ಅಮೆರಿಕದಲ್ಲಿ ರಸ್ತೆ ಅಪಘಾತ : ಬೀದರ್ ಮೂಲದ ಟೆಕ್ಕಿ ಸಾವು
ಬೀದರ್, ಜೂನ್ 07 : ಅಮೆರಿಕದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ ವ್ಯಕ್ತಿ ಮೃತಪಟ್ಟಿದ್ದಾರೆ. ಶವವನ್ನು ಭಾರತಕ್ಕೆ ತರಲು ರಾಯಭಾರ ಕಚೇರಿಯ ಸಹಾಯಕ್ಕಾಗಿ ಟ್ವೀಟ್ ಮಾಡಲಾಗಿದೆ.
ಅಮೆರಿಕದಲ್ಲಿ ಟೆಕ್ಕಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಮುಖೇಶ್ ದೇಶಮುಖ್ (27) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮುಖೇಶ್ ಅವರ ಪತ್ನಿ ಮತ್ತು ಎರಡು ವರ್ಷದ ಮಗು ಸಹ ಗಾಯಗೊಂಡಿದ್ದಾರೆ.
ಮುಖೇಶ್ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಕೊಂಗಳ್ಳಿ ಮೂಲದವರು. ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಬೀದರ್‌ನಲ್ಲಿರುವ ಕುಟುಂಬದವರು ದುಃಖದಲ್ಲಿ ಮುಳುಗಿದ್ದು, ಶವಗಳನ್ನು ಭಾರತಕ್ಕೆ ತರಲು ಸಹಾಯ ಕೋರಿದ್ದಾರೆ.

ಬಾಲ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ, ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಮುಖೇಶ್ ಕುಟುಂಬಕ್ಕೆ ಅಗತ್ಯ ಸಹಾಯ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.
Dear @MBPatil I m requesting u to ask the details and current status Mukesh Deshmukh from indian embassy in USA as of now the mukesh is dead and his wife n small daughter is serious please help the family to get in touch from govt @CMofKarnataka @hd_kumaraswamy @IndianEmbassyUS pic.twitter.com/kAzlbwKHvh
— Gajanand molkere (@GajaMolkere) June 7, 2019
ಗಜಾನಂದ ಮೊಳಕೆರೆ ಎಂಬುವವರು ಅಪಘಾತದ ಬಗ್ಗೆ ಟ್ವೀಟ್ ಮಾಡಿದ್ದು, ಭಾರತೀಯ ರಾಯಭಾರ ಕಚೇರಿ, ಕರ್ನಾಟಕದ ಮುಖ್ಯಮಂತ್ರಿಗಳ ಕಚೇರಿ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಟ್ಯಾಗ್ ಮಾಡಿದ್ದಾರೆ.
ಈಶ್ವರ ಖಂಡ್ರೆ ಅವರ ಟ್ವೀಟ್
@CMofKarnataka @hd_kumaraswamy and @MBPatil this person is from my (Bhalki) Constituency, do the needful to their family. @MEAIndia @IndianEmbassyUS @PMOIndia @DrSJaishankar https://t.co/fLyH4Oa0lg
— Eshwar Khandre (@eshwar_khandre) June 7, 2019












Click it and Unblock the Notifications