ಲೆಬನಾನ್‌ನಿಂದ ಕ್ಷಿಪಣಿ ದಾಳಿ- ಹಮಾಸ್‌ನಂತೆ ಇಸ್ರೇಲ್‌ಗೆ ನುಗ್ಗಲು ಯತ್ನಿಸುತ್ತಿರುವ ಇರಾನ್ ಬೆಂಬಲಿತ ಹಿಜ್ಬುಲ್ಲಾಗಳು
ಗಾಜಾ ಪಟ್ಟಿಯಲ್ಲಿ ಭೀಕರ ದಾಳಿ ನಡೆಸುತ್ತಿರುವ ಇಸ್ರೇಲ್‌ಗೆ ಹೊಸದೊಂದು ಸಂಕಷ್ಟ ಎದುರಾಗಿದೆ. ಉತ್ತರ ಇಸ್ರೇಲ್‌ಗೆ ಅಂಟಿಕೊಂಡಿರುವ ಲಿಬನಾನ್ ಕಡೆಯಿಂದ ಕ್ಷಿಪಣಿಗಳು ಹಾರಲು ಆರಂಭಿಸಿವೆ. ಇರಾನ್ ಬೆಂಬಲಿತ ಹಿಜ್ಬೊಲ್ಲಾ ಉಗ್ರರು ಈ ಕೃತ್ಯಗಳನ್ನು ಎಸಗುತ್ತಿದ್ದಾರೆ. ದಕ್ಷಿಣದಲ್ಲಿ ಹಮಾಸ್ ಉಗ್ರರನ್ನು ಎದುರುಸುತ್ತಿರುವ ಇಸ್ರೇಲ್ ಉತ್ತರದಲ್ಲಿ ಹಿಜ್ಬೊಲ್ಲಾಗಳನ್ನು ಎದುರಿಸಬೇಕಾದ ಅನಿವಾರ್ಯತೆ ಬಂದೊದಗಿದೆ.
ಲೆಬನಾನ್ ಕಡೆಯಿಂದ ಬುಧವಾರ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿ ಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರತಿದಾಳಿ ನಡೆಸಿದೆ. ಘಟನೆಯಲ್ಲಿ ಮೂವರು ಯೋಧರು ಕೊಲ್ಲಲ್ಪಟ್ಟಿದ್ದಾರೆ.

ಹಿಜ್ಬೊಲ್ಲಾಗಳು ಈ ಕೃತ್ಯಗಳನ್ನು ಎಸಗುತ್ತಿರುವ ಬಗ್ಗೆ ವರದಿಯಾಗಿದೆ. ಉತ್ತರ ಇಸ್ರೇಲ್ ಗಡಿಯಲ್ಲಿ ನೆಲೆಸಿರುವ ಇವರಿಗೆ ಇರಾನ್ ಬೆಂಬಲಿಸುತ್ತಿದೆ. ಇವರ ಕಾರ್ಯಾಚರಣೆಗಾಗಿ ಶಸ್ತ್ರಾಸ್ತ ಹಾಗೂ ಹಣದ ಸಹಾಯವನ್ನು ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಅಕ್ಟೋಬರ್ 7 ರಂದು ಇಸ್ರೇಲ್‌ನೊಳಗೆ ನುಗ್ಗಿರುವ ಹಮಾಸ್ ಉಗ್ರರ ರೀತಿಯಲ್ಲಿಯೇ ಕಾರ್ಯಚರಣೆ ನಡೆಸಲು ಹಿಜ್ಬುಲ್ಲಾಗಳು ಮುಂದಾಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಇದೆ ಎಂದು ವರದಿಯಾಗಿದೆ.
ಪ್ರಬಲ ಸಶಸ್ತ್ರ ಭಯೋತ್ಪಾದಕ ಸಂಘಟನೆಯಾಗಿರುವ ಹಿಜ್ಬುಲ್ಲಾಗಳು ಹೊಸದಾಗಿ ರಾಕೆಟ್ ದಾಳಿ ನಡೆಸಿದ್ದಾರೆ. ಪ್ರತಿದಾಳಿ ನಡೆಸಿರುವ ಇಸ್ರೇಲಿ ಪಡೆಗಳು ಬುಧವಾರ ದಕ್ಷಿಣ ಲೆಬನಾನಿನ ಪಟ್ಟಣಗಳನ್ನು ಗುರಿಯಾಗಿಸಿ ಶೆಲ್‌ಗಳನ್ನು ಹಾರಿಸಿವೆ.

