ಕ್ಯಾಟ್ ವಾಕ್ ವೇಳೆಯೇ 26 ವರ್ಷದ ಮಾಡೆಲ್ ಕುಸಿದು ಬಿದ್ದು ಸಾವು
ಬ್ರೆಜಿಲ್ ನ ಮಾಡೆಲ್ ವೊಬ್ಬರು ಶನಿವಾರ ಕ್ಯಾಟ್ ವಾಕ್ ನಡೆಸುವ ವೇಳೆ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ. ಸಾವೋ ಪೌಲೋ ಫ್ಯಾಷನ್ ವೀಕ್ ನ ಕೊನೆ ದಿನದಂದು ಈ ಘಟನೆ ಸಂಭವಿಸಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಟೇಲ್ಸ್ ಸೋರ್ಸ್ ಮೃತ ಮಾಡೆಲ್. ದಿಢೀರನೆ ಅಸ್ವಸ್ಥರಾದ ಅವರು, ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಪ್ಪತ್ತಾರು ವರ್ಷದ ಮಾಡೆಲ್ ದಿಢೀರನೆ ಅಸ್ವಸ್ಥರಾದ ಹಿನ್ನೆಲೆಯಲ್ಲಿ ವೈದ್ಯಕೀಯ ನೆರವು ನೀಡಲು ತಕ್ಷಣ ಮುಂದಾದರು. ಈ ವೇಳೆ ಸ್ಥಳದಲ್ಲಿ ಇದ್ದವರು ಆತಂಕಕ್ಕೆ ಒಳಗಾದರು. ಮಾಡೆಲ್ ಅನ್ನು ಕೂಡಲೇ ಅಸ್ಪತ್ರೆಗೆ ಕರೆದೊಯ್ಯಲಾಯಿತು. ಅದರೆ ಅಲ್ಲಿ ಆತ ಮೃತಪಟ್ಟಿರುವುದಾಗಿ ಘೋಷಣೆ ಮಾಡಲಾಯಿತು.

ನಾವು ಟೇಲ್ಸ್ ಕುಟುಂಬದವರಿಗೆ ತೀವ್ರ ಸಂತಾಪವನ್ನು ಸೂಚಿಸುತ್ತೇವೆ. ಓಕ್ಸಾ ತಂಡವು ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದೆ. ಸೋರ್ಸ್ ಸಾವಿನಿಂದ ತೀವ್ರ ಆಘಾತವಾಗಿದೆ ಎಂದು ಹೇಳಿಕೊಂಡಿದೆ. ಸೋರ್ಸ್ ಅವರು ಬೇಸ್ ಎಂಜಿಟಿ ಮಾಡೆಲಿಂಗ್ ಏಜೆನ್ಸಿ ಜತೆಗೆ ಸಹಿ ಮಾಡಿದ್ದರು.












Click it and Unblock the Notifications