Bengaluru Life: ಬೆಂಗಳೂರು ಬಿಟ್ಟು UKಗೆ ಹೋದ ಟೆಕ್ಕಿಗೆ ಪಶ್ಚಾತ್ತಾಪ: ‘ಅಲ್ಲಿ ಎಲ್ಲವೂ ಚೆನ್ನಾಗಿತ್ತು’, ವೈರಲ್ ಪೋಸ್ಟ್‌

ಬೆಂಗಳೂರಿನ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮೂಲಸೌಕರ್ಯ ಕೊರತೆ ಹಾಗೂ ಜನದಟ್ಟಣೆ, ಟ್ರಾಫಿಕ್ ಜಾಮ್ ಸಮಸ್ಯೆಗಳು ಸೇರಿದಂತೆ ಹಲವು ನೆಗೆಟಿವ್ ವಿಚಾರಗಳ ಹೊರತಾಗಿಯೂ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಅಲ್ಲದೆ ಬೆಂಗಳೂರಿನ ವರ್ಚಸ್ಸು ಸಹ ಕಡಿಮೆ ಆಗುತ್ತಿಲ್ಲ. ಇದೀಗ ಬೆಂಗಳೂರು ನಗರವನ್ನು ಬಿಟ್ಟು ಯುಕೆ (UK)ಗೆ ಹೋದ ವ್ಯಕ್ತಿಯೊಬ್ಬರು, ವಿದೇಶಕ್ಕೆ ಬರುವುದಕ್ಕಿಂತಲೂ ಬೆಂಗಳೂರಿನಲ್ಲೇ ಎಲ್ಲವೂ ಚೆನ್ನಾಗಿತ್ತು. ಬೆಂಗಳೂರು ಬಿಟ್ಟು ತಪ್ಪು ಮಾಡಿದೆ ಎಂದು 38 ವರ್ಷದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಐದು ವರ್ಷಗಳ ಹಿಂದೆ ನಾನು ಯುಕೆಗೆ ಬಂದಿದ್ದೆ. ಆದರೆ ಬೆಂಗಳೂರು ಬಿಟ್ಟು ತಪ್ಪು ಮಾಡಿದೆ ಅನಿಸುತ್ತಿದೆ ಎಂದು ಅನಿವಾಸಿ ಭಾರತೀಯ ತಂತ್ರಜ್ಞರೊಬ್ಬರು ಕೆಲಸದಲ್ಲಿ ಎಲ್ಲಾ ಪ್ರೇರಣೆಯನ್ನು ಸಹ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಕೃತಕ ಬುದ್ಧಿಮತ್ತೆ (AI) ತಮ್ಮ ಹೆಚ್ಚಿನ ಕೆಲಸವನ್ನು ಸ್ವಯಂ ಚಾಲಿತವಾಗಿಸುತ್ತಿರುವುದರಿಂದ, 38 ತಮ್ಮ ಹಳೆಯ ಬೆಂಗಳೂರು ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಆಗ ತಡರಾತ್ರಿ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವುದು ರೋಮಾಂಚನಕಾರಿಯಾಗಿತ್ತು ಅಂತ ಹೇಳಿಕೊಂಡಿದ್ದಾರೆ.

Bengaluru Life Techie Regrets Leaving for UK Says Everything Was Better in Bengaluru

