ಆಶ್ಚರ್ಯವಾದರೂ ನಿಜ:ಮೋದಿಗೆ ಪಾಕ್ ವರ್ತಕರ ಬೆಂಬಲ

ನವದೆಹಲಿ, ಡಿ 4: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು 'ಕೋಮುವಾದಿ' ಎಂದು ಇತರ ಪಕ್ಷಗಳು ಜರಿಯುತ್ತಿರುವ ಬೆನ್ನಲ್ಲೇ ಭಾರತದ ಶತ್ರು ರಾಷ್ಟ್ರ ಎಂದೇ ಬಿಂಬಿತವಾಗಿರುವ ಪಾಕಿಸ್ತಾನದ ವರ್ತಕರ ಅನಿರೀಕ್ಷಿತ ಬೆಂಬಲ ನರೇಂದ್ರ ಮೋದಿಗೆ ಸಿಕ್ಕಿದೆ.

ಭಾರತದ ಮುಂದಿನ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾದರೆ ಭಾರತ ಮತ್ತು ಪಾಕಿಸ್ತಾನದ ಸಂಬಂಧ ವೃದ್ದಿಯಾಗಬಹುದು. ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ವಹಿವಾಟಿನಲ್ಲಿ ಗಣನೀಯ ಸುಧಾರಣೆಯಾಗಿ, ಗಡಿ ಸಮಸ್ಯೆಗೂ ಪರಿಹಾರ ಸಿಗಬಹುದು ಎಂದು ಪಾಕಿಸ್ತಾನದ ವರ್ತಕರ ಸಂಘ ಅಭಿಪ್ರಾಯ ಪಟ್ಟಿದೆ ಎಂದು ಪಾಕ್ ವಾಣಿಜ್ಯ ದೈನಿಕವೊಂದು ವರದಿ ಮಾಡಿದೆ.

ಪಾಕಿಸ್ತಾನದ ವರ್ತಕರಿಗೆ ನರೇಂದ್ರ ಮೋದಿ ಫೇವರೇಟ್ ನಾಯಕರಾಗಿ ಹೊರಹೊಮ್ಮಿದ್ದಾರೆ. ಪಾಕ್ ವರ್ತಕರು ಭಾರತದಲ್ಲೂ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಬಯಸಿದ್ದಾರೆ. ಮೋದಿ ಪ್ರಧಾನಿಯಾದರೆ ಎರಡೂ ದೇಶಗಳ ನಡುವೆ ಶಾಂತಿಯುತ ಸಂಬಂಧ ಬೆಳೆಯಲು ಸಾಧ್ಯ ಎನ್ನುವುದು ಇಲ್ಲಿನ ವರ್ತಕರ ಅಭಿಪ್ರಾಯ ಎಂದು ದೈನಿಕದಲ್ಲಿ ವರದಿಯಾಗಿದೆ.

BJP PM nominee Narendra Modi gets supports from Pakistan too

ಗುಜರಾತ್ ರಾಜ್ಯವನ್ನು ಹೊಸ ಅಭಿವೃದ್ದಿಯ ಶಕೆಯತ್ತ ಮೋದಿ ಕೊಂಡೊಯ್ದರು. ಅವರ ಅಧಿಕಾರದ ಮೂರು ಅವಧಿಯಲ್ಲಿ ಹೂಡಿಕೆದಾರರು ಗುಜರಾತ್ ರಾಜ್ಯದತ್ತ ಮುಖ ಮಾಡಿದರು.

ಮೋದಿ ಭಾರತದ ಪ್ರಧಾನಿಯಾದರೆ ಎರಡು ದೇಶಗಳ ನಡುವೆ ವಾಣಿಜ್ಯ ಚಟುವಟಿಕೆಗಳು ಗಣನೀಯವಾಗಿ ಸುಧಾರಿಸಲಿದೆ ಎನ್ನುವ ಅಭಿಪ್ರಾಯವನ್ನು ವರ್ತಕರು ಹೊಂದಿದ್ದಾರೆಂದು ಪಾಕ್ ದೈನಿಕ ಪ್ರಕಟಿಸಿದ ವರದಿಯನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

ಪಾಕಿಸ್ತಾನದ ಮಾಧ್ಯಮಗಳಲ್ಲೂ ನರೇಂದ್ರ ಮೋದಿ ಭಾರೀ ಜನಪ್ರಿಯ ರಾಜಕೀಯ ನಾಯಕ. ಮೋದಿ ನಿಲುವಿನ ವಿರುದ್ದದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಾಗ ಬಹಳ ಎಚ್ಚರಿಕೆಯಿಂದ ಅಳೆದು ತೂಗಿ ಪ್ರಸಾರ ಮಾಡಲಾಗುತ್ತದೆ ಎಂದು ಹೆಸರಾಂತ ಪಾಕ್ ಅಂಕಣಕಾರ ಬಸರತ್ ಹುಸೇನ್ ಕ್ವಿಜಿಲ್ಬಾಸ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+