ಬ್ರೆಜಿಲ್‌ಗೆ ಸಾಗಿಸುತ್ತಿದ್ದ ಪರಮಾಣು ಇಂಧನ ವಾಹನದ ಮೇಲೆ ಗುಂಡಿನ ದಾಳಿ
ರಿಯೋ ಡಿ ಜನೈರೊ, ಮಾರ್ಚ್ 20: ಬ್ರೆಜಿಲ್‌ನ ಎರಡು ಪರಮಾಣು ಇಂಧನ ಘಟಕಕ್ಕೆ ಯುರೇನಿಯಂ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆದಿದೆ.
ರಿಯೋ ಡಿ ಜನೈರೋ ಬಳಿ ಈ ಘಟನೆ ನಡೆದಿದೆ. ಪೊಲೀಸ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಯುರೇನಿಯಂ ನ್ನು ರಕ್ಷಿಸಿದ್ದಾರೆ.
ಟೌನ್ ಆಫ್ ಫ್ರೇಡ್ ದಾಟುವಾಗ ಪರಮಾಣು ಸಾಗಿಸುತ್ತಿದ್ದ ವಾಹನದ ಮೇಲೆ ಏಕಾ ಏಕಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಅವರು ತಲುಪುವ ಸ್ಥಳ ಇನ್ನೂ 30 ಕಿ.ಮೀ ದೂರವಿರುವಾಗ ದಾಳಿ ನಡೆದಿದೆ.

ದಾಳಿ ನಡೆದ ಬಳಿಕ ವಾಹನವನ್ನು ಹಿಂದಕ್ಕೆ ಕಳುಹಿಸಲಾಗಿದೆ. ಯಾರಿಗೂ ಯಾವುದೇ ಅಪಾಯವಾಗಿಲ್ಲ. ಪೊಲೀಸ್ ಎಸ್ಕಾರ್ಟ್ ವಾಹನವು ಪರಮಾಣು ವಾಹನ ಹಿಂದಿರುವಾಗ ಎದುರುಗಡೆಯಿಂದ ಶಸ್ತ್ರಾಸ್ತ್ರಗಳನ್ನು ಹೊಂದಿದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.












Click it and Unblock the Notifications