ಯುಕೆಯಲ್ಲಿ ನೆಲೆಸುವುದಕ್ಕೆ / ಶಾಶ್ವತವಾಗಿ ನೆಲೆಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಟೆಕ್ಕಿ ಹೇಳಿದ್ದಾರೆ. ಆದರೆ, ಕೆಲಸದ ಸ್ಥಳವು ತುಂಬಾ ನೀರಸವಾಗಿತ್ತು ಮತ್ತು ಶೀತ ಹವಾಮಾನ, ಹೆಚ್ಚಿನ ತೆರಿಗೆಗಳು ಸೇರಿದಂತೆ ಹಲವು ವಿಷಯಗಳು ಉತ್ತಮವಾಗಿಲ್ಲ ಎಂದಿದ್ದಾರೆ. ನನಗೆ ಈಗ ಯಾವುದರಲ್ಲೂ ಆಸಕ್ತಿ ಅಥವಾ ಉತ್ಸಾಹವಿಲ್ಲ. ಕೆಲಸ ಮಾಡುವುದು, ಆಟವಾಡುವುದು, ಪ್ರವಾಸ ಮಾಡುವುದು, ಸಿನಿಮಾಗಳು, ಹವ್ಯಾಸಗಳು, ವಿಡಿಯೋ ಆಟಗಳು ಹಾಗೂ ಕ್ರೀಡೆಗಳು ಸೇರಿದಂತೆ ಯಾವುದೇ ವಿಷಯದಲ್ಲೂ ಆಸಕ್ತಿಯೇ ಇಲ್ಲ ಎಂದೂ ಟೆಕ್ಕಿ ಹೇಳಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈಗ AI ವೈಬ್ ಕೋಡಿಂಗ್ ಬಳಸಿ ಎಲ್ಲವನ್ನೂ ಮಾಡುತ್ತಿದ್ದೇವೆ. ಈಗ ನನ್ನ ಕೆಲಸವೆಂದರೆ ಮೀಟಿಂಗ್‌ಗೆ ಹಾಜರಾಗುವುದು ಮತ್ತು AI ಎಲ್ಲಾ ಕಠಿಣ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸುವುದು ಅಂತ ಹೇಳಿದ್ದಾರೆ. ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾಗ ಸ್ನೇಹಿತರು ಹಾಗೂ ಪರಿಚಯಸ್ಥರೊಂದಿಗೆ ಉತ್ತಮ ಒಡನಾಟವಿತ್ತು. ಆದರೆ ಯುಕೆಯಲ್ಲಿ ಜೀವನ ಇದಕ್ಕೆ ಹೋಲಿಸಿದರೆ ತುಂಬಾ ಒಂಟಿತನ ಇದೆ. ಅಲ್ಲಿ ದಿನವಿಡೀ ಸಮಯ ಕಳೆಯುವುದನ್ನೇ ಕಾಯುತ್ತಾ, ಆಗಾಗ ಗಡಿಯಾರ ನೋಡುತ್ತಿದ್ದೆ ಎಂದು ಅನಿವಾಸಿ ಭಾರತೀಯ ತಮ್ಮ ನೋವಿನ ಅನುಭವವನ್ನು ಹೇಳಿಕೊಂಡಿದ್ದಾರೆ.

Bengaluru Life: ಬೆಂಗಳೂರಿನ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ....

ಇನ್ನು ನಾನು ಬೆಂಗಳೂರಿನಲ್ಲಿ ಕಳೆದಯುತ್ತಿದ್ದ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ. ಬೆಂಗಳೂರಿನಂತಹ ನಗರದಲ್ಲಿ ಕೆಲಸ ಮಾಡುವ ಅನುಭವವೇ ಬೇರೆ. ನಾನು ಉತ್ತರ ಅಮೆರಿಕಾದ ಹೊಸ ಹೊಸ ಪ್ರಾಜೆಕ್ಟ್‌ಗಳಿಗೆ ತಡರಾತ್ರಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ದಿನಗಳನ್ನು ನಾನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇನೆ.

ಜನರು ತುಂಬಾ ಸ್ನೇಹಪರ ಮತ್ತು ಸೋಶಿಯಲ್ ಆಗಿದ್ದರು ಮತ್ತು ಸಾಕಷ್ಟು ಆಕ್ಟಿವಿಟಿ ಕಾರ್ಯಕ್ರಮಗಳು ಇದ್ದವು. ಸಂಬಳದ ಏರಿಕೆ ಮತ್ತು ಉಳಿತಾಯದ ಸಾಮರ್ಥ್ಯವು ಹೆಚ್ಚಿತ್ತು ಎಂದಿದ್ದಾರೆ. ಇಲ್ಲಿ ನಾನು 5 ಗಂಟೆ ಆಗುವುದನ್ನೇ ಗಡಿಯಾರದಲ್ಲಿ ನೋಡುತ್ತಿರುತ್ತೇನೆ ಎಂದೂ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+