ರಷ್ಯಾದ ಅನೇಕ ಯುದ್ಧ ಅಪರಾಧದಲ್ಲಿ ಬುಚಾ ಹತ್ಯೆ ಬರೀ ಒಂದು ಉದಾಹರಣೆ: ಝೆಲೆನ್ಸ್ಕಿ
ಕೀವ್, ಏಪ್ರಿಲ್ 06: ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಂಗಳವಾರ, ಬುಚಾ ಹತ್ಯಾಕಾಂಡವು ಪೂರ್ವ ಯುರೋಪಿಯನ್ ದೇಶದ ನಗರಗಳಲ್ಲಿ ರಷ್ಯಾದ ಪಡೆಗಳು ಮಾಡಿದ ಅನೇಕ ಯುದ್ಧ ಅಪರಾಧಗಳಲ್ಲಿ "ಕೇವಲ ಒಂದು" ಎಂದು ಹೇಳಿದರು.
ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು (ಯುಎನ್ಎಸ್‌ಸಿ) ಉದ್ದೇಶಿಸಿ ಮಾತನಾಡಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಪಡೆಗಳು ನಮ್ಮ ದೇಶಕ್ಕೆ ಸೇವೆ ಸಲ್ಲಿಸಿದ ಎಲ್ಲರನ್ನು ಕೊಲ್ಲುತ್ತಿದೆ ಎಂದು ಹೇಳಿದರು.
ಬುಚಾದಲ್ಲಿನ ಹತ್ಯೆಗಳ ಫೋಟೋಗಳನ್ನು ಪ್ರದರ್ಶಿಸಿ, ಉಕ್ರೇನ್ ಪಡೆಗಳು ಪ್ರಚಾರ ಮಾಡುತ್ತಿದೆ ಎಂಬ ಮಾಸ್ಕೋದ ಹೇಳಿಕೆಯನ್ನು ಉಲ್ಲೇಖಿಸಿದ ಝೆಲೆನ್ಸ್ಕಿ, "ಇದು 2022, ಈ ಸಂದರ್ಭದಲ್ಲಿ ರಷ್ಯಾದ ಅಮಾನುಷ ಕೃತ್ಯಗಳನ್ನು ತೋರಿಸಲು, ಸಾಬೀತುಪಡಿಸಲು ಉಪಗ್ರಹ ಚಿತ್ರಗಳು ಸೇರಿದಂತೆ ನಿರ್ಣಾಯಕ ಪುರಾವೆಗಳಿವೆ," ಎಂದು ಪ್ರತಿಪಾದಿಸಿದರು.

ಉಕ್ರೇನ್ ಅಧ್ಯಕ್ಷರು ರಷ್ಯಾವು ಅಪರಾಧದಿಂದ "ತಪ್ಪಿಸಿಕೊಳ್ಳುವುದಿಲ್ಲ" ಎಂದು ಖಚಿತಪಡಿಸಿಕೊಳ್ಳಲು ಪತ್ರಕರ್ತರಿಗೆ ಸಂಪೂರ್ಣ ಪ್ರವೇಶಕ್ಕಾಗಿ ಕರೆ ನೀಡಿದರು. ಇನ್ನು ರಷ್ಯಾದ ಅಪರಾಧಾದ ಬಗ್ಗೆ ಯುಎಸ್ ಜವಾಬ್ದಾರಿ ಬಗ್ಗೆ ಉಲ್ಲೇಖ ಮಾಡಿದರು.
"ಜನರು ತಮ್ಮ ಅಪಾರ್ಟ್‌ಮೆಂಟ್‌ಗಳು, ಮನೆಗಳಲ್ಲಿ ಕೊಲ್ಲಲ್ಪಟ್ಟರು. ನಾಗರಿಕರು ತಮ್ಮ ಕಾರುಗಳಲ್ಲಿ ರಸ್ತೆಯ ಮಧ್ಯದಲ್ಲಿ ಕುಳಿತಿರುವಾಗ ಟ್ಯಾಂಕ್‌ಗಳ ದಾಳಿಗೆ ಒಳಗಾದರು ಎಂದು ಝೆಲೆನ್ಸ್ಕಿ ಕೌನ್ಸಿಲ್‌ಗೆ ತಿಳಿಸಿದರು.
ಯುಎನ್‌ಎಸ್‌ಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲವನ್ನೂ ಮಾಡಬೇಕಾಗಿದೆ ಎಂದು ಹೇಳುವ ಮೂಲಕ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಷ್ಯಾಕ್ಕೆ ವೀಟೋ ನೀಡುವ ತನ್ನ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಮತ್ತು ಸುಧಾರಿಸಲು ಅಧ್ಯಕ್ಷರು ಅಂತರರಾಷ್ಟ್ರೀಯ ಒಕ್ಕೂಟಕ್ಕೆ ಒತ್ತಾಯ ಮಾಡಿದರು.
ಕೀವ್ ಸಮೀಪದ ಬುಚಾರದಲ್ಲಿ 410 ನಾಗರಿಕರ ದೇಹ ಪತ್ತೆ
ಉಕ್ರೇನ್ ರಾಜಧಾನಿ ಕೀವ್ ಪ್ರದೇಶದ ಸಮೀಪದ ಬುಚಾದಲ್ಲಿ ಇತ್ತೀಚೆಗೆ ಉಕ್ರೇನ್ 410 ನಾಗರಿಕ ದೇಹಗಳನ್ನು ವಶಪಡಿಸಿಕೊಂಡಿದೆ. ವೆನೆಡಿಕ್ಟೋವಾ ರಾಷ್ಟ್ರೀಯ ದೂರದರ್ಶನಕ್ಕೆ ಮಾಹಿತಿ ನೀಡಿದ ಐರಿನಾ ವೆನೆಡಿಕ್ಟೋವಾ, "ಕೀವ್ ಪ್ರದೇಶದ ವಿಮೋಚನೆಗೊಂಡ ಪ್ರದೇಶಗಳಿಂದ ಸತ್ತ ನಾಗರಿಕರ 410 ದೇಹಗಳನ್ನು ಸ್ಥಳಾಂತರಿಸಲಾಗಿದೆ. ವಿಧಿವಿಜ್ಞಾನ ತಜ್ಞರು ಈಗಾಗಲೇ 140 ಅನ್ನು ಪರೀಕ್ಷಿಸಿದ್ದಾರೆ," ಎಂದು ತಿಳಿಸಿದ್ದರು.

ಈ ವಾರಾಂತ್ಯದಲ್ಲಿ ರಷ್ಯಾದ ಸೈನ್ಯದಿಂದ ಇಡೀ ಕೀವ್ ಪ್ರದೇಶದ ನಿಯಂತ್ರಣವನ್ನು ಮರಳಿ ಪಡೆದ ಉಕ್ರೇನ್, ರಾಜಧಾನಿಯ ವಾಯುವ್ಯಕ್ಕೆ 30 ಕಿಲೋಮೀಟರ್ (19 ಮೈಲುಗಳು) ಬುಚಾ ಪಟ್ಟಣದಲ್ಲಿ "ಉದ್ದೇಶಪೂರ್ವಕ ಹತ್ಯಾಕಾಂಡ" ನಡೆದಿದೆ ಎಂದು ಮಾಸ್ಕೋ ವಿರುದ್ಧ ಆರೋಪ ಮಾಡಿದೆ.
280 ಶವಗಳನ್ನು ಸಾಮೂಹಿಕ ಸಮಾಧಿಗಳಲ್ಲಿ ಹೂಳಲಾಗಿದೆ ಎಂದು ಬುಚಾ ಮೇಯರ್ ಅನಾಟೊಲಿ ಫೆಡೋರುಕ್ ಶನಿವಾರ ಎಎಫ್‌ಪಿಗೆ ತಿಳಿಸಿದರು. ಉಕ್ರೇನಿಯನ್ ಪಡೆಗಳು ಪಟ್ಟಣಕ್ಕೆ ಪ್ರವೇಶವನ್ನು ಮರಳಿ ಪಡೆಯುತ್ತಿದ್ದಂತೆ ನಾಗರಿಕ ದೇಹಗಳು ಬೀದಿಯಲ್ಲಿ ಕಂಡುಬಂದವು ಎಂದು ವರದಿಯಾಗಿದೆ.
ಶನಿವಾರ, ಪತ್ರಕರ್ತರು ಬುಚಾದ ಒಂದೇ ರಸ್ತೆಯಲ್ಲಿ ಕನಿಷ್ಠ 20 ಶವಗಳನ್ನು ನೋಡಿದ್ದಾರೆ. ಒಬ್ಬರ ಕೈಗಳನ್ನು ಬೆನ್ನ ಹಿಂದೆ ಕಟ್ಟಲಾಗಿತ್ತು. ಎಲ್ಲರೂ ನಾಗರಿಕ ಉಡುಪು ಧರಿಸಿದ್ದರು ಎಂದು ವರದಿ ಮಾಡಿದೆ.
ನಾಗರಿಕರನ್ನು ಕೊಂದಿಲ್ಲ ಎಂದ ರಷ್ಯಾ
ಆದರೆ ರಷ್ಯಾ ಮಾತ್ರ ನಾವು ನಾಗರಿಕರನ್ನು ಕೊಂದಿಲ್ಲ ಎಂದು ಹೇಳಿಕೊಂಡಿದೆ. ರಷ್ಯಾ ಮಾತ್ರ ತಮ್ಮ ಸೇನೆ ನಾಗರಿಕರನ್ನು ಕೊಂದಿರುವ ಆರೋಪವನ್ನು ನಿರಾಕರಿಸಿದೆ. "ಕೀವ್ ಆಡಳಿತ ಮತ್ತು ಪಾಶ್ಚಿಮಾತ್ಯ ಮಾಧ್ಯಮದ ಮತ್ತೊಂದು ನಿರ್ಮಾಣವಾಗಿದೆ," ಎಂದು ಹೇಳಿದೆ. "ಈ ರಷ್ಯಾದ ಸಶಸ್ತ್ರ ಪಡೆಗಳ ನಿಯಂತ್ರಣದಲ್ಲಿದ್ದ ಸಮಯದಲ್ಲಿ, ಒಬ್ಬ ಸ್ಥಳೀಯ ನಿವಾಸಿಯೂ ಯಾವುದೇ ಹಿಂಸಾತ್ಮಕ ಕ್ರಮಗಳಿಂದ ಬಳಲುತ್ತಿಲ್ಲ," ಎಂದು ಮಾಸ್ಕೋದ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.












Click it and Unblock the Notifications