ಸೌದಿಯಲ್ಲಿ ಬಾಂಬ್ ಸ್ಫೋಟ, ಶುಕ್ರವಾರ ಮಸೀದಿಯಲ್ಲಿ ರಕ್ತದೋಕುಳಿ

ರಿಯಾದ್, ಮೇ. 22 : ಶುಕ್ರವಾರ ನಮಾಜ್ ನಡೆಯುತ್ತಿದ್ದಾಗಲೇ ಸೌದಿ ಅರೇಬಿಯಾದ ಮಸೀದಿಯೊಂದರಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದ್ದು, ಹಲವಾರು ಜನರು ಸತ್ತಿರಬಹುದು ಎಂದು ಶಂಕಿಸಲಾಗಿದೆ.

ಪಶ್ಚಿಮ ಸೌದಿ ಅರೇಬಿಯಾದ ಅಲ್-ಕತಿಫ್ ಪ್ರಾಂತ್ಯದಲ್ಲಿರುವ ಅಲ್-ಕುದಾಯ್ ಗ್ರಾಮದಲ್ಲಿ ಶುಕ್ರವಾರ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಆಂತರಿಕ ವ್ಯವಹಾರ ಮಂತ್ರಾಲಯ ತಿಳಿಸಿದೆಯೆಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

ಮಸೀದಿಯ ಹೆಸರನ್ನು ಏಜೆನ್ಸಿ ತಿಳಿಸದಿದ್ದರೂ, ಮಸೀದಿ ಹೆಸರು ಶೀಟ್ ಇಮಾಮ್ ಅಲಿ ಎಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಶುಕ್ರವಾರ ನೂರಾರು ಶಿಯಾ ಮುಸ್ಲಿಂರು ಜಮಾಗೊಂಡ ಸಂದರ್ಭದಲ್ಲಿಯೇ ಸ್ಫೋಟ ಸಂಭವಿಸಿದೆ.

Bomb blast in mosque in a village in Saudi Arabia, several dead

ಮಸೀದಿಯ ಗೋಡೆ ಬಿರುಕು ಬಿಟ್ಟಿದೆ, ಕಿಟಕಿಯ ಗಾಜುಗಳು ಚೂರು ಚೂರಾಗಿವೆ, ದೇಹಗಳು ಎಲ್ಲೆಂದರಲ್ಲಿ ಬಿದ್ದಿವೆ. ಎಷ್ಟು ಜನರು ಮೃತರಾಗಿದ್ದಾರೆಂದು ಖಚಿತವಾಗಿ ತಿಳಿದುಬಂದಿಲ್ಲ. ಒಂದು ಮಾಹಿತಿಯ ಪ್ರಕಾರ ಕನಿಷ್ಠ ಮೂವತ್ತು ಜನರು ಸಾವಿಗೀಡಾಗಿರಬಹುದು.

ಪೊಲೀಸರು ಮಸೀದಿಯನ್ನು ಸುತ್ತುವರಿದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ಭರದಿಂದ ಸಾಗಿದೆ. ಸುನ್ನಿ ಭಯೋತ್ಪಾದಕ ಸಂಘಟನೆಯ ಆತ್ಮಾಹುತಿ ಪಡೆಯ ಕೈವಾಡ ಈ ಘಟನೆಯ ಹಿಂದಿರಬಹುದು ಎಂದು ಶಂಕಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+