ಪಾಕಿಸ್ತಾನಿಗಳಿಗೆ ವೀಸಾ ನೀಡುವುದನ್ನು ನಿಲ್ಲಿಸಿದ ಬಾಂಗ್ಲಾದೇಶ್

ಇಸ್ಲಾಮಾಬಾದ್ ನಲ್ಲಿರುವ ಬಾಂಗ್ಲಾದೇಶ್ ಹೈಕಮಿಷನ್ ನಿಂದ ಪಾಕಿಸ್ತಾನಿಯರಿಗೆ ವೀಸಾ ನೀಡುವುದನ್ನು ಒಂದು ವಾರ ಕಾಲ ನಿಲ್ಲಿಸಲಾಗಿದೆ. ಇದೀಗ ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನದ ಮಧ್ಯೆ ಹೊಸದಾಗಿ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿದೆ. 1971ರ ಯುದ್ಧ ಕೈದಿಗಳು ಹಲವರನ್ನು ನೇಣಿಗೇರಿಸಲು 2013ರಲ್ಲಿ ನಿರ್ಧರಿಸಿದಾಗಿನಿಂದ ಎರಡೂ ದೇಶಗಳ ಮಧ್ಯೆ ರಾಜತಾಂತ್ರಿಕ ಸಂಬಂಧ ಹಳಸಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕಳೆದ ವರ್ಷ ಪಾಕಿಸ್ತಾನದ ಹೈಕಮಿಷನರ್ ಗೆ ಢಾಕಾದಿಂದ ವೀಸಾ ನಿರಾಕರಿಸಲಾಗಿತ್ತು. ಪಾಕಿಸ್ತಾನಿಯರಿಗೆ ವೀಸಾ ನಿಲ್ಲಿಸುವ ಬಗ್ಗೆ ಢಾಕಾದಲ್ಲಿನ ವಿದೇಶಾಂಗ ಕಚೇರಿ ಖಾತ್ರಿ ಪಡಿಸಬೇಕಿದೆ. ಅಧಿಕೃತವಾಗಿ ಯಾವುದೇ ಅಧಿಸೂಚನೆಯನ್ನು ಈ ಬಗ್ಗೆ ಹೊರಡಿಸಿಲ್ಲ್. ಆದರೆ ಹೆಸರು ಹೇಳಲು ಇಚ್ಛಿಸದ ಬಾಂಗ್ಲಾದೇಶ್ ನ ಅಧಿಕಾರಿಯೊಬ್ಬರ ಪ್ರಕಾರ ಪಾಕಿಸ್ತಾನಿಗಳಿಗೆ ವೀಸಾ ಪ್ರಕ್ರಿಯೆ ನಿಲ್ಲಿಸಲಾಗಿದೆ.

ಬಾಂಗ್ಲಾದೇಶ್ ನಲ್ಲಿನ ಪಾಕಿಸ್ತಾನ ಹೈ ಕಮಿಷನ್ ಬಾಂಗ್ಲಾ ಅಧಿಕಾರಿಯ ಕುಟುಂಬದವರಿಗೆ ಪಾಕಿಸ್ತಾನದ ವೀಸಾ ನೀಡುತ್ತಿಲ್ಲ. ಬಾಂಗ್ಲಾದೇಶ್ ನ ಹೈಕಮಿಷನ್ ನ ಮಾಧ್ಯಮ ಹಾಗೂ ವೀಸಾ ವ್ಯವಹಾರಗಳ ಕೌನ್ಸಿಲರ್ ಇಕ್ಬಾಲ್ ಹೊಸೈನ್ ರ ಕುಟುಂಬದವರಿಗೆ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bangladesh stopped to issue visa to Pakistani nationals

ಹೊಸೈನ್ ಇಸ್ಲಾಮಾಬಾದ್ ನಲ್ಲಿ ತಮ್ಮ ಮಗಳ ಜತೆ ಇಸ್ಲಾಮಾಬಾದ್ ನಲ್ಲಿ ವಾಸವಿದ್ದಾರೆ. ಅವರ ಪತ್ನಿ ಹಾಗೂ ಮಗ ಢಾಕಾ ವಾಸವಿದ್ದಾರೆ. ''ಪಾಕಿಸ್ತಾನಿಗಳಿಗೆ ವೀಸಾ ನೀಡುವುದನ್ನು ನಿಲ್ಲಿಸಲಾಗಿದೆ. ಪಾಕಿಸ್ತಾನದಲ್ಲಿರುವ ಬಾಂಗ್ಲಾದೇಶ್ ಹೈಕಮಿಷನ್ ಕುಟುಂಬಕ್ಕೆ ನೀಡದಿರುವುದಕ್ಕೆ ಹೀಗೆ ಮಾಡಲಾಗಿದೆ" ಎಂದು ಹೊಸೈನ್ ಹೇಳಿರುವುದಾಗಿ ಮಾಧ್ಯಮದಲ್ಲಿ ವರದಿಯಾಗಿದೆ.

ಕಳೆದ ವರ್ಷ ಮಾರ್ಚ್ ನಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವಾಲಯವು ಸಕ್ಲೇನ್ ಸೈಯದ್ ಅವರನ್ನು ಬಾಂಗ್ಲಾದೇಶ್ ನ ಹೈಕಮಿಷನರ್ ಅಗಿ ಪ್ರಸ್ತಾವ ಮಾಡಿತ್ತು. ಆದರೆ ಆ 'ಒಪ್ಪಂದ' (ಪ್ರಸ್ತಾವಕ್ಕೆ ಸಂಬಂಧಿಸಿದಂತೆ ದಾಖಲಾತಿ) ಸ್ವೀಕರಿಸಲು ನಿರಾಕರಿಸಿತ್ತು. ಅದಾಗಿ ಆರು ತಿಂಗಳಲ್ಲಿ ಮೌಖಿಕವಾಗಿ ಈ ವಿಚಾರವನ್ನು ತಿಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+