoire After 18 Long Years

ಒಟ್ನಲ್ಲಿ ಕೆನಡಾ ಪ್ರಧಾನಿಯ ವಿಚ್ಛೇದನ ಪ್ರಸಂಗ ಇದೀಗ ಜಗತ್ತಿನ ಗಮನ ಸೆಳೆದಿದೆ. ಆದ್ರೆ ಈ ಮುದ್ದಾದ ಜೋಡಿ ದೂರವಾಗುತ್ತಿರುವ ಬಗ್ಗೆ ಹಲವರಿಗೆ ಬೇಸರ ಕೂಡ ಇದೆ. ಇಷ್ಟಾದ ಮೇಲೂ ಮಕ್ಕಳಿಗಾಗಿ ಕೆನಡಾದ ಪ್ರಧಾನಿ ಮತ್ತವರ ಮಾಜಿ ಪತ್ನಿ ಒಟ್ಟಾಗಿರಲು ನಿರ್ಧರಿಸಿ ಮಾದರಿಯಾಗಿದ್ದಾರೆ. ಸೋಫಿ ಗ್ರೆಗೊರಿ ಒಟ್ಟವಾದಲ್ಲಿ ಬೇರೆಯದೇ ಮನೆಯಲ್ಲಿ ಇನ್ನು ಮುಂದೆ ವಾಸಿಸಲಿದ್ದಾರೆ. ಅದರೆ ಮಕ್ಕಳನ್ನು ನೋಡಿಕೊಳ್ಳಲು ಹೆಚ್ಚಿನ ಸಮಯವನ್ನ ಪ್ರಧಾನಮಂತ್ರಿ ಅಧಿಕೃತ ಕಚೇರಿಯಲ್ಲೇ ಕಳೆಯಲಿದ್ದಾರೆ ಎನ್ನಲಾಗಿದೆ. ಆದರೆ ಮುಂದೆ ಏನಾಗುತ್ತೆ ಅಂತಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+