ಬರ್ಗರ್ ಮತ್ತು ಕಿಂಗ್ ಗೆ ಅಮೆರಿಕಾದಲ್ಲಿ ಶುಭವಿವಾಹ
ಇಲಿನಾಯ್, ಏ.9: ಹೊಸ ಬಾಳಿನ ಹೊಸ್ತಿಲಲ್ಲಿರುವ ನವ ಜೋಡಿಗೆ ಕೆಲವೊಮ್ಮೆ ಅನಿರೀಕ್ಷಿತ ಗಿಫ್ಟ್ ಗಳು ಸಿಗುವುದುಂಟು. ಅದರೆ, ಮದುವೆಯ ಸಂಪೂರ್ಣ ಖರ್ಚು ವೆಚ್ಚ ಭರಿಸಲು ಸಂಸ್ಥೆಯೊಂದು ಮುಂದೆ ಬಂದಿರುವ ಅಚ್ಚರಿ ಸುದ್ದಿ ಬಂದಿದೆ. ಅಮೆರಿಕದ ಜನಪ್ರಿಯ ಸಂಸ್ಥೆ ಬರ್ಗರ್ ಕಿಂಗ್ ಹೀಗೊಂದು ಉಡುಗೊರೆ ನೀಡುತ್ತಿದೆ.
ಇಲಿನಾಯ್ ಪ್ರಾಂತ್ಯದ ಜೋಡಿಗಳಾದ ಜೋಯಲ್ ಬರ್ಗರ್ ಹಾಗೂ ಆಶ್ಲೆ ಕಿಂಗ್ ಅವರ ಮದುವೆಗೆ ಬರ್ಗರ್ ಕಿಂಗ್ ಸಂಸ್ಥೆ ತುತ್ತೂರಿ ಊದಲಿದೆ. ಈ ಜೋಡಿಯ ಸರ್ ನೇಮ್ ನಲ್ಲಿ Burger ಹಾಗೂ King ಎಂಬ ಹೆಸರಿರುವುದೇ ಇದಕ್ಕೆ ಕಾರಣ. ಈ ದಂಪತಿಗೆ ಮುಂದೆ ಮಕ್ಕಳಾಗಿ ಅವರ ಮದುವೆಯಾಗುವ ಸಂದರ್ಭದಲ್ಲೂ ಬರ್ಗರ್ ಕಿಂಗ್ ಫಾಸ್ಟ್ ಫುಡ್ ಜಾಲ ಸಂಸ್ಥೆ ಇದೇ ರೀತಿ ಉಡುಗೊರೆ ನೀಡುವ ಸಾಧ್ಯತೆಯಿದೆಯಂತೆ.

ನ್ಯೂ ಬರ್ಲಿನ್ ಎಂಬ ಪುಟ್ಟ ಗ್ರಾಮದಲ್ಲಿ 24 ವರ್ಷದ ಬರ್ಗರ್ ಹಾಗೂ 23 ವರ್ಷ ಕಿಂಗ್ ನೆಲೆಸಿದ್ದಾರೆ. ಸ್ಪ್ರಿಂಗ್ ಫೀಲ್ಡ್ ಗೆ ಹತ್ತಿರವಿರುವ ಈ ಊರಿನಲ್ಲಿ ಸಾವಿರಕ್ಕೂ ಅಧಿಕ ಜನವಸತಿ ಕಂಡು ಬಂದಿಲ್ಲ. ಈ ಜೋಡಿಗೆ ಈ ವಾರದ ಆರಂಭದಲ್ಲಿ ಸ್ಕೈಪ್ ಮೂಲಕ ಕಾಲ್ ಬಂದಿದೆ ನ್ಯೂಯಾರ್ಕಿನ ಬಹುರಾಷ್ಟ್ರೀಯ ಕಂಪನಿ ಕರೆ ಸ್ವೀಕರಿಸಿದ ಬರ್ಗರ್ ವಿಷಯ ಕೇಳಿ ಥ್ರಿಲ್ ಆಗಿದ್ದಾರೆ.
ಬರ್ಗರ್ ಕಿಂಗ್ ಸಂಸ್ಥೆ ವಕ್ತಾರರು ಮಾತನಾಡಿ ಸಂಸ್ಥೆ ನೀಡುತ್ತಿರುವ ಆಫರ್ ಬಗ್ಗೆ ವಿವರಿಸಿದ್ದಾರೆ. ಬರ್ಗರ್ ಹಾಗೂ ಕಿಂಗ್ ಮದುವೆ ಖರ್ಚು ವೆಚ್ಚ ಭರಿಸುವುದಾಗಿ ಹೇಳಿದ್ದಾರೆ. ಇತ್ತೀಚಿಗೆ ವಿವಾಹ ನಿಶ್ಚಿತಾರ್ಥಕ್ಕೊಳಲ್ಪಟ್ಟ ಈ ಜೋಡಿ ಬರ್ಗರ್ ಕಿಂಗ್ ರೆಸ್ಟೋರೆಂಟ್ ಲೋಗೋ ಜೊತೆಗೆ ಫೋಟೊ ತೆಗೆಸಿಕೊಂಡಿದ್ದರು. ಇದನ್ನು ಗಮನಿಸಿದ ಸಂಸ್ಥೆ ಈ ಜೋಡಿಗೆ ಭರ್ಜರಿ ಉಡುಗೊರೆ ನೀಡಿದೆ.
Mr. Burger & Miss King are planning a whopper of a wedding: http://t.co/GNXbRq5gjv via @CNNLiving #BurgerKingWedding pic.twitter.com/DlXEWZJFHe
— CNN (@CNN) April 9, 2015 ಅಲ್ಲದೆ, ಸಾಮಾಜಿಕ ಜಾಲ ತಾಣಗಳಲ್ಲಿ ಈ Burger-King couple ಫೋಟೊ ಹರಿದಾಡಿ ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಅನೇಕ ಕಡೆಗಳಿಂದ ಶುಭ ಹಾರೈಕೆಗಳು ಹರಿದು ಬಂದಿವೆ. (ಐಎಎನ್ಎಸ್)











Click it and Unblock the Notifications