ಉಕ್ರೇನ್‌ಗೆ ಅಮೆರಿಕ ನೀಡುತ್ತಿರುವ ನೆರವು ನಿಂತು ಹೋಗುತ್ತಾ?

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಜ್ವಾಲೆ ಧಗಧಗಿಸುವ ಸಮಯಕ್ಕೆ ಅಮೆರಿಕದಿಂದ ಉಕ್ರೇನ್ ಸೇನೆಗೆ ಕೆಟ್ಟ ಸುದ್ದಿ ಸಿಕ್ಕಿದೆ. ಅದೇನೆಂದರೆ ಅಮೆರಿಕ ಈಗಾಗಲೇ ಉಕ್ರೇನ್ ಸೇನೆಗೆ ಮತ್ತು ಉಕ್ರೇನ್ ಸರ್ಕಾರಕ್ಕೆ ಸಾಕಷ್ಟು ಸಹಾಯ ಮಾಡಿದೆ. ಈ ಮೂಲಕ ರಷ್ಯಾ ವಿರುದ್ಧ ಹೋರಾಡಲು ಬೆನ್ನೆಲುಬಾಗಿ ನಿಂತಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅಮೆರಿಕ ಸಹಾಯ ಮಾಡುವುದನ್ನು ನಿಲ್ಲಿಸುವ ಸಾಧ್ಯತೆ ದಟ್ಟವಾಗಿದೆ.

ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ಸಹಾಯ ಮಾಡುವುದು ಅಮೆರಿಕಗೆ ಅತ್ಯಗತ್ಯ. ಅಕಸ್ಮಾತ್ ಈ ಸಹಾಯ ನಿಂತು ಹೋದರೆ ಅಮೆರಿಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಬಗ್ಗೆ ಅವಮಾನ ಎದುರಿಸಬೇಕಾಗುತ್ತದೆ. ಆದರೂ ಅಮೆರಿಕದಲ್ಲಿ ಉಂಟಾಗಿರುವ ಆಂತರಿಕ ಕಲಹ ಉಕ್ರೇನ್‌ಗೆ ಸಿಗುತ್ತಿರುವ ನೆರವಿಗೆ ಅಡ್ಡಿಮಾಡುತ್ತಿದೆ. ಅದರಲ್ಲೂ ಅಮೆರಿಕ ಆಡಳಿತ ಪಕ್ಷದಲ್ಲೇ ಉಕ್ರೇನ್‌ಗೆ ನೆರವು ನೀಡುವ ಬಗ್ಗೆ ಒಮ್ಮತ ಇಲ್ಲ. ಮತ್ತೊಂದು ಕಡೆ ವಿರೋಧ ಪಕ್ಷದಲ್ಲೂ ದೊಡ್ಡ ಜಗಳವೇ ಶುರುವಾಗಿದೆ.

america-over-ukraine-aid

ದೊಡ್ಡಣ್ಣನಿಗೆ ಹೊಸ ತಲೆನೋವು ಶುರು!

ಹೌದು ಡೊನಾಲ್ಡ್ ಟ್ರಂಪ್ ಅವರ ಪಕ್ಷದಲ್ಲಿ ಇದೀಗ ಉಕ್ರೇನ್‌ಗೆ ನೆರವು ನೀಡುವ ವಿಚಾರ ಕಿತ್ತಾಟಕ್ಕೆ ಕಾರಣವಾಗಿದೆ. ಹೀಗಾಗಿ ಉಕ್ರೇನ್‌ಗೆ ಅಮೆರಿಕ ನೀಡುತ್ತಿರುವ ನೆರವು ನಿಲ್ಲುತ್ತಾ? ಎಂಬ ಆತಂಕ ಶುರುವಾಗಿದೆ. ಖುದ್ದು ಅಮೆರಿಕ ಅಧ್ಯಕ್ಷ ಬೈಡನ್ ಈ ವಿಚಾರ ಪ್ರಸ್ತಾಪಿಸಿ ಆತಂಕ ಹೊರಹಾಕಿದ್ದಾರೆ. ಅದರಲ್ಲೂ ಇನ್ನೇನು ಮುಂದಿನ ವರ್ಷ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಆದರೆ ಅದಕ್ಕೂ ಮೊದಲು ಈ ರೀತಿ ಘರ್ಷಣೆ ಶುರುವಾಗಿದ್ದು, ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.

ಉಕ್ರೇನ್ ಪಾಡು ಮುಂದೆ ಹೇಗೆ?

