• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಚ್ಚರ.. ಅಸುರಕ್ಷಿತ ಲೈಂಗಿಕ ಸಂಪರ್ಕ ಝಿಕಾ ವೈರಸ್ ತರಬಹುದು

|

ಟೆಕ್ಸಾಸ್, ಫೆಬ್ರವರಿ 03: ಜಾಗತಿಕ ಮಟ್ಟದಲ್ಲಿ ಆತಂಕ, ಭಯ ಸೃಷ್ಟಿ ಮಾಡಿರುವ ಝಿಕಾ ವೈರಾಣು ಸೊಳ್ಳೆ ಕಡಿತದಿಂದ ಮಾತ್ರ ಅಲ್ಲ ಲೈಂಗಿಕ ಕ್ರಿಯೆ ನಡೆಸುವುದರಿಂದಲೂ ಹರಡುತ್ತದೆ ಎಂದು ಅಮೆರಿಕದ ಸಂಸ್ಥೆಯೊಂದು ವರದಿ ಮಾಡಿದೆ.

ಡಲ್ಲಾಸ್ ನ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರನ್ನು ಪರೀಕ್ಷೆ ಮಾಡಿದ ನಂತರ ಈ ಸಂಗತಿ ಬಯಲಾಗಿದ್ದು ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಹೇಳಲಾಗಿದೆ.[ಝಿಕಾ ವೈರಾಣು ತಡೆಗೆ ಕೇಂದ್ರದ ಮಾರ್ಗಸೂಚಿ]

ಸೆಂಟರ್ ಫಾರ್ ಡಿಸಿಸ್ ಕಂಟ್ರೊಲ್ ಈ ಬಗ್ಗೆ ಹೇಳಿಕೆ ನೀಡಿದ್ದು, ಲೈಂಗಿಕ ಕ್ರಿಯೆ ಮೂಲಕವೇ ಸೋಂಕು ತಗುಲಿದೆ. ರೋಗ ತಗುಲಿದ ವ್ಯಕ್ತಿ ಝೀಕಾ ವೈರಸ್ ಇರುವ ಯಾವ ಜಾಗಕ್ಕೂ ತೆರಳಿರಲಿಲ್ಲ. ಆದರೆ ಆಕೆಯ ಸಂಗಾತಿ ಝಿಕಾ ಕಾಣಿಸಿಕೊಂಡಿದ್ದ ವೆನೆಜುಲಾಕ್ಕೆ ಹೋಗಿ ಬಂದಿದ್ದರು. ಇದಾದ ಮೇಲೆ ವೈರಾಣು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.[ಝಿಕಾ ವೈರಾಣು ಪತ್ತೆಗೆ ಕಿಟ್ ಅಗತ್ಯ]

ಈ ರೋಗದಿಂದ ಸಾವು ಸಂಭವಿಸದಿದ್ದರೂ, ಸೋಂಕು ತಗುಲಿದ ತಾಯಂದಿರಿಗೆ ಹುಟ್ಟುವ ಮಕ್ಕಳಲ್ಲಿ ನರದೌರ್ಬಲ್ಯ ಕಂಡುಬರಲಿದೆ. ಸಹಜಕ್ಕಿಂತ ತಲೆ ಚಿಕ್ಕದಿರುವ ಮಕ್ಕಳು ಹುಟ್ಟುತ್ತಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವೈರಸ್ ತಡೆಗೆ ಕೆಲವೊಂದು ಮಾರ್ಗಸೂಚಿ ಹಾಕಿಕೊಂಡಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A rare case of the Zika virus being transmitted through sex, not a mosquito bite, has been reported in the US. A patient infected in Dallas, Texas, is likely to have been infected by sexual contact, the Centers for Disease Control (CDC) told. In India Union health ministry has issued detailed guidelines to tackle Zika virus, which is spreading all over the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more