ಹೆಜ್ಬುಲ್ಲಾಗಳು ಯಹೂದಿಗಳು ವಾಸಿಸುತ್ತಿರುವ ಊರುಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಇಸ್ರೇಲ್‌ನ ಧೈರಾ ಗ್ರಾಮದಲ್ಲಿ ಕ್ಷಿಪಣಿಗಳನ್ನು ಹಾರಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಹೆಜ್ಬುಲ್ಲಾ ಸಂಘಟನೆ, ಯಹೂದಿಗಳು ನಮ್ಮ ಸಹೋದರರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ನಮ್ಮ ಸಹೋದರರು ಹುತಾತ್ಮರಾಗಿದ್ದಾರೆ. ಇದಕ್ಕೆ ನಾವು ಪ್ರತಿಕಾರವನ್ನು ತೀರಿಸಿಕೊಳ್ಳುತ್ತೇವೆ ಎಂದು ಹೇಳಿದೆ.
ಲೆಬನಾನ್‌ನ ಹಲವು ಸ್ಥಳಗಳಲ್ಲಿ ಇಸ್ರೇಲ್ ಗುಂಡಿನ ದಾಳಿ ನಡೆಸಿದೆ. ಅದಕ್ಕೆ ಪ್ರತಿಕಾರವಾಗಿ ಹಿಜ್ಬುಲ್ಲಾಗಳು ಮೆಷಿನ್ ಗನ್‌ಗಳಿಂದ ಪ್ರತಿದಾಳಿ ನಡೆಸಿದ್ದಾರೆ ಲೆಬನಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆಯು ವರದಿ ಮಾಡಿದೆ.

ಲೆಬನಾನ್ ಭದ್ರತಾ ಮೂಲವೊಂದು ಹೇಳುವಂತೆ ಹಿಜ್ಬುಲ್ಲಾ ಎರಡು ನಿಖರ ಕ್ಷಿಪಣಿಗಳನ್ನು ಇಸ್ರೇಲ್‌ಗೆ ಹಾರಿಸಿದೆ.
ಈ ವರೆಗಿನ ಹಮಾಸ್ ದಾಳಿಯಲ್ಲಿ 1,200 ಕ್ಕೂ ಹೆಚ್ಚು ಜನರನ್ನು ಅಸುನೀಗಿದ್ದಾರೆ. ಹಮಾಸ್ ಉಗ್ರಗಾಮಿಗಳ ವಿರುದ್ಧ ಪ್ರತೀಕಾರದ ಕಾರ್ಯಾಚರಣೆಯಲ್ಲಿ ಇಸ್ರೇಲ್ ಗಾಜಾದ ಸುತ್ತಲೂ ಪಡೆಗಳನ್ನು ನಿಯೋಜಿಸಿದೆ. ಗಾಜಾದ ಮೇಲೆ ಬಾಂಬುಗಳ ಸುರಿಮಳೆಯನ್ನೇ ಗೈಯುತ್ತಿದೆ.
ಇಸ್ರೇಲಿ ಸೈನಿಕರು ಮತ್ತು ನಾಗರಿಕರನ್ನು ಹಮಾಸ್ ಒತ್ತೆಯಾಳಾಗಿ ಇರಿಸಿಕೊಂಡಿದೆ. ಇಸ್ರೇಲ್ ದಾಳಿಯನ್ನು ಮುಂದುವರಿಸಿದರೆ ಎಲ್ಲರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದೆ.
260,000 ಕ್ಕೂ ಹೆಚ್ಚು ಗಾಜಾ ನಿವಾಸಿಗಳು ಮನೆಗಳನ್ನು ಕಳೆದುಕೊಂಡಿರುವ ಬಗ್ಗೆ ವಿಶ್ವಸಂಸ್ಥೆ ಹೇಳಿದೆ. ಶನಿವಾರದ ಆಕ್ರಮಣದಿಂದ ಇಸ್ರೇಲ್‌ನಲ್ಲಿ 155 ಸೈನಿಕರು ಸೇರಿದಂತೆ 1,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ತಿಳಿಸಿದೆ.
950 ಪ್ಯಾಲೆಸ್ಟೀನಿಯನ್ನರು ಇಸ್ರೇಲಿ ಮಿಲಿಟರಿ ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇಸ್ರೇಲ್‌ನಲ್ಲಿ ನೆಲೆಸಿರುವ 18,000 ಭಾರತೀಯ ಪ್ರಜೆಗಳಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಾಗರಿಕರಿಗೆ ನೆರವು ನೀಡಲು ಭಾರತವು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.












Click it and Unblock the Notifications