ಫಲ ನೀಡಿದ ಬ್ರೆಕ್ಸಿಟ್ ವಚನ, ಬೋರಿಸ್ ಜಾನ್ಸನ್‌ಗೆ ಐತಿಹಾಸಿಕ ಬಹುಮತ

ಬ್ರಿಟನ್, ಡಿಸೆಂಬರ್ 13: 'ಗೆಟ್ ಬ್ರೆಕ್ಸಿಟ್ ಡನ್' ಎಂದು ಪ್ರಚಾರ ನಡೆಸಿದ್ದ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್‌ ಗೆ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಐತಿಹಾಸಿಕ ಜಯ ದೊರೆತಿದೆ.

ಬ್ರಿಟನ್ ಸಂಸತ್‌ನ 650 ಸೀಟುಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬರೋಬ್ಬರಿ 364 ಸೀಟುಗಳನ್ನು ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್‌ ಪಕ್ಷವು ಗೆದ್ದುಕೊಂಡಿದೆ. 1987 ರ ನಂತರ ಇದೇ ಮೊದಲ ಬಾರಿಗೆ ಪಕ್ಷವೊಂದು ಇಷ್ಟು ದೊಡ್ಡ ಮಟ್ಟದ ಜಯ ಗಳಿಸಿದೆ.

ಶೀಘ್ರವಾಗಿ ಬ್ರೆಕ್ಸಿಟ್ ಪ್ರಕ್ರಿಯೆಯನ್ನು ಮುಗಿಸಿ, ಜನವರಿ 31 ರ ಒಳಗಾಗಿ ಬ್ರಿಟನ್ ಅನ್ನು ಯುರೋಪಿಯನ್ ಒಕ್ಕೂಟದಿಂದ ಹೊರಕ್ಕೆ ತರುವ ಆಶ್ವಾಸನೆಯನ್ನು ಬೋರಿಸ್ ಚುನಾವಣಾ ಪ್ರಚಾರದ ವೇಳೆ ನೀಡಿದ್ದರು. ಅವರ ಬ್ರೆಕ್ಸಿಟ್ ಭರವಸೆಯಿಂದಾಗಿಯೇ ಇಷ್ಟು ದೊಡ್ಡ ಜಯ ಲಭಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Boris Johnson Won The Britain Election By Huge Margin

ಫಲಿತಾಂಶದ ಬಳಿಕ ಮಾತನಾಡಿದ ಬೋರಿಸ್, 'ಬ್ರೆಕ್ಸಿಟ್ ಪ್ರಕ್ರಿಯೆ ಪೂರ್ಣಗೊಳಿಸಲು ಈ ಮಹಾತೀರ್ಪು ಬಂದಿದ್ದು, ಬ್ರಿಟೀಷ್ ಜನರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಗೆ ಬರಬೇಕೆಂದು ಬ್ರಿಟೀಷ್ ಜನ ಮತಹಾಕಿ ಮೂರೂವರೆ ವರ್ಷವಾಗಿದೆ. ಈವರೆಗೆ ಬ್ರೆಕ್ಸಿಟ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆದರೆ ಹೊಸ ಸರ್ಕಾರವು ಮುಂದಿನ ವರ್ಷದ ಜನವರಿ ಮುಗಿಯುವ ಮುನ್ನಾ ಬ್ರಿಕ್ಸಿಟ್ ಪ್ರಕ್ರಿಯೆ ಮುಗಿಸಿ ಒಕ್ಕೂಟದಿಂದ ಹೊರಬರುವುದಾಗಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+