ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ
ಬೆಂಗಳೂರು: ವರ್ಷಗಳ ವಿಳಂಬ, ಒಂದಷ್ಟು ವಿರೋಧದ ಬಳಿಕಇದೀಗ ಬೆಂಗಳೂರು ಪರಿಫೆರಲ್ ರಿಂಗ ರಸ್ತೆ (Bengaluru PRR Project) ಹಳಿಗೆ ಬಂದಿದೆ. ಈ ಯೋಜನೆ ಕೈಗೆತ್ತಿಕೊಂಡಿರುವ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (BDA) ಇದೀಗ ಬಹುಕೋಟಿ ವೆಚ್ಚದಲ್ಲಿ ಮೊದಲ ಹಂತದ ಪ್ಯಾಕೇಜ್‌ಗಾಗಿ ಟೆಂಡರ್ ಆಹ್ವಾನಿಸಿದೆ. ಇದರಿಂದ 'ಬೆಂಗಳೂರು ಬಿಸಿನೆಸ್ ಕಾರಿಡಾರ್' ಯೋಜನೆಗೆ ವೇಗ ಸಿಕ್ಕಂತಾಗಿದೆ.
ದೀರ್ಘಕಾಲದಿಂದ ಬಾಕಿ ಉಳಿದಿದ್ದ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಪಿಆರ್‌ಆರ್ ಒಟ್ಟು ಯೋಜನೆ ಪೈಕಿ ಮೊದಲ ಹಂತದಲ್ಲಿ ಸುಮಾರು 20 ಕಿ.ಮೀ. ಉದ್ದದ ರಸ್ತೆಯಲ್ಲಿ ಮೊದಲ ಪ್ಯಾಕೇಜ್ ನಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಆರಂಭಿಸಬೇಕಿರುವ ಸಿವಿಲ್ ಕೆಲಸಗಳಿಗಾಗಿ ಬಿಡಿಎ ಅಂದಾಜು ವೆಚ್ಚ ರೂ. 3,348 ಕೋಟಿ ರೂ. ಟೆಂಡರ್‌ಗಳನ್ನು ಕರೆದಿದೆ ಎಂದು 'ಮನಿ ಕಂಟ್ರೋಲ್' ವರದಿ ಮಾಡಿದೆ.

ಪ್ಯಾಕೇಜ್ 1ರ ಕಾಮಗಾರಿ ಆರಂಭ ಶೀಘ್ರ
ಮೊದಲ ಹಂತದ ಪ್ಯಾಕೇಜ್‌ನಡಿ ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆಯವರೆಗೆ ಬೆಂಗಳೂರು ಸುತ್ತುರಿದ ರಸ್ತೆ ಬಿಬಿಸಿ (ಪಿಆರ್‌ಆರ್1) ಪ್ಯಾಕೇಜ್ ನಿರ್ಮಾಣಗೊಳ್ಳಲಿದೆ. ಬೆಂಗಳೂರಿನ ಸಂಚಾರ ದಟ್ಟಣೆಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಲಿದೆ. ಈ ಯೋಜನೆಯನ್ನು ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಮತ್ತು ವರ್ಗಾವಣೆ (ಡಿಬಿಒಟಿ) ಮಾದರಿಯಲ್ಲಿ ಕಾರ್ಯಗತಗೊಳಿಸಲು ಬಿಡಿಎ ಯೋಜಿಸಿದೆ. ಟೆಂಡರ್ ಪ್ರಕ್ರಿಯೆ ಬಳಿಕ ಶೀಘ್ರವೇ ಸಿವಿಲ್ ಕೆಲಸಗಳು ಆರಂಭವಾಗಲಿವೆ.
ಯೋಜನೆ ಪೂರ್ಣಕ್ಕೆ ಗಡುವು
ಈ ಟೆಂಡರ್ ಕುರಿತು ಬೆಂಗಳೂರು ಬಿಸಿನೆಸ್ ಕಾರಿಡಾರ್ ಲಿಮಿಟೆಡ್ ಚೇರ್‌ಮನ್ ಎಲ್.ಕೆ.ಅತೀಕ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಆಹ್ವಾನಿಸಲಾದ ಟೆಂಡರ್ ದಾಖಲೆಯಲ್ಲಿ ನೀಡಿದ ಮಾಹಿತಿ ಪ್ರಕಾರ, ಯಾವುದೇ ಕಂಪನಿ ಟೆಂಡರ್ ಪಡೆದರೂ ಸಹಿತ ಒಟ್ಟು ಮೂರು ವರ್ಷಗಳಲ್ಲಿ (36 ತಿಂಗಳು) ಯೋಜನೆ ಮುಗಿಸಬೇಕು. ಸದರಿ ಟೆಂಡರ್ ಮುಂದಿನ ಮೇ ತಿಂಗಳು ಅಂತಿಮವಾಗುವ ಸಾಧ್ಯತೆ ಇದೆ.
ಮೊದಲ ಹಂತದಲ್ಲಿ ಎಲ್ಲಿಂದ ಎಲ್ಲಿಗೆ ರಸ್ತೆ ನಿರ್ಮಾಣ?
