Breaking; ಉಕ್ರೇನ್ ಮೇಲಿನ ಆಮದು ಸುಂಕ ಕಡಿತ ಮಾಡಿದ ಕೆನಡಾ
ಒಟ್ಟಾವಾ, ಮೇ 09; ಕೆನಡಾ ಉಕ್ರೇನ್ ಮೇಲಿನ ಎಲ್ಲಾ ವಸ್ತುಗಳ ಆಮದು ಸುಂಕವನ್ನು ಒಂದು ವರ್ಷಗಳ ಕಾಲ ತೆಗೆದುಹಾಕಿದೆ. ಈ ಮೂಲಕ ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಕೆನಡಾ ಉಕ್ರೇನ್ ಬೆಂಬಲಿಸಿದೆ.
ಭಾನುವಾರ ಕೀವ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮತ್ತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಭೇಟಿಯಾಗಿದ್ದರು. ಈ ಭೇಟಿಯ ಬಳಿಕ ಕೆನಡಾ ಈ ಆಮದು ಸುಂಕ ಕಡಿಗೊಳಿಸುವ ಘೋಷಣೆ ಮಾಡಿದೆ.
ಉಕ್ರೇನ್ ಅಧಿಕೃತವಾಗಿ ಈ ಕುರಿತು ಟ್ವೀಟ್ ಮಾಡಿದೆ. ಕೀವ್‌ನಲ್ಲಿ ಉಭಯ ನಾಯಕರು ಭೇಟಿಯಾದ ಬಳಿಕ ಕೆನಡಾ ಒಂದು ವರ್ಷಗಳ ಕಾಲ ಉಕ್ರೇನ್ ವಸ್ತುಗಳ ಮೇಲಿನ ಆಮದು ಸುಂಕ ಕಡಿತಗೊಳಿಸಿದೆ ಎಂದು ಪ್ರಕಟಣೆ ಹೇಳಿದೆ.

ಕೆನಡಾ ಪ್ರಧಾನಿ ಇದೇ ಸಂದರ್ಭದಲ್ಲಿ ಉಕ್ರೇನ್‌ಗೆ 50 ಮಿಲಿಯನ್ ಡಾಲರ್ ಮಿಲಿಟರಿ ನೆರವು ಘೋಷಣೆ ಮಾಡಿದ್ದಾರೆ. ರಷ್ಯಾ ಮೇಲೆ ಇನ್ನೂ ಹೆಚ್ಚಿನ ಆರ್ಥಿಕ ನಿರ್ಬಂಧಗಳನ್ನು ವಿಧಿಸುವುದಾಗಿ ಘೋಷಣೆ ಮಾಡಿದ್ದಾರೆ.
"ಇಂದು ನಾನು ಕೆನಡಾಗೆ ಹೆಚ್ಚಿನ ಸೇನಾ ನೆರವು ಘೋಷಣೆ ಮಾಡುತ್ತಿದ್ದೇನೆ. ಇದರಲ್ಲಿ ಡ್ರೋನ್ ಕ್ಯಾಮರಾಗಳು, ಸ್ಯಾಟಲೈಟ್ ಇಮೇಜಿನರಿ, ಚಿಕ್ಕ ಶಸ್ತ್ರಾಸ್ತ್ರಗಳು ಸೇರಿವೆ. ಸೇನಾ ಕಾರ್ಯಾಚರಣೆಗೆ ಹಣಕಾಸಿನ ನೆರವು ಸಹ ನೀಡಲಾಗುತ್ತದೆ" ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿದ್ದಾರೆ.
"ನಾವು ಹೊಸದಾಗಿ ರಷ್ಯಾದ 5 ಉದ್ಯಮಗಳ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿದ್ದೇವೆ. ಕೀವ್‌ನಲ್ಲಿರುವ ಕೆನಡಾ ರಾಯಭಾರ ಕಚೇರಿಯನ್ನು ಸಹ ಶೀಘ್ರವೇ ತೆರೆಯಲಾಗುತ್ತದೆ" ಎಂದು ಪ್ರಧಾನಿ ಘೋಷಣೆ ಮಾಡಿದ್ದಾರೆ.












Click it and Unblock the Notifications