ಭಾರತದಿಂದ ದುಬಾರಿ ದುಡ್ಡಿನ ಕೊವ್ಯಾಕ್ಸಿನ್ ಲಸಿಕೆ ಖರೀದಿಸಿದ್ದೇಕೆ ಬ್ರೆಜಿಲ್ ಅಧ್ಯಕ್ಷ?

ನವದೆಹಲಿ, ಜೂನ್ 28: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಇಡೀ ಜಗತ್ತು ತತ್ತರಿಸಿ ಹೋಗಿದೆ. ಎಲ್ಲ ರಾಷ್ಟ್ರಗಳಲ್ಲಿ ಕೊವಿಡ್-19 ಲಸಿಕೆಗಳ ಸಂಶೋಧನೆ, ಅಧ್ಯಯನ, ಅನುಮೋದನೆ ಹಾಗೂ ಉತ್ಪಾದನೆಯದ್ದೇ ಸದ್ದು ಮತ್ತು ಸುದ್ದಿ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಭಾರತದಲ್ಲಿ ಸಂಶೋಧಿಸಿದ ಲಸಿಕೆ ಬ್ರೆಜಿಲ್ ಅಧ್ಯಕ್ಷರ ಕುರ್ಚಿ ಅಲುಗಾಡುವಂತೆ ಮಾಡಿದೆ.

ಬ್ರೆಜಿಲ್ ಅಧ್ಯಕ್ಷ ಜೈರ್ ಜೈರ್ ಬೋಲ್ಸನಾರೋ ಕೊವಿಡ್-19 ಲಸಿಕೆ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆ ಖರೀದಿಗೆ ದುಬಾರಿ ಬೆಲೆ ನೀಡಿದ್ದಾರೆ ಎಂಬ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಜಗತ್ತಿನಲ್ಲೇ ಮೂರನೇ ದುಬಾರಿ ಕೊರೊನಾವೈರಸ್ ಲಸಿಕೆ ಎನಿಸಿರುವ ಕೊವ್ಯಾಕ್ಸಿನ್ ಖರೀದಿಯಲ್ಲಿ ಅಕ್ರಮ ನಡೆದಿದೆ. ಭಾರತೀಯ ಕಂಪನಿ ಜೊತೆಗಿನ ಒಪ್ಪಂದದ ಬಗ್ಗೆ ಹಲವು ಪ್ರಶ್ನೆಗಳ ಜೊತೆಗೆ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಬ್ರೆಜಿಲ್ ನಲ್ಲಿ ರಾತ್ರೋರಾತ್ರಿ 'Covaxin Gate' ಎಂಬ ವಿಚಾರ ಟ್ರೆಂಡ್ ಅನ್ನು ಹುಟ್ಟು ಹಾಕಿತು. ಕೊವ್ಯಾಕ್ಸಿನ್ ಲಸಿಕೆ ಹಾಗೂ ಬ್ರೆಜಿಲ್ ಅಧ್ಯಕ್ಷರ ಸುತ್ತಲೂ ಸುತ್ತಿಕೊಂಡಿರುವ ಭ್ರಷ್ಟಾಚಾರ ಆರೋಪಗಳ ಕುರಿತು ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.

ಸಂಸದೀಯ ಆಯೋಗದಿಂದ ವಿಚಾರಣೆ

ಸಂಸದೀಯ ಆಯೋಗದಿಂದ ವಿಚಾರಣೆ

ಬ್ರೆಜಿಲ್ ಸರ್ಕಾರವು ಕಡಲಾಚೆ ಇರುವ ಭಾರತದಿಂದ ಕೊವ್ಯಾಕ್ಸಿನ್ ಲಸಿಕೆಯನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ತೀರ್ಮಾನಕ್ಕೆ ಸಂಬಂಧಿಸಿದಂತೆ ಸಂಸದೀಯ ಆಯೋಗದ ಎದುರು ವಿಚಾರಣೆಯನ್ನು ಎದುರಿಸಿತು. ಈ ವಿಚಾರಣೆ ನಡೆದ ವೈಖರಿಯನ್ನು ಇಡೀ ದೇಶವೇ ಸಾಮಾಜಿಕ ಜಾಲತಾಣಗಳ ಮುಖೇನ ವೀಕ್ಷಿಸಿತು.

ಬ್ರೆಜಿಲ್ ನಲ್ಲಿ ಏನಿದು ಭ್ರಷ್ಟಾಚಾರದ ಆರೋಪ?

ಬ್ರೆಜಿಲ್ ನಲ್ಲಿ ಏನಿದು ಭ್ರಷ್ಟಾಚಾರದ ಆರೋಪ?

ಗುರುವಾರ ಬ್ರೆಜಿಲ್ ಫೆಡರಲ್ ಡೆಪ್ಯೂಟಿ ಲೂಯಿಸ್ ಮಿರಿಂಡಾ ಹಾಗೂ ಆತನ ಸಹೋದರ ಹಾಗೂ ಆರೋಗ್ಯ ಇಲಾಖೆಯ ಆಮದು ವಿಭಾಗದ ಮುಖ್ಯಸ್ಥ ರಿಕಾರ್ಡೋ ಆರೋಪದ ಬೆನ್ನಲ್ಲೇ ವಿಷಯ ಚರ್ಚೆಗೆ ಬಂದಿದೆ. "ಕಳೆದ ಮಾರ್ಚ್ 20ರಂದು ನಾವು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಅನ್ನು ಭೇಟಿ ಮಾಡಿದ್ದೆವು. ಅಂದು ಲಸಿಕೆ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಂಗಾಪೂರ್ ಮೂಲದ ಮಾಡಿಸನ್ ಬಯೋಟೆಕ್ ಕಂಪನಿಗೆ 35 ದಶಲಕ್ಷ ಡಾಲರ್ ಹಣವನ್ನು ಮುಂಗಡವಾಗಿ ನೀಡುವಂತೆ ಪ್ರಸ್ತಾಪಿಸಿದೆವು.

ಭಾರತ್ ಬಯೋಟೆಕ್ ಕಂಪನಿ ಜೊತೆ 2 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ, ಸಿಂಗಾಪೂರ್ ಮೂಲದ ಮಾಡಿಸನ್ ಬಯೋಟೆಕ್ ಈ ಒಪ್ಪಂದದ ಭಾಗವಾಗಿಲ್ಲ. ಭಾರತೀಯ ಕಂಪನಿ ಜೊತೆಗಿನ ಲಸಿಕೆ ಖರೀದಿ ಒಪ್ಪಂದದ ಒಟ್ಟು ಮೌಲ್ಯ 300 ದಶಲಕ್ಷ ಡಾಲರ್ ಆಗಲಿದ್ದು, ಅದರಲ್ಲಿ 35 ದಶಲಕ್ಷ ಕೋಟಿ ಡಾಲರ್ ಹಣವನ್ನು ಮುಂಗಡವಾಗಿ ಅಂಗಸಂಸ್ಥೆ ಆಗಿರುವ ಮಾಡಿಸನ್ ಬಯೋಟೆಕ್ ಕಂಪನಿಗೆ ನೀಡುವಂತೆ ತಿಳಿಸಿದ್ದೆವು," ಎಂದು ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.

ಕೊವ್ಯಾಕ್ಸಿನ್ ಲಸಿಕೆ ಒಂದು ಡೋಸ್ 15 ಡಾಲರ್

ಕೊವ್ಯಾಕ್ಸಿನ್ ಲಸಿಕೆ ಒಂದು ಡೋಸ್ 15 ಡಾಲರ್

ಬ್ರೆಜಿಲ್ ಪ್ರಜೆಗಳಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಬೇಕು ಎಂಬ ದೃಷ್ಟಿಯಲ್ಲಿ ಜೈರ್ ಬೋಲ್ಸನಾರೋ ಮಾಡಿಕೊಂಡಿರುವ ಒಪ್ಪಂದವು ಹಗರಣವಾಗಿ ರೂಪ ತೆಳೆದಿದೆ. ಕೇವಲ ಒಂದು ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ 15 ಡಾಲರ್ ನೀಡುವ ಅಗತ್ಯವಿತ್ತೇ ಎಂಬ ಪ್ರಶ್ನೆ ದೇಶವ್ಯಾಪಿ ಕೇಳಿ ಬರುತ್ತಿದೆ. ಬ್ರೆಜಿಲ್ ಅಧ್ಯಕ್ಷರ ಒಂದೇ ಒಂದು ನಿರ್ಧಾರದ ದೇಶದ ಮಾಧ್ಯಮಗಳಿಗೆ ದಿನಪೂರ್ತಿ ಆಹಾರವಾಗಿ ಬಿಟ್ಟಿದೆ.

