ಬಾಗ್ದಾದ್ ನಲ್ಲಿ ಆತ್ಮಾಹುತಿ ದಾಳಿ: 38ಕ್ಕೂ ಅಧಿಕ ಮಂದಿ ಸಾವು

ಬಾಗ್ದಾದ್, ಜನವರಿ 15 : ಇಲ್ಲ ತಾಯ್ರಾನ್ ಸ್ಕ್ವೇರ್ ನಲ್ಲಿ ನಡೆದ ಎರಡು ಆತ್ಮಾಹುತಿ ದಾಳಿಯಲ್ಲಿ ಕನಿಷ್ಟ 38 ಮಂದಿ ಸಾವಿಗೀಡಾಗಿದ್ದು, 90ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಉತ್ತರ ಬಾಗ್ದಾದ್ ನ ಕಧ್ಮಿಯಾದ ಶಿಯಾ ಜಿಲ್ಲೆಯ ಅದೇನ್ ಸ್ಕ್ವೈರ್ ನಲ್ಲಿ ಆತ್ಮಾಹುತಿ ದಾಳಿಯಾದ ಎರಡು ದಿನಗಳ ಬಳಿಕ ಈ ದಾಳಿಗಳು ನಡೆದಿವೆ ಎಂದು ಕುರ್ದಿಸ್ತಾನ್ 24 ನ್ಯೂಸ್ ವರದಿ ಮಾಡಿದೆ.

ಇರಾಕಿನಲ್ಲಿ ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ಆತ್ಮಾಹುತಿ ದಾಳಿ ನಡೆದಿದ್ದು, ಯಾವುದೇ ಸಂಘಟನೆಗಳು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

Baghdad double suicide bomb blast more than 38 killed

ಐಎಸ್ ಉಗ್ರರ ಕಪಿಮುಷ್ಟಿಯಲ್ಲಿದ್ದ ಅನೇಕ ಭಾಗಗಳನ್ನು ಬಾಗ್ದಾದಿನ ಮಿಲಿಟರಿ ಪಡೆ ತಮ್ಮ ವಶಕ್ಕೆ ಪಡೆದು ಶಾಂತಿ ನೆಲೆಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಯುಎಸ್ ಹಾಗೂ ಇರಾಕಿ ಜಂಟಿ ಕಾರ್ಯಾಚರಣೆ ಮೂಲಕ ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ನಿಯಂತ್ರಿಸಲಾಗಿತ್ತು. ಆದರೆ, ಈಗ ಮತ್ತೊಮ್ಮೆ ಆತ್ಮಾಹುತಿ ದಾಳಿ ನಡೆದಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+