ಈ ರಸ್ತೆ ಮೂಲಸೌಕರ್ಯ ಯೋಜನೆಯು ಪ್ರಮುಖ ಮೈಲಿಗಲ್ಲು ಹಂತ ತಲುಪಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಮೊದಲ ಹಂತದ ಪ್ಯಾಕೇಜ್‌ನಡಿ ನಾವು ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ಮಾದವರ (ನೆಲಮಂಗಲ ಬಳಿ) ದಿಂದ ವಿಮಾನ ನಿಲ್ದಾಣ/ಬಳ್ಳಾರಿ ರಸ್ತೆ ಸ್ಥಾಪನೆಗೆ ಟೆಂಡರ್ ಆಹ್ವಾನಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೆಚ್ಚಾದ ಅಂದಾಜು ವೆಚ್ಚ!
ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯ ಸದರಿ ಪ್ಯಾಕೇಜ್‌ಗಾಗಿ ಭೂಸ್ವಾಧೀನ ಶೇ. 83 ರಷ್ಟು ಪೂರ್ಣಗೊಂಡಿದೆ ಬಿಡಿಎ ವಸತಿ ಮತ್ತು ನಗರಾಭಿವೃದ್ಧಿ ನಿಗಮ (ಹಡ್ಕೊ) ದಿದ ಸಾಲವಾಗಿ ಅಂದಾಜು 27,000 ಕೋಟಿ ರೂಪಾಯಿ ಒದಗಿಸುತ್ತಿದೆ. ಭೂಸ್ವಾಧೀನಕ್ಕೆ ಸುಮಾರು 21,000 ಕೋಟಿ ಹಂಚಿಕೆ ಆಗಿದೆ. ಬಾಕಿ ಹಂತ ಹಂತವಾಗಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಳಂಬ, ವಿನ್ಯಾಸ ಬಸಲಾವಣೆ, ಇನ್ನಿತರ ಕಾರಣಗಳಿಂದಾಗಿ ಅಂದಾಜು ವೆಚ್ಚವು ಏರಿಕೆ ಆಗಿದೆ. ಯೋಜನೆಯಲ್ಲಿ ಒಂದಷ್ಟು ಪ್ರಮುಖ ಮಾರ್ಪಾಡುಗಳನ್ನು ಮಾಡಲಾಗಿಎ. ಮಾದವರದಲ್ಲಿ ನೈಸ್ ರಸ್ತೆ ಇದ್ದು, ಅದರೊಂದಿಗೆ ಏಕೀಕರಣ ಮಾಡಲು ಪ್ಲಾನ್ ಮಾಡಲಿದ್ದು, ಅಲ್ಲಿ ಎರಡು ದೊಡ್ಡ ಲೂಪ್‌ಗಳನ್ನು ನಿರ್ಮಿಸುವುದು ಯೋಜನೆಯಲ್ಲಿ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಯಲ್ಲಿ ಸರ್ವೀಸ್ (ಸೇವಾ) ರಸ್ತೆ ಲೈನ್‌ಗಳ ಅಗಳವನ್ನು 50 ಮೀಟರ್‌ಗಳಿಂದ 65 ಮೀಟರ್‌ಗೆ ವಿಸ್ತರಿಸಲಾಗಿದೆ. ದೊಡ್ಡಬಳ್ಳಾಪುರ ರಸ್ತೆಯಲ್ಲಿ ಕ್ಲೋವರ್‌ಲೀಫ್ ಇಂಟರ್‌ಚೇಂಜ್ ಪರಿಚಿಸಲಾಗುವುದು. ಮೂರು ವರ್ಷಗಳ ಹಿಂದೆ (2023-24 ರಲ್ಲಿ) ಯೋಜನೆ ಶುರುವಾಗಿದ್ದರೆ ಸದರಿ ಅಂದಾಜು ವೆಚ್ಚ ಕಡಿಮೆ ಆಗಿರುತ್ತಿತ್ತು. ಆದರೆ ಎರಡರಿಂದ ಮೂರು ವರ್ಷಗಳ ವಿಳಂಬದಿಂದಾಗಿ ಅಂದಾಜಿ ವೆಚ್ಚ ಗಮನಾರ್ಹವಾಗಿ ಏರಿಕೆ ಆಗಿದೆ. ಈ ವೆಚ್ಚದಲ್ಲಿ 10 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಸಹ ಒಳಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ಒಟ್ಟು ಪಿಆರ್‌ಆರ್ ಯೋಜನೆ ಸಂಕ್ಷಿಪ್ತ ಮಾಹಿತಿ
* ಪಿಆರ್‌ಆರ್‌ನ ಒಟ್ಟು ಹಂತ 1 ಉದ್ದ 73.4 ಕಿ.ಮೀ.
* ಒಟ್ಟು ಮೂರು ಪ್ಯಾಕೇಜ್‌ಗಳಾಗಿ ವಿಂಗಡಣೆ
* ಪ್ಯಾಕೇಜ್ 1: ತುಮಕೂರು ರಸ್ತೆ-ಬಳ್ಳಾರಿ ರಸ್ತೆ (19.8 ಕಿ.ಮೀ.)
* ಪ್ಯಾಕೇಜ್ 2: ಬಳ್ಳಾರಿ ರಸ್ತೆ-ಹಳೆ ಮದ್ರಾಸ್ ರಸ್ತೆ (18 ಕಿ.ಮೀ.)
* ಪ್ಯಾಕೇಜ್ 3: ಹಳೆಯ ಮದ್ರಾಸ್ ರಸ್ತೆ-ಹೊಸೂರು ರಸ್ತೆ (27.75 ಕಿ.ಮೀ.)












Click it and Unblock the Notifications