"ಕೊವ್ಯಾಕ್ಸಿನ್ ಗೇಟ್" ಸುದ್ದಿಯೇ ಟ್ರೆಂಡ್ ಸೃಷ್ಟಿಸಿತು

ಕೊರೊನಾವೈರಸ್ ಲಸಿಕೆ ಖರೀದಿಗೆ ಸಂಬಂಧಿಸಿದಂತೆ ದೇಶೀಯ ಮಾಧ್ಯಮಗಳು "ಕೊವ್ಯಾಕ್ನಿಸ್ ಗೇಟ್" ಎಂಬ ಹೆಸರಿನಲ್ಲಿ ಸ್ಫೋಟ ಸುದ್ದಿಗಳನ್ನು ಪ್ರಸಾರ ಮಾಡುವುದಕ್ಕೆ ಶುರುವಿಟ್ಟುಕೊಂಡವು. ಸಾಮಾಜಿಕ ಜಾಲತಾಣಗಳಲ್ಲೂ ಕೊವ್ಯಾಕ್ಸಿನ್ ಗೇಟ್ ಎನ್ನುವುದು ಹೊಸ ಟ್ರೆಂಡ್ ಸೃಷ್ಟಿಸಿತು. ಕೆಲವು ಸೆನೆಟರ್‌ಗಳು ಇದನ್ನು "ಪ್ಯಾಸೇಜಸ್ ಟು ಇಂಡಿಯಾ" ಎಂದೂ ವ್ಯಾಖ್ಯಾನಿಸಿದರು. ದೇಶದ 10 ಜನರಲ್ಲಿ ಎಂಟು ಮಂದಿಯ ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಕುತೂಹಲದಲ್ಲಿ ಸಂಸದೀಯ ಆಯೋಗದ ವಿಚಾರಣೆಗೆ ಬೆಂಬಲ ವ್ಯಕ್ತಪಡಿಸಿದರು.

ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ?

ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ?

ತೆರಿಗೆ ವಂಚಿಸುವುದಕ್ಕಾಗಿ ಮಾಡಿಸನ್ ಬಯೋಟೆಕ್ ಸರಕುಗಳ ಪಟ್ಟಿ ಮಾಡಿರುವುದೇ ಸಾಕ್ಷ್ಯ ಎಂದು ಕಳೆದ ವಾರ ಕೆಲವು ಸೆನೆಟರ್ ಗಳು ದೂಷಿಸಿದ್ದರು. ಅಲ್ಲದೇ, ಬ್ರೆಜಿಲ್ ಸರ್ಕಾರ ಹಾಗೂ ಭಾರತೀಯ ಮೂಲದ ಭಾರತ್ ಬಯೋಟೆಕ್ ಕಂಪನಿ ನಡುವೆ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ನಡೆದಿರುವ ಬಗ್ಗೆ ಜನಪ್ರತಿನಿಧಿಗಳು ಆರೋಪಿಸಿದ್ದರು.

ಮಿರಿಂಡಾ ಸಹೋದರರ ವಿಚಾರಣೆ ನಡೆಸಿದ ಸಂಸದೀಯ ಆಯೋಗ

ಮಿರಿಂಡಾ ಸಹೋದರರ ವಿಚಾರಣೆ ನಡೆಸಿದ ಸಂಸದೀಯ ಆಯೋಗ

ಕಳೆದ ಶುಕ್ರವಾರ ತುರ್ತು ಸೇವಾ ಕಾರಿಡಾರ್ ದಾಟಿಕೊಂಡು ಸಂಸದೀಯ ಆಯೋಗದ ಎದುರಿಗೆ ಮೊದಲು ಆರೋಗ್ಯ ಅಧಿಕಾರಿ ರಿಕಾರ್ಡೊ ಮಿರಿಂಡಾ ವಿಚಾರಣೆಗೆ ಹಾಜರಾದರು. ನೀಲಿ ಬಣ್ಣದ ಬಟ್ಟೆ ಧರಿಸಿ ಬಂದಿದ್ದ ರಿಕಾರ್ಡೋ, ಆಯಾಸದಿಂದ ಬೆವತಿದ್ದರು. ಆಯೋಗದ ಅಧ್ಯಕ್ಷ ಓಮರ್ ಅಜಿಜ್ ಪ್ರಶ್ನೆ ಹಾಗೂ ಮಿರಿಂಡಾ ಸಹೋದರರ ಉತ್ತರದ ನಡುವೆ ಸಭೆಯಲ್ಲಿ ಆಗಾಗ ಉದ್ವಿಗ್ನತೆ ಸೃಷ್ಟಿಯಾಗುತ್ತಿತ್ತು.

ಆಯೋಗದ ಎದುರಿಗೆ ಪಿಪಿಟಿ ಪ್ರದರ್ಶಿಸಿದ ಸಹೋದರರು

ಆಯೋಗದ ಎದುರಿಗೆ ಪಿಪಿಟಿ ಪ್ರದರ್ಶಿಸಿದ ಸಹೋದರರು

ಕೊರೊನಾವೈರಸ್ ಲಸಿಕೆ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಿದ ಸರಕು ಪಟ್ಟಿ, ಈ-ಮೇಲ್ ಸಂದೇಶ, ವಾಟ್ಸಾಪ್ ಸಂದೇಶಗಳನ್ನು ಒಳಗೊಂಡಂತೆ ಎಲ್ಲ ಮಾಹಿತಿಯನ್ನು ಸೇರಿಸಿದ ಪವರ್ ಪಾಯಿಂಟ್ ಅನ್ನು ಆಯೋಗದ ಎದುರಿಗೆ ಮಿರಿಂಡಾ ಸಹೋದರರು ಪ್ರದರ್ಶಿಸಿದರು. ಮೊದಲು ತಾವು ಚರ್ಚಿಸಿದ ನಂತರವೇ ಅಧ್ಯಕ್ಷರ ಎದುರಿಗೆ ಈ ಬಗ್ಗೆ ಪ್ರಸ್ತಾಪಿಸಿದೆವು ಎಂಬುದಾಗಿ ಹೇಳಿದ್ದಾರೆ. "ಸಿಂಗಾಪೂರ್ ಅಂಗಸಂಸ್ಥೆ"ಯು ಒಪ್ಪಂದಕ್ಕೆ ಸಂಬಂಧಿಸಿರುವ ಅಧಿಕೃತ ಕಂಪನಿಯಲ್ಲ ಎಂದು ರಿಕಾರ್ಡೋ ಮಿರಿಂಡಾ ಒತ್ತಿ ಹೇಳಿದ್ದಾರೆ.

ಇನ್ನೊಂದು ಕಡೆ "ಸಾರ್ವಜನಿಕ ಹಿತಾಸಕ್ತಿ"ಗೆ ವಿರುದ್ಧವಾಗಿ ನಡೆದುಕೊಂಡ ಅಧ್ಯಕ್ಷರ ವಿರುದ್ಧ ಲೂಯಿಸ್ ಮಿರಿಂಡಾ ದೂರು ದಾಖಲಿಸಿದ್ದಾರೆ. ಈ ವಿಚಾರಣೆ ವೇಳೆ ಲೂಯಿಸ್ ಮಿರಿಂಡಾ ಮಾಡಿರುವ ಆರೋಪವು ಅಧ್ಯಕ್ಷ ಜೈರಿ ಬೋಲ್ಸನಾರೋ ರನ್ನು ಮತ್ತಷ್ಟು ಸಂದಿಗ್ಘತೆಗೆ ಸಿಲುಕಿಸಿದೆ.

ಜೈರ್ ಬೋಲ್ಸನಾರೋ ಜೊತೆ ಮಿರಿಂಡಾ ಬ್ರದರ್ಸ್ ಸಭೆ

ಜೈರ್ ಬೋಲ್ಸನಾರೋ ಜೊತೆ ಮಿರಿಂಡಾ ಬ್ರದರ್ಸ್ ಸಭೆ

ಏಪ್ರಿಲ್ ತಿಂಗಳಿನಿಂದ ನಡೆಯುತ್ತಿರುವ ಸಂಸದೀಯ ಆಯೋಗದ ಸಭೆಯು ನಿರೀಕ್ಷಿಸುತ್ತಿದ್ದ ಅಂಶವೊಂದು ಶುಕ್ರವಾರದ ವಿಚಾರಣೆ ವೇಳೆ ಲಭ್ಯವಾಯಿತು. ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಮತ್ತು ಮಿರಿಂಡಾ ಸಹೋದರರ ನಡುವೆ ಸಭೆಯ ಗೌಪ್ಯತೆಯಿಂದ ನಾಟಕೀಯ ಬೆಳವಣಿಗೆಯೊಂದು ನಡೆಯಿತು. ಕೊವ್ಯಾಕ್ಸಿನ್ ಲಸಿಕೆ ಹಗರಣದಲ್ಲಿ ರಾಜಕಾರಣಿಯೊಬ್ಬರು ಶಾಮೀಲಾಗಿರುವ ಬಗ್ಗೆ ಶಂಕಿಸಲಾಗಿತ್ತು. ಈ ರಾಜಕಾರಣಿಯ ಹೆಸರು ಬಹಿರಂಗಪಡಿಸುವಂತೆ ಸನೆಟರ್ ಆಗ್ರಹಿಸುತ್ತಿದ್ದರು. ಶುಕ್ರವಾರ ನಡುಗುವ ಧ್ವನಿಯಲ್ಲಿ ಲೂಯಿಸ್ ಮಿರಿಂಡಾ ಆ ರಾಜಕಾರಣಿ ಹೆಸರು ಬಹಿರಂಗಪಡಿಸಿದ್ದು, ರಿಕಾರ್ಡೋ ಬ್ಯಾರೋಸ್ ಎಂದು ಹೇಳಿದರು. "ಫೆಡರಲ್ ಛೇಂಬರ್ ಆಫ್ ಡೆಪ್ಯೂಟಿಸ್ ಮುಖಂಡ ರಿಕಾರ್ಡೋ ಬ್ಯಾರೋಸ್ ಹೆಸರನ್ನು ಅಧ್ಯಕ್ಷರೇ ಉಲ್ಲೇಖಿಸಿದ್ದರು," ಎಂದು ಆಯೋಗದ ಎದುರಿಗೆ ಲೂಯಿಸ್ ಮಿರಿಂಡಾ ಹೇಳಿದ್ದಾರೆ.

ರಿಕಾರ್ಡೋ ಬ್ಯಾರೋಸ್ ಯಾರು?

ರಿಕಾರ್ಡೋ ಬ್ಯಾರೋಸ್ ಯಾರು?

ರಿಕಾರ್ಡೋ ಬ್ಯಾರೋಸ್ ಬ್ರೆಜಿಲ್ ಮಾಜಿ ಆರೋಗ್ಯ ಸಚಿವರಾಗಿದ್ದರು. ಅಲ್ಲದೇ ಯಾವುದೇ ಕೊರೊನಾವೈರಸ್ ಲಸಿಕೆಯ ಆಮದು ಮತ್ತು ವಿತರಣೆಗೆ ಸಂಬಂಧಿಸಿದಂತೆ ಹಣ ನೀಡುವುದರಲ್ಲಿ ಮೇಲ್ವಿಚಾರಕರಾಗಿದ್ದಾರೆ. ಸ್ವದೇಶದ ಔಷಧೀಯ ನಿಯಂತ್ರಣ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ಕೊವ್ಯಾಕ್ಸಿನ್ ಲಸಿಕೆಯನ್ನು ಆಮದು ಮಾಡಿಕೊಳ್ಳುವುದರಲ್ಲಿ ಇದೇ ರಿಕಾರ್ಡೋ ಬ್ಯಾರೋಸ್ ಪಾತ್ರ ಮುಖ್ಯವಾಗಿದೆ ಎಂದು ಆರೋಪಿಸಲಾಗಿದೆ.

ಬ್ರೆಜಿಲ್ ಅಧ್ಯಕ್ಷರ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ದೂರು

ಬ್ರೆಜಿಲ್ ಅಧ್ಯಕ್ಷರ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ದೂರು

ಸಂಸದೀಯ ಆಯೋಗದ ವಿಚಾರಣೆ ಸಂದರ್ಭದಲ್ಲಿ ಫೆಡರಲ್ ಡೆಪ್ಯೂಟಿಗಳು ನೀಡಿರುವ ಹೇಳಿಕೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸಾನಾರೋ ಕೊರಳಿಗೆ ಸುತ್ತಿಕೊಂಡಿತು. ಶುಕ್ರವಾರ ತಡರಾತ್ರಿವರೆಗೂ ನಡೆದ ವಿಚಾರಣೆ ನಂತರದಲ್ಲಿ ಸೆನೆಟರ್ ರೆನಾನ್ ಕಾಲ್ ಹೆರೋಸ್, ಹಗರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದ ಹಾಗೂ ತನಿಖೆಗೆ ಆದೇಶಿಸದ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು.

ಇದೊಂದು ಐತಿಹಾಸಿಕ ದಿನ ಎಂದು ಕರೆದ ಸೆನೆಟರ್ ರೊಡ್ರಿಗುಸಸ್, "ಇಂದು ಅಪರಾಧ ನಡೆದಿರುವ ಎಲ್ಲ ಆಯಾಮಗಳಲ್ಲಿ ಅಧ್ಯಕ್ಷ ಜೈಲ್ ಬೋಲ್ಸನಾರ್ ಪಾತ್ರ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವರು ತನಿಖೆಗೆ ಅಗತ್ಯವಿರುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಅಲ್ಲದೇ ಅಪರಾಧವನ್ನು ತಡೆಯುವುದಕ್ಕೆ ಅಗತ್ಯವಾಗಿರುವ ಕ್ರಮಗಳನ್ನೂ ಸಹ ತೆಗೆದುಕೊಳ್ಳಲಿಲ್ಲ. ಈ ಕುರಿತು ನಾವು ಸುಪ್ರೀಂಕೋರ್ಟ್ ಗೆ ದೂರು ಸಲ್ಲಿಸುತ್ತೇವೆ," ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+