ಮೊನ್ನೆ ಮೊನ್ನೆ ತಾನೆ ಉಕ್ರೇನ್ ಅಧ್ಯಕ್ಷ ಈ ವಿಚಾರ ಪ್ರಸ್ತಾಪ ಮಾಡಿದ್ದರು. ರಷ್ಯಾ ಸೇನೆ ವಿರುದ್ಧ ಹೋರಾಟ ನಡೆಸುತ್ತಿರುವ ನಮ್ಮ ಸಂಕಲ್ಪವನ್ನು ಯಾರಿಂದಲೂ ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಗುಡುಗಿದ್ರು. ಯುದ್ಧದಲ್ಲಿ ಉಕ್ರೇನ್‌ಗೆ ಆರ್ಥಿಕ ನೆರವು ನೀಡಬೇಕೆಂಬ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿಲುವಿಗೆ ಅಲ್ಲಿನ ಸಂಸತ್‌ನಲ್ಲಿ ಬೆಂಬಲ ಸಿಕ್ಕಿಲ್ಲ. ಆದರೂ ನಮಗೆ ನಿರೀಕ್ಷಿತ ಸಹಾಯ ಸಿಗಲಿದೆ ಎಂಬುದಾಗಿ ವೊಲೊಡಿಮಿರ್ ಝೆಲೆನ್‌ಸ್ಕಿ ಆಶಯ ವ್ಯಕ್ತಪಡಿಸಿದ್ದರು. ಆದರೆ ಈಗ ಬೇರೆಯೇ ಬೆಳವಣಿಗೆ ನಡೆಯುತ್ತಿದೆ.

america-over-ukraine-aid

ಉಕ್ರೇನ್‌ಗೆ ಒಂದೇ ವರ್ಷದಲ್ಲಿ ಅಮೆರಿಕ ಸರ್ಕಾರವು 4 ಲಕ್ಷ ಕೋಟಿ ನೆರವನ್ನು ನೀಡಿದೆ. ಕೆಲ ತಿಂಗಳ ಹಿಂದೆ ಸಾವಿರಾರು ಕೋಟಿ ಪ್ಯಾಕೇಜ್ ನೀಡಿದ್ದ ಅಮೆರಿಕ, ಇದೀಗ ಹೊಸ ಪ್ಯಾಕೇಜ್‌ ಘೋಷಿಸಲು ಸಿದ್ಧವಾಗಿದೆ ಎನ್ನಲಾಗಿತ್ತು. ಈ ಪ್ಯಾಕೇಜ್‌ನಲ್ಲಿ ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್‌ಗೆ ಅತ್ಯಾಧುನಿಕ ಹತ್ಯಾರ ಸಿಗುವ ನಿರೀಕ್ಷೆ ಇತ್ತು. ಆದರೆ ಅಮೆರಿಕದ ಒಳಗಡೆಯೇ ಈ ಬಗ್ಗೆ ಕಿತ್ತಾಟ ಶುರುವಾಗಿದೆ. ಅಲ್ಲದೆ ಉಕ್ರೇನ್‌ಗೆ ನೆರವು ನಿಲ್ಲುವ ಭೀತಿ ಆವರಿಸಿದೆ. ಈ ಎಲ್ಲಾ ಬೆಳವಣಿಗೆ ನಡುವೆ ರಷ್ಯಾ ಸೇನೆ ತನ್ನ ಭೀಕರ ದಾಳಿ ಮುಂದುವರಿಸಿದೆ.

ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಘೋರವಾಗುತ್ತಿರುವ ಸಮಯಕ್ಕೆ ಉಕ್ರೇನ್ ಸೇನೆ ದೊಡ್ಡ ಆಘಾತ ಎದುರಿಸುತ್ತಿದೆ. ಅಕಸ್ಮಾತ್ ಅಮೆರಿಕದ ಸಹಾಯ ನಿಂತು ಹೋದ್ರೆ ಇದು ಉಕ್ರೇನ್ ಸೇನೆಗೆ ದೊಡ್ಡ ಪೆಟ್ಟು ನೀಡಲಿದೆ. ಯಾಕಂದ್ರೆ ಅಮೆರಿಕ ಕೈಬಿಟ್ಟರೆ ನ್ಯಾಟೋದ ನೆರವು ಕೂಡ ನಿಂತು ಹೋಗುವ ಸಾಧ್ಯತೆ ಇದೆ. ಹೀಗಾಗಿ ಮುಂದೆ ಏನು ಮಾಡುವುದು? ಎಂಬ ಪ್ರಶ್ನೆ ಇದೀಗ ಉಕ್ರೇನ್ ಸೈನಿಕರನ್ನು ಹಾಗೂ ಉಕ್ರೇನ್ ಸರ್ಕಾರವನ್ನು ಕಾಡುತ್ತಿದೆ. ಈ ಮಧ್ಯೆ ರಷ್ಯಾ ಅಧ್ಯಕ್ಷ ಪುಟಿನ್ ಮಾತ್ರ ತಾವು ಹೂಡಿದ ರಣತಂತ್ರ ಸಕ್ಸಸ್ ಆಗುತ್ತಿದೆ ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ ಎಂಬ ಆರೋಪವಿದೆ. ಇದೆಲ್ಲಾ ಏನೇ ಇರಲಿ, ಆದಷ್ಟು ಬೇಗ ಯುದ್ಧ ನಿಲ್ಲಲಿ ಎಂಬುದೇ ಜಗತ್ತಿನ ಬಯಕೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+