India & Canada: ಭಾರತ ವಿರೋಧಿ ಕೆನಡಾ ಪ್ರಧಾನಿ ಪಟ್ಟಕ್ಕೆ ಕುತ್ತು?
ಭಾರತ
ವಿರೋಧಿ ನಿಲುವುಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿ ಇರುವ ಕೆನಡಾ ಪಿಎಂ, ಅಂದ್ರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪಟ್ಟಕ್ಕೆ ಇದೀಗ ಕಂಟಕ ಎದುರಾಗಿದೆ. ಖಲಿಸ್ತಾನಿ ಉಗ್ರರ ಪರವಾಗಿ ನಿಂತು, ಭಾರತದ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದ ಆರೋಪ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ಇತ್ತು. ಹೀಗಿದ್ದಾಗ ಜಸ್ಟಿನ್ ಟ್ರುಡೊ ಆಡಳಿತದ ಬಗ್ಗೆ ಕೂಡ ಭಾರಿ ಆಕ್ರೋಶ ಮತ್ತು ಬೇಸರ ಕೂಡ ಜಾಗತಿಕ ಮಟ್ಟದಲ್ಲಿ ಆವರಿಸಿದೆ. ಹೀಗೆ ವಾತಾವರಣ ಸೂಕ್ಷ್ಮವಾಗಿರುವ ವೇಳೆ ಭಾರತ ವಿರೋಧಿ ಜಸ್ಟಿನ್ ಟ್ರುಡೊ ಪ್ರಧಾನಿ ಪಟ್ಟದಿಂದ ಕೆಳಗೆ ಇಳಿಯಬೇಕು ಎಂಬ ಮಸಲತ್ತು ಸ್ವತಃ ಕೆನಡಾ ನೆಲದಲ್ಲೇ ಶುರುವಾಗಿದೆ! id="toptextpromo"> id='are-slot-1' class='oiad oi-axt oiadv'> id='top-searched-articles'>ಭಾರತದ
ವಿಚಾರದಲ್ಲಿ ಕೆನಡಾ ಪ್ರಧಾನಿಗೆ ಅದೇನು ದ್ವೇಷವೋ ಗೊತ್ತಿಲ್ಲ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಬೇಕು ಬೇಕು ಅಂತಲೇ ಆರೋಪವನ್ನ ಮಾಡುತ್ತಾರೆ. ಭಾರತ ಸರ್ಕಾರವನ್ನು ಟಾರ್ಗೆಟ್ ಮಾಡಿ ಕೋಪ ತರಿಸುತ್ತಿದ್ದಾರೆ ಎಂಬ ಆರೋಪ ಇತ್ತು. ಈ ಆರೋಪಗಳಿಗೆ ಪುಷ್ಠಿ ನೀಡುವಂತೆ ಭಾರತೀಯ ರಾಯಭಾರಿಯನ್ನೇ ವಿಚಾರಣೆ ನಡೆಸುತ್ತೇವೆ, ಭಾರತದ ಅಧಿಕಾರಿಗಳು ಕೆನಡಾ ನೆಲದಲ್ಲಿ ಕಾನೂನನ್ನು ಮೀರಿದ್ದಾರೆ ಎಂಬ ಆರೋಪ ಮಾಡಿದ್ದರು. ಅಲ್ಲದೆ ಪದೇ ಪದೇ ಕಿರಿಕ್ ಮಾಡ್ತಿದ್ದರು ಟ್ರುಡೊ. ಆದ್ರೆ ಈಗ ಇದೇ ಟ್ರುಡೋ ಬುಡ ಅಲುಗಾಡುವ ಸುದ್ದಿ ಓಡಾಡುತ್ತಿದೆ! id='are-slot-2' class='oiad oi-axt oiadv'>












Click it and Unblock the Notifications