ಬಿಟ್ ಕಾಯಿನ್: ಮತ್ತೊಬ್ಬ ಯುವ ಸಿಇಒ ಸಾವು

Bitcoin exchange First Meta CEO atumn Radtke found dead in Singapore
ಸಿಂಗಪುರ, ಮಾರ್ಚ್ 6: ಬಿಟ್ ಕಾಯಿನ್ ವಿನಿಮಯ ಕೇಂದ್ರದ ಯುವ ಮುಖ್ಯಸ್ಥೆ ನಿಗೂಢ ರೀತಿಯಲ್ಲಿ ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಆಟಮನ್ ರಾದ್ಕೆ 28 ವರ್ಷದ ಮೃತ ಮಹಿಳೆ. ಫಸ್ಟ್ ಮೆಟಾ ಪ್ರೈ. ಲಿಮಿಟೆಡ್ ಸಂಸ್ಥೆಯ Bitcoin exchangeನಲ್ಲಿ ಈಕೆ CEO ಆಗಿದ್ದರು.

ತಿಂಗಳ ಹಿಂದೆ ಬ್ಯಾಂಕಾಕಿನ ಗಗನಚುಂಬಿ ಹೋಟೆಲಿನಿಂದ ಬಿದ್ದು ಟಾಟಾ ಮೋಟರ್ಸ್ ಕಾರು ಉತ್ಪಾದನೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕಾರ್ಲ್ ಸ್ಲಿಮ್‌ ದಾರುಣ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಟ್ ಕಾಯಿನ್ ವಿನಿಮಯ ಕೇಂದ್ರದ ವಹಿವಾಟಿನ ಭವಿಷ್ಯ ಬಗ್ಗೆ ತನಗೆ ಅಪಾರ ಭರವಸೆ ಇದೆ ಎಂದು ಆಕೆ ತನ್ನ Facebookನಲ್ಲಿ ಹೇಳಿಕೊಂಡಿದ್ದರು. ಕಳೆದ ತಿಂಗಳು ಆಟಮನ್ ರಾದ್ಕೆ ಯುವ ಸಿಇಒಗಳು ಒತ್ತಡ ಜೀವನ ನಡೆಸುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿ, ತಮ್ಮ ಅನಿಸಿಕೆ ಹಂಚಿಕೊಂಡಿದ್ದರು.

ಮೂಲತಃ ಅಮೆರಿಕದವರಾದ ಆಟಮನ್ ರಾದ್ಕೆ ಅವರು ಫೆಬ್ರವರಿ 26ರಂದೇ ಸಾವಿಗೀಡಾಗಿದ್ದಾರೆ. ಯುವ ಸಿಇಒ ಆಟಮನ್ ರಾದ್ಕೆ 'ಆಘಾತಕಾರಿ ಮತ್ತು ದುಃಖದಾಯಕವಾಗಿದೆ' ಎಂದು First Meta ಸಂಸ್ಥೆ ತಿಳಿಸಿದೆ. ಈ ಸಂಸ್ಥೆಯು ತನ್ನ ವಿನಿಮಯ ಕೇಂದ್ರದ ಮೂಲಕ ನಾನಾ ದೇಶಗಳ ಕರೆನ್ಸಿಗಳ ವಹಿವಾಟಿಗೆ ಅವಕಾಶ ಕಲ್ಪಿಸುತ್ತದೆ.

ಕಳೆದ ತಿಂಗಳು ಟೋಕಿಯೋದ ಮೌಂಟ್ ಗಾಕ್ಸ್ ವಿನಿಮಯ ಕೇಂದ್ರದ ಪತನದ ನಂತರ ಬಿಟ್ ಕಾಯಿನ್ ವಿನಿಮಯ ಕೇಂದ್ರದ ವಹಿವಾಟಿನ ಭವಿಷ್ಯದ ಮೇಲೆ ಕರಿನೆರಳುಬಿದ್ದಿತ್ತು. ಆಟಮನ್ ರಾದ್ಕೆ ಕಿರಿಯ ವಯಸ್ಸಿನಲ್ಲೇ Appleನಂತಹ ಐಟಿ ಕಂಪನಿಗಳಲ್ಲೂ ಕೆಲಸ ನಿರ್ವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+