ಗ್ರೀಸ್: ಕಾಳ್ಗಿಚ್ಚಿಗೆ 60 ಮಂದಿ ಬಲಿ, ನೂರಾರು ಮನೆಗಳು ಬೆಂಕಿಗೆ ಆಹುತಿ

ಅಥೆನ್ಸ್, ಜುಲೈ 24: ಕಾಳ್ಗಿಚ್ಚಿನಿಂದ ಗ್ರೀಸ್ ನಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಸರಿ ಸುಮಾರು 60ಕ್ಕೂ ಅಧಿಕ ಮಂದಿ ಇಲ್ಲಿ ತನಕ ಮೃತರಾಗಿರುವ ವರದಿಗಳು ಬಂದಿವೆ. ಗ್ರೀಸ್ ಪ್ರಧಾನಿ ಅಲೆಕ್ಸಿಸ್ ಸಿಪ್ರಸ್ ದೇಶಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದ್ದಾರೆ.

ಸಾವಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಇಲ್ಲಿ ತನಕ 26 ಶವಗಳನ್ನು ಗುರುತಿಸಲಾಗಿದೆ. ಸರಿ ಸುಮಾರು 600ಕ್ಕೂ ಅಧಿಕ ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.

At least