Beer: ಮಹಾತ್ಮ ಗಾಂಧೀಜಿ ಹೆಸರಲ್ಲಿ ಬಿಯರ್, ವಿಡಿಯೋ ವೈರಲ್: ಆಕ್ಷೇಪ
ಮಹಾತ್ಮ ಗಾಂಧೀಜಿ ಅವರು ಅವರ ಜೀವಮಾನ ಪೂರ್ತಿ ಕುಡಿತ ಬೇಡ. ಕುಡಿತದ ಚಟದಿಂದ ಜೀವನ ಬೀದಿಗೆ ಬೀಳುತ್ತದೆ ಎಂದು ಜಾಗೃತಿ ಮೂಡಿಸಿದ್ದರು. ಅವರು ಮದ್ಯ ವಿರೋಧಿಯಾಗಿದ್ದರು. ಜೀವಮಾನದಲ್ಲಿ ಮದ್ಯ ವಿರೋಧಿಯಾಗಿದ್ದ ಹಾಗೂ ಮದ್ಯ ತೆಗೆದುಕೊಳ್ಳಬೇಡಿ ಎಂದು ಜಾಗೃತಿ ಮೂಡಿಸಿದ್ದರು. ಆದರೆ, ಗಾಂಧೀಜಿ ಅವರಿಗೆ ರಷ್ಯಾದ ಮದ್ಯ ಕಂಪನಿಯೊಂದು ಅವಮಾನ ಮಾಡಿದ್ದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಷ್ಯಾದ ಮದ್ಯ ಕಂಪನಿಯ ಕೃತ್ಯಕ್ಕೆ ಭಾರತೀಯರು ಅಸಮಾಧಾನ ಹೊರ ಹಾಕಿದ್ದಾರೆ. ದೇಶದಲ್ಲಿ ಮದ್ಯ ವಿರೋಧಿ ಅಭಿಯಾನವನ್ನು ಗಾಂಧೀಜಿ ಅವರು ನಡೆಸಿದ್ದರು. ಆದರೆ ರಷ್ಯಾದಲ್ಲಿ ಗಾಂಧಿ ವಿರೋಧಿ ನಡೆ ಪ್ರದರ್ಶನ ಮಾಡಲಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ದೇಶದ ಮಹನೀಯರು ಹಾಗೂ ಗಣ್ಯರಿಗೆ ವಿದೇಶದಲ್ಲಿ ವಿರೋಧ ವ್ಯಕ್ತವಾಗುವುದು ಇಲ್ಲವೇ ಅವರ ಬಗ್ಗೆ ತಪ್ಪಾಗಿ ಬಿಂಬಿಸುವುದು ಹಾಗೂ ಅವಹೇಳನ ಮಾಡುವಂತಹ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಮಹಾತ್ಮ ಗಾಂಧೀಜಿ ಅವರ ಹೆಸರಿನ ಬಿಯರ್ ಬಿಡುಗಡೆ ಮಾಡಲಾಗಿದೆ. ರಷ್ಯಾದ ಪ್ರತಿಷ್ಠಿತ ಮದ್ಯ ಕಂಪನಿಯೊಂದು ಈ ಮಾದರಿಯ ಬಿಯರ್ ಬಿಡುಗಡೆ ಮಾಡಿದ್ದು. ಭಾರೀ ಚರ್ಚೆಗೆ ಕಾರಣವಾಗಿದೆ. ಈ ಫೋಟೋ ಹಾಗೂ ವಿಡಿಯೋ ಇನ್ಸಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿವೆ.

ರಷ್ಯಾದ ಬಿಯರ್ ಮೇಲೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಅವಮಾನ ಮಾಡಲಾಗಿದೆ. ಮಹಾತ್ಮ ಗಾಂಧೀಜಿ ಅವರ ಚಿತ್ರ ಹಾಗೂ ಸಹಿ ಇರುವ ರಷ್ಯಾದ ಬಿಯರ್ ಕ್ಯಾನ್ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ. ಇದು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ಎಂದು ಹೇಳಲಾಗುತ್ತಿದೆ. Brand Rewort's Hazy IPA ರಿವರ್ಟ್‌ನ ಹೇಜಿ ಐಪಿಎ ಎನ್ನುವ ಬ್ರ್ಯಾಂಡ್ ಇದಾಗಿದೆ ಎಂದು ಹೇಳಲಾಗಿದೆ. ಗಾಂಧೀಜಿ ಅವರು ಮದ್ಯಪಾನ ವಿರೋಧಿಯಾಗಿದ್ದರು. ಆದರೆ ಅವರ ಹೆಸರು ಮತ್ತು ಚಿತ್ರವನ್ನು ಬಳಸಿ ಬಿಯರ್ ಸೇಲ್ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್: ಗಾಂಧೀಜಿ ಅವರ ಹೆಸರು ಹಾಗೂ ಫೋಟೋದ ಬಿಯರ್ ಟಿನ್‌ಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಭಾರತದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಗಾಂಧೀಜಿ ಅವರ ಚಿತ್ರ ಹಾಗೂ ಆಟೋಗ್ರಾಫ್ ಇರುವ ಬಿಯರ್ ಟಿನ್‌ಗಳನ್ನು ಶೀಘ್ರದಲ್ಲೇ ನಿಷೇಧಿಸಲಾಗುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.
ಇನ್ನಷ್ಟು ಹೋರಾಟಗಾರರ ಹೆಸರಲ್ಲಿ ಬಿಯರ್
ಇನ್ನು ಗಾಂಧೀಜಿ ಅವರು ಮಾತ್ರವಲ್ಲದೆ ಈ ಬಿಯರ್ ಸಂಸ್ಥೆಯು ಮದರ್ ತೆರೇಸಾ, ನೆಲ್ಸನ್ ಮಂಡೇಲಾ ಹಾಗೂ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಹೆಸರಿನ ಬಿಯರ್‌ಗಳನ್ನು ಸಹ ಸೇಲ್ ಮಾಡುತ್ತಿದೆ ಎಂದು ಹೇಳಲಾಗಿದೆ. ಈ ರೀತಿ ಮಹಾನೀಯರ ಹೆಸರಿನಲ್ಲಿ ಬಿಯರ್ ಮಾರಾಟ ಮಾಡುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈ ಹಿಂದೆ ಅಮೆರಿಕ ಮೂಲದಕ ಕಂಪನಿಯೊಂದು ಬಿಯರ್ ಟಿನ್ ಮೇಲೆ ಗಾಂಧೀಜಿ ಅವರ ಚಿತ್ರವನ್ನು ಬಳಸಿ ವಿವಾದ ಸೃಷ್ಟಿ ಮಾಡಿತ್ತು.












Click it and Unblock the Notifications