Islamabad: ದೆಹಲಿ ದಾಳಿ ಬೆನ್ನಲ್ಲೇ ಪಾಪಿ ಪಾಕಿಸ್ತಾನದಲ್ಲೂ ಭೀಕರ ಸ್ಫೋಟ, 6 ಜನರ ಸಾವು
ಇಸ್ಲಾಮಾಬಾದ್: ಉಗ್ರರ ತವರು ಎಂಬ ಕೆಟ್ಟ ಹೆಸರು ಪಡೆದಿರುವ ಪಾಕಿಸ್ತಾನದಲ್ಲಿ ಇಂದು ಭೀಕರ ಘಟನೆ ಸಂಭವಿಸಿದೆ. ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣ ಬಳಿ ಸಂಭವಿಸಿರುವ ಭೀಕರ ಸ್ಫೋಟದ ಪರಿಣಾಮ 6 ಜನ ಮೃತಪಟ್ಟಿದ್ದು, ಸುಮಾರು 20 ರಿಂದ 25 ಜನ ಗಾಯಗೊಂಡಿದ್ದಾರೆ ಎಂದು ಈಗ ವರದಿಯಾಗಿದೆ. ನಿನ್ನೆಯಷ್ಟೇ ನಮ್ಮ ದೇಶದ ರಾಜಧಾನಿ ದೆಹಲಿ ಹೃದಯ ಭಾಗದಲ್ಲಿ ಭೀಕರ ಬ್ಲಾಸ್ಟ್ ಆಗಿದ್ದು ಭಾರಿ ದೊಡ್ಡ ಮಟ್ಟಿಗೆ ಸಂಚಲನ ಸೃಷ್ಟಿ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಶತ್ರು ದೇಶದಲ್ಲೂ ಭೀಕರ ಸ್ಫೋಟವಾಗಿದೆ.
ಭಯೋತ್ಪಾದನೆ ಬೆಳೆಸುತ್ತಾ, ಭಯೋತ್ಪಾದಕರಿಗೆ ಬೆನ್ನೆಲುಬಾಗಿ ನಿಂತಿರುವ ಪಾಕಿಸ್ತಾನಕ್ಕೆ ಈಗಾಗಲೇ ಸಾಕಷ್ಟು ಸವಾಲುಗಳು ಎದುರಾಗಿವೆ. ಹೀಗಿದ್ದರೂ ಉಗ್ರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆ ಪಾಕಿಸ್ತಾನದಲ್ಲಿ ಭಯೋತ್ಪಾದಕರ ಹಾವಳಿ ಹೆಚ್ಚಾಗಿದೆ. ಇಂದು ಕೂಡ ಪಾಕಿಸ್ತಾನದ ಇಸ್ಲಾಮಾಬಾದ್ ಪ್ರದೇಶದಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿದ್ದು, ದಿಢೀರ್ ಸಂಭವಿಸಿರುವ ಸ್ಫೋಟದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ನಿಲ್ಲಿಸಿರುವ ವಾಹನದ ಒಳಗೆ ಇದ್ದ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿ ಘಟನೆ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಹೊರ ಬಿದ್ದಿರುವ ಮಾಹಿತಿ.

5 ಕಿ.ಮೀ. ದೂರಕ್ಕೂ ಕೇಳಿದ ಸ್ಫೋಟದ ಸದ್ದು!
ಮಧ್ಯಾಹ್ನದ ಹೊತ್ತಿನಲ್ಲಿ ಜನರು ಹೆಚ್ಚಾಗಿರುವ ಸಮಯದಲ್ಲೇ ಈ ರೀತಿಯ ದಾಳಿ ಮಾಡಲಾಗಿದ್ದು, ಉಗ್ರರಿಂದಲೇ ಆಗಿರುವ ಕೃತ್ಯ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಸ್ಫೋಟ ಕೋರ್ಟ್ ಆವರಣದಲ್ಲಿ ಇದ್ದ ವಕೀಲರಲ್ಲಿ ಭಯ ಮೂಡಿಸಿತ್ತು, ತಕ್ಷಣವೇ ಎಲ್ಲರೂ ಓಡಿ ಹೋಗಿದ್ದಾರೆ. ಹಾಗೇ ಬ್ಲಾಸ್ಟ್ ಅದೆಷ್ಟು ತೀವ್ರವಾಗಿತ್ತು ಎಂದರೆ, 5 ಕಿಲೋ ಮೀಟರ್ ದೂರಕ್ಕೂ ಸ್ಫೋಟದ ಸದ್ದು ಕೇಳಿಸಿದೆ. ಸುತ್ತಮುತ್ತಲು ಇದ್ದ ವಾಹನಗಳು ಕೂಡ ಸ್ಫೋಟದಲ್ಲಿ ಹಾನಿಗೀಡಾಗಿದ್ದು, ಗಾಯಗೊಂಡವರ ಪೈಕಿ ಹೆಚ್ಚಿನ ಜನರು ವಕೀಲರು & ಕೋರ್ಟ್ನಲ್ಲಿ ಕೆಲಸ ಮಾಡುವ ಸಿಬ್ಬಂದಿ. ಮತ್ತೊಂದು ಕಡೆ ಪೊಲೀಸರು ಆತ್ಮಹತ್ಯಾ ದಾಳಿ ಇದಾಗಿರಬಹುದು ಎಂದು ಶಂಕಿಸಿದ್ದಾರೆ.
ದೆಹಲಿ ಘಟನೆ ನಂತರ ಪಾಪಿ ಪಾಕಿಸ್ತಾನ...
ನಿನ್ನೆ ರಾತ್ರಿ ಭಾರತದ ರಾಜಧಾನಿ ದೆಹಲಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಸಂಚಲನ ಸೃಷ್ಟಿಯಾಗಿದೆ. ದೆಹಲಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಈ ಸ್ಫೋಟದ ತೀವ್ರತೆ ಹಿನ್ನೆಲೆ ಭಾರಿ ದೊಡ್ಡ ಹಾನಿ ಉಂಟಾಗಿದೆ. ದಿಢೀರ್ ಕಾರಿನ ಒಳಗಡೆ ಸಂಭವಿಸಿದ ಈ ಸ್ಫೋಟದ ಪರಿಣಾಮ ಈವರೆಗೂ 9 ಸಾವು, ಹಲವರು ಗಾಯಗೊಂಡಿದ್ದಾರೆ. ಹೀಗಿದ್ದಾಗ ಪಾಕಿಸ್ತಾನ ನೆಲದಲ್ಲೂ ಭಾರಿ ದೊಡ್ಡ ಬ್ಲಾಸ್ಟ್ ಆಗಿರುವುದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸದಾ ಉಗ್ರರನ್ನು ಬೆಂಬಲಿಸುವ ಪಾಕಿಸ್ತಾನ ಅದೇ ಉಗ್ರರಿಂದ ಪೆಟ್ಟು ತಿನ್ನುತ್ತಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications