ಬ್ರೆಜಿಲ್ ಉಪಾಧ್ಯಕ್ಷ ಹ್ಯಾಮಿಲ್ಟನ್‌ಗೂ ಕೊರೊನಾ ಸೋಂಕು

ಬ್ರೆಜಿಲ್‌ನ ಉಪಾಧ್ಯಕ್ಷ ಹ್ಯಾಮಿಲ್ಟನ್ ಮೌರಾವ್ ಅವರಿಗೂ ಕೊರೊನಾ ಸೋಂಕು ತಗುಲಿದೆ, ಕೆಲವು ದಿನಗಳ ಹಿಂದಷ್ಟೇ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಅವರಿಗೂ ಕೂಡ ಸೋಂಕು ತಗುಲಿತ್ತು.

ಮೌರಾವ್ ಭಾನುವಾರ ಮಧ್ಯಾಹ್ನ ಸೋಂಕು ಪರೀಕ್ಷೆ ಗೆ ಒಳಗಾಗಿದ್ದಾರೆ . ಅವರ ಅಧಿಕೃತ ನಿವಾಸವಾದ ಜಬೀರು ಅರಮನೆಯಲ್ಲಿ ಪ್ರತ್ಯೇಕವಾಗಿ ಉಳಿದಿದ್ದಾರೆ ಎಂದು ಉಪಾಧ್ಯಕ್ಷರ ಕಚೇರಿ ಸೋಮವಾರ ದಿ ವೆಸ್ಟ್ ಆಸ್ಟ್ರೇಲಿಯಾ ಉಲ್ಲೇಖಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ಅವರು ಕೊರೊನ ಪರೀಕ್ಷೆಗೆ ಒಳಗಾಗಿದ್ದು ಸೋಂಕು ಇರುವುದು ವೈದ್ಯಕೀಯ ವರದಿಗಳಿಂದ ಖಚಿತವಾಗಿದೆ. ಸದ್ಯ ಅವರು ಗೃಹಬಂಧನದಲ್ಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Brazil Vice President Tests Positive For Coronavirus

ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಬ್ರೆಜಿಲ್ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಈವರೆಗೆ ಸಾವಿನ ಸಂಖ್ಯೆ 191,130 ಕ್ಕಿಂತ ಹೆಚ್ಚಿದೆ. ದೇಶದಲ್ಲಿ 6.5 ದಶಲಕ್ಷಕ್ಕೂ ಹೆಚ್ಚು ಜನರು ಕರೋನ ಸೋಂಕಿನಿಂದ ಈವರೆಗೆ ಚೇತರಿಸಿಕೊಂಡಿದ್ದಾರೆ.

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿಗೆ ಕಳದೆ ಜುಲೈನಲ್ಲಿ ಕೊರೊನ ಸೋಂಕು ತಗುಲಿತ್ತು ಒಂದೆರಡು ವಾರಗಳವರೆಗೆ ಸಂಪರ್ಕತಡೆ ಹೊಂದಿದ್ದ ನಂತರ, ಬಲಪಂಥೀಯ ಅಧ್ಯಕ್ಷರು - ಮಾಸ್ಕ್ ಧರಿಸುವ ನಿಯಮಗಳನ್ನು ಆಗಾಗ ಧಿಕ್ಕರಿಸಿ, ಕೆಲಸಕ್ಕೆ ಮರಳಿದ ಪರಿಣಾಮ ಬ್ರೆಜಿಲ್ ಅನೇಕ ಹಿರಿಯ ಅಧಿಕಾರಿಗಳು ಕೊರೊನಾ ಸೋಂಕಿಗೆ ತುತ್ತಾಗಲು ಕಾರಣರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+