Cricket: ಕ್ರಿಕೆಟ್ ಮೈದಾನ ರಣಾಂಗಣ, ಬ್ಯಾಟ್‌ನಲ್ಲೇ ಬಡಿದಾಟ!
ಕ್ರಿಕೆಟ್ ಒಂದು ಜಾಣರ ಕ್ರೀಡೆ ಅಂತಾ ಕರೆಯೋದು ವಾಡಿಕೆ, ಏಕೆಂದರೆ ಈ ಕ್ರಿಕೆಟ್‌ನಲ್ಲಿ ಶಕ್ತಿಗಿಂತ ಯುಕ್ತಿಗೆ ಬೆಲೆ ಜಾಸ್ತಿ. ಹೀಗಾಗಿಯೇ ಕ್ರಿಕೆಟ್ ಆಟಗಾರರಿಗೆ ಶಿಸ್ತು ಕಲಿಸಲಾಗುತ್ತೆ. ಆದರೆ ಇಲ್ಲೊಂದು ಕ್ರಿಕೆಟ್ ಮೈದಾನ ನೋಡ ನೋಡುತ್ತಲೇ ರಣಾಂಗಣವಾಗಿದೆ. ಬಾಲ್ ಬಡಿಯಲು ಇರುವ ಬ್ಯಾಟ್ ತಲೆ ಹೊಡೆಯುವ ಹಂತಕ್ಕೆ ಹೋಗಿದೆ. 2 ತಂಡಗಳ ನಡುವೆ ಭೀಕರ ಮಾರಾಮಾರಿ ನಡೆದು ಕ್ರಿಕೆಟ್ ಮೈದಾನದಲ್ಲಿ ರಕ್ತ ಚೆಲ್ಲಾಡಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ಭಾರತದ ನೆರೆಯ ದೇಶ ಬಾಂಗ್ಲಾದಲ್ಲಿ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ವೇಳೆ ಆಟಗಾರರ ನಡುವೆ ಕಿರಕ್ ಆಗಿದ್ದು, 6 ಕಲಾವಿದರು ಗಾಯಗೊಂಡು ಈಗ ಆಸ್ಪತ್ರೆ ಸೇರಿದ್ದಾರೆ. ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಈ ಮೂಲಕ ದುರಂತ ಒಂದು ನಡೆದು ಹೋಗಿದೆ. ಅಲ್ಲದೆ ಬಾಂಗ್ಲಾದೇಶ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ವೇಳೆ ಆಟಗಾರರ ನಡುವೆ ನಡೆದ ಗಲಾಟೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಗಲಾಟೆ ಶುರುವಾಗಿದ್ದು ಯಾವ ಕಾರಣಕ್ಕೆ? ದಿಢೀರ್ ರೊಚ್ಚಿಗೆದ್ದು ಎರಡೂ ತಂಡಗಳ ಆಟಗಾರರು ಕಾನೂನು ಕೈಗೆತ್ತಿಕೊಂಡಿದ್ದು ಏಕೆ?

ಸಣ್ಣ ವಿಚಾರಕ್ಕೆ ದೊಡ್ಡ ಘರ್ಷಣೆ!
ಅಷ್ಟಕ್ಕೂ ಬಾಂಗ್ಲಾದೇಶದ ಚಲನಚಿತ್ರ ನಿರ್ಮಾಪಕ ಮೊಸ್ತಫಾ ಕಮಲ್ ರಾಝ್ & ದೀಪಂಕರ್ ಡಿಪೋನ್ ತಂಡದ ನಡುವಿನ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಈ ರೀತಿ ಗಲಾಟೆ ನಡೆದಿದೆ. ಮ್ಯಾಚ್ ನಡೆಯುವಾಗ ಅಂಪೈರ್ ತಪ್ಪು ನಿರ್ಧಾರದ ಹಿನ್ನೆಲೆ ಜಗಳ ನಡೆದಿದೆ ಎನ್ನಲಾಗಿದೆ. ಸೆಮಿ ಫೈನಲ್‌ಗೂ ಮುನ್ನ ಆಟ ರದ್ದು ಮಾಡಲಾಗಿದೆಯಂತೆ. ಈ ಮೂಲಕ ಸಣ್ಣ ವಿವಾದ ದೊಡ್ಡ ರೂಪ ಪಡೆದು ಕ್ರಿಕೆಟ್ ಮೈದಾನದಲ್ಲಿ ರಕ್ತ ಚೆಲ್ಲಾಡಿದೆ.
ತಳ್ಳಾಟ, ನೂಕಾಟ ಬಲು ಜೋರು!
ಬೌಂಡರಿ ಅಥವಾ ಔಟ್ ಎಂಬ ನಿರ್ಣಯದ ಬಗ್ಗೆ ಎರಡೂ ತಂಡದ ನಡುವೆ ಗಲಾಟೆಯು ಶುರುವಾಗಿತ್ತು ಎನ್ನಲಾಗಿದೆ. ಆಗಲೇ ಪರಿಸ್ಥಿತಿ ನಿಭಾಯಿಸಲು ಅಂಪೈರ್ ಪ್ರಯತ್ನಿಸಿದ್ದಾರೆ. ಆದ್ರೆ ಮಾತು ಕೇಳದೆ ಉಗುರಲ್ಲಿ ಹೋಗುವ ವಿಚಾರಕ್ಕೆ ಬ್ಯಾಟ್ ತಂದ ಬಾಂಗ್ಲಾ ಸಿನಿಮಾ ಕಲಾವಿದರು, ಬಡಿದಾಟ ಶುರು ಮಾಡಿದ್ದಾರೆ. ಮತ್ತೊಂದು ಕಡೆ ತಳ್ಳಾಟ & ನೂಕಾಟವು ಕೂಡ ಜೋರಾಗಿತ್ತು. ನೋಡ ನೋಡುತ್ತಲೇ ಈ ರೀತಿ ಗಲಾಟೆ ದೊಡ್ಡದಾದ ಹಿನ್ನೆಲೆ ಆ ಮೈದಾನದಲ್ಲಿ ನೆರೆದಿದ್ದ ಇತರ ಕಲಾವಿದರು ಹಾಗೂ ಪ್ರೇಕ್ಷಕರು ಬೆಚ್ಚಿಬಿದ್ದರು.
Celebrity Cricket League has turned into WWE Royal Rumble. 😂
— Saif Ahmed 🇧🇩 (@saifahmed75) September 30, 2023
- 6 people got injured
- Tournament got cancelled before semis
30+ year old male & female adults fighting over boundary & out decision in a ‘friendly’ tournament. 🤣 pic.twitter.com/FOAxEI00rz
ಒಟ್ನಲ್ಲಿ ಸುಮ್ನೆ ಕ್ರಿಕೆಟ್ ಆಡಿ ಮನೆಗೆ ಹೋಗುವ ಬದಲು ಬ್ಯಾಟ್ ತಂದು ಬಡಿದಾಡಿದ್ದಾರೆ ಬಾಂಗ್ಲಾದೇಶ ಸಿನಿಮಾ ಕಲಾವಿದರು. ಹಾಗೇ ಇವರ ಈ ಜಗಳ ಈಗ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಬಾಂಗ್ಲಾದೇಶದ ಮರ್ಯಾದಿ ಹರಾಜು ಹಾಕಿದ್ದು, ವಿಡಿಯೋ ಕೂಡ ವೈರಲ್ ಆಗುವಂತೆ ಮಾಡಿದೆ. ಇನ್ನು ಈ ಘಟನೆಯ ಕುರಿತು ಸ್ಥಳೀಯ ಪೊಲೀಸರು ಕೂಡ ತನಿಖೆ ಆರಂಭಿಸಿದ್ದಾರೆ. ಘರ್ಷಣೆ ವೇಳೆ ಗಾಯಗೊಂಡ ಕಲಾವಿದರಿಗೆ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications