ಶಾಲೆಯಲ್ಲಿ ಗುಂಡಿನ ದಾಳಿ: ಏಳು ಮಂದಿಗೆ ಗಾಯ

ಕ್ಯಾಲಿಫೋರ್ನಿಯಾ, ನವೆಂಬರ್ 14: ಕ್ಯಾಲಿಫೋರ್ನಿಯಾದ ಉತ್ತರ ಲಾಸ್ ಏಂಜಲಿಸ್‌ನ ಸಾಂಟಾ ಕ್ಲಾರಿಟಾದಲ್ಲಿರುವ ಸಾಗಸ್ ಹೈಸ್ಕೂಲಿನ ಮೈದಾನದಲ್ಲಿ ಬಂದೂಕುಧಾರಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಏಳು ಮಂದಿ ಗಾಯಗೊಂಡಿದ್ದಾರೆ.

ಗುರುವಾರ ಈ ಘಟನೆ ನಡೆದಿದ್ದು, ದಾಳಿ ನಡೆಸಿದ ವ್ಯಕ್ತಿ ಏಷ್ಯಾದ ಮೂಲದವನಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ದಾಳಿಕೋರ ಕಪ್ಪು ಬಟ್ಟೆ ಧರಿಸಿದ್ದ. ಶಂಕಿತ ದಾಳಿಕೋರ 15 ವರ್ಷದ ಬಾಲಕ ಎಂದು ಎಲ್‌ಎ ಟೈಮ್ಸ್ ವೆಬ್‌ಸೈಟ್ ವರದಿ ಮಾಡಿದೆ.

ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕೆಲವರ ಸ್ಥಿತಿ ಗಂಭೀರವಾಗಿದೆ. ಘಟನೆ ನಡೆದ ಶಾಲೆ ಹಾಗೂ ಸುತ್ತಮುತ್ತಲಿನ ಶಾಲೆಗಳನ್ನು ಮುಚ್ಚಲಾಗಿದೆ. ಶಂಕಿತ ದಾಳಿಕೋರ ಈ ಸ್ಥಳದ ಸುತ್ತಮುತ್ತ ಅಡಗಿರುವ ಸಾಧ್ಯತೆ ಇರುವುದರಿಂದ ಜನರು ಮನೆ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ.

 California Shooting At Saugus High School Santa Clarita

ಶಂಕಿತನಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆತ ಶಾಲೆಯ ವಿದ್ಯಾರ್ಥಿಯೇ ಇರಬೇಕು ಎಂದು ಊಹಿಸಲಾಗಿದೆ. ಕಪ್ಪು ಉಡುಗೆ ಧರಿಸಿದ ಶಂಕಾಸ್ಪದ ವ್ಯಕ್ತಿ ಕಂಡುಬಂದರೆ ಕೂಡಲೇ ಮಾಹಿತಿ ನೀಡುವಂತೆ ಪೊಲೀಸರು ಸೂಚಿಸಿದ್ದಾರೆ.

ಶಾಲೆ ಆರಂಭವಾಗುವ 20 ನಿಮಿಷಗಳ ಮುಂಚೆಯಷ್ಟೇ ಈ ದಾಳಿ ನಡೆದಿದೆ. ಆ ವೇಳೆ ಮೈದಾನದಲ್ಲಿ ಕೆಲವು ಮಕ್ಕಳು ಆಟವಾಡುತ್ತಿದ್ದರು. ಶಾಲೆಯಲ್ಲಿ ಸುಮಾರು 2,400 ವಿದ್ಯಾರ್ಥಿಗಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+