ಭಾರತಕ್ಕೆ ಬಲ ತುಂಬಿದ ‘ಬ್ರಿಕ್ಸ್’ ಶೃಂಗಸಭೆ: ರಷ್ಯಾ ಅಧ್ಯಕ್ಷ ಪುಟಿನ್ ಫುಲ್ ಖುಷ್!
ಪ್ರಪಂಚದ ಪ್ರತಿಯೊಂದು ದೇಶಕ್ಕೂ ಭಾರತ ಬೇಕೆ ಬೇಕು, ಭಾರತ ಇಲ್ಲದೆ ಬಹುಶಃ ಜಗತ್ತು ಬದುಕಿ ಉಳಿಯಲು ಸಾಧ್ಯವೇ ಇಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ಔಷಧ, ಆಹಾರ, ಅದಿರುಗಳು ಹೀಗೆ, ಕಚ್ಚಾ ವಸ್ತುಗಳಿಂದ ಹಿಡಿದು ಸಿದ್ಧ ವಸ್ತುಗಳ ತನಕ ಭಾರತ ಎಲ್ಲವನ್ನೂ ಜಗತ್ತಿಗೆ ನೀಡುತ್ತದೆ. ಇದೇ ಕಾರಣಕ್ಕೆ ಜಗತ್ತಿನ ಪ್ರತಿಯೊಂದು ದೇಶ ಕೂಡ ಭಾರತದ ಜೊತೆಗೆ ವ್ಯಾಪಾರ ಸಂಬಂಧ ಇಟ್ಟುಕೊಂಡು ಬಂದಿವೆ. ಹೀಗಿದ್ದಾಗ 'ಬ್ರಿಕ್ಸ್' ಶೃಂಗಸಭೆ ಭಾರತದ ಬಲವನ್ನು ಮತ್ತಷ್ಟು ಹೆಚ್ಚು ಮಾಡುವ ಜೊತೆಗೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯರಿಗೆ ದೊಡ್ಡ ಸಂದೇಶ ರವಾನೆ ಮಾಡಿದೆ.
ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಭಾರತದ ಅವಶ್ಯಕತೆ ತುಂಬಾನೇ ಹೆಚ್ಚಾಗಿದೆ. ಯಾಕೆ ಅಂದ್ರೆ ಒಂದು ಕಡೆ ರಷ್ಯಾ ಮೂಲಕ ಬರುತ್ತಿದ್ದ ತೈಲ & ಗ್ಯಾಸ್ ಖರೀದಿಯನ್ನು ಯುರೋಪ್ ಈಗ ಬ್ಯಾನ್ ಮಾಡಿದೆ. ಹಾಗೇ ರಷ್ಯಾ ಮೂಲದಿಂದ ಬರುತ್ತಿದ್ದ ವಸ್ತುಗಳ ಮೇಲೆ ಕೂಡ ನಿಷೇಧ ಹೇರಿ, ದೊಡ್ಡ ಇಕ್ಕಟ್ಟಿಗೆ ಸಿಲುಕಿದ್ದಾರೆ ಪಾಶ್ಚಿಮಾತ್ಯರು. ಹೀಗಿದ್ದಾಗ ಭಾರತ ಆ ತೈಲವನ್ನು ಖರೀದಿ ಮಾಡಿ ಮತ್ತೆ ಅದನ್ನೇ ಯುರೋಪ್ ದೇಶಗಳಿಗೆ ಮಾರುತ್ತಿದೆ ಎಂಬ ಮಾತು ಇದೆ. ಹೀಗಿದ್ದಾಗ ರಷ್ಯಾ ದೇಶಕ್ಕೆ ಭಾರತದ ಸ್ನೇಹ ಅನಿವಾರ್ಯ, ಹಾಗೇ ಭಾರತದ ನಂಬಿಕೆಯ ಗೆಳೆಯ ರಷ್ಯಾ ಆಗಿದೆ. ಹೀಗೆ ಎರಡು ದೇಶಗಳ ಮಧ್ಯೆ ಅತ್ಯುತ್ತಮ ಸ್ನೇಹ ಇದ್ದಾಗಲೇ 'ಬ್ರಿಕ್ಸ್' ಶೃಂಗಸಭೆ ಮತ್ತೊಂದು ಇತಿಹಾಸ ನಿರ್ಮಿಸಿದೆ.

ಭಾರತ & ಚೀನಾ ನಡುವೆ ದೋಸ್ತಿ!
ರಷ್ಯಾ ಅಂದುಕೊಂಡ ರೀತಿಯಲ್ಲೇ ಇದೀಗ ಭಾರತ & ಚೀನಾ ನಡುವೆ ಮಹತ್ವದ ಚರ್ಚೆ ನಡೆದಿದ್ದು, ಗಡಿಯಲ್ಲಿ ಇನ್ನು ಮುಂದೆ ಶಾಂತಿಯುತ ವಾತಾವರಣ ಕಾಪಾಡಲು ಎರಡೂ ದೇಶಗಳು ಒಪ್ಪಿಗೆಯನ್ನ ಸೂಚಿಸಿವೆ. ಇದು ರಷ್ಯಾಗೆ ಮಾತ್ರವಲ್ಲ ಇಡೀ ಏಷ್ಯಾ ಖಂಡಕ್ಕೆ ಖುಷಿ ನೀಡಿದೆ. ಯಾಕಂದ್ರೆ ಇದೀಗ ಭಾರತ & ಚೀನಾ ನಡುವೆ ಸಂಧಾನ ಏರ್ಪಟ್ಟ ಕಾರಣಕ್ಕೆ ಏಷ್ಯಾದ ಎರಡು ಬಹುದೊಡ್ಡ ದೇಶಗಳು ಒಗ್ಗಟ್ಟಿನಿಂದ ಇರಲಿವೆ. ಹೀಗಾಗಿ ಎರಡೂ ದೇಶಗಳ ಒಗ್ಗಟ್ಟು ಏಷ್ಯಾ ಭಾಗದಲ್ಲಿ ಹೊಸ ಮನ್ವಂತರ ಸೃಷ್ಟಿ ಮಾಡುವ ನಿರೀಕ್ಷೆ ಇದೆ. ಈ ಮಹತ್ವದ ಬೆಳವಣಿಗೆಗೆ ವೇದಿಕೆ ಒದಗಿಸಿದ್ದು 'ಬ್ರಿಕ್ಸ್' ಶೃಂಗಸಭೆ.
ರೂಪಾಯಿ ಲೆಕ್ಕದಲ್ಲೇ ವ್ಯವಹಾರ!
'ಬ್ರಿಕ್ಸ್' ಶೃಂಗಸಭೆಯ ಮತ್ತೊಂದು ವಿಶೇಷತೆ ಏನು ಅಂದ್ರೆ ಡಾಲರ್ ವಿರೋಧಿ ನೀತಿ. ಯಾಕಂದ್ರೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 'ಬ್ರಿಕ್ಸ್' ಒಕ್ಕೂಟ ಕಟ್ಟಿಕೊಳ್ಳಲು ಕಾರಣ ಅಮೆರಿಕ. ರಷ್ಯಾಗೆ & ಅಮೆರಿಕಗೆ ದ್ವೇಷ ಇದೆ. ಹೀಗಾಗಿ ಅಮೆರಿಕದ ಡಾಲರ್‌ಗೆ ಪರ್ಯಾಯವಾಗಿ 'ಬ್ರಿಕ್ಸ್' ದೇಶಗಳ ಜೊತೆ ಸೇರಿ ಬೇರೆಯದ್ದೇ ಕರೆನ್ಸಿ ಜಾರಿಗೆ ತರಲು ಪುಟಿನ್ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಇಷ್ಟಲ್ಲದೆ ಸ್ಥಳೀಯ ಕರೆನ್ಸಿಗಳ ಮೂಲಕವೇ ವ್ಯವಹಾರ ನಡೆಸಬೇಕು ಎಂಬ ಅಭಿಪ್ರಾಯ ಕೂಡ ರಷ್ಯಾ ಅಧ್ಯಕ್ಷ ಪುಟಿನ್ ಅವರದ್ದು. ಹೀಗಿದ್ದಾಗ ಭಾರತದ ರೂಪಾಯಿಗೆ ಮತ್ತಷ್ಟು ಬಲ ಬರಲಿದೆ.
ವಿವಿಧ ದೇಶಗಳಿಂದ ಹೂಡಿಕೆ ಬರಲಿದೆ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ದೇಶದಲ್ಲಿ 'ಬ್ರಿಕ್ಸ್' ಶೃಂಗಸಭೆಗೆ ತೆರಳಿದ್ದು, ಈ ಶೃಂಗಸಭೆ ಸಮಯದಲ್ಲೇ ಬೇರೆ ಬೇರೆ ದೇಶಗಳ ಜೊತೆಗೆ ಕೂಡ ಚರ್ಚೆ ನಡೆಸಿದ್ದಾರೆ. ಅಲ್ಲದೆ ಬೇರೆ, ಬೇರೆ ದೇಶಗಳಿಂದ ಹೂಡಿಕೆ ಸೆಳೆಯುವಲ್ಲಿ ಕೂಡ ಯಶಸ್ವಿ ಆಗುತ್ತಿದ್ದಾರೆ. ಇದು ದೂರದ ಪಾಶ್ಚಿಮಾತ್ಯ ದೇಶಗಳ ಕಣ್ಣು ಕೆಂಪಾಗಿಸಿದ್ದರೂ ಭಾರತ ಇದ್ಯಾವುದಕ್ಕೂ ಕೇರ್ ಮಾಡದೆ ಅಭಿವೃದ್ಧಿಯ ಕಡೆಗೆ ತನ್ನ ಹೆಜ್ಜೆ ಇಡುತ್ತಿದೆ.











Click it and Unblock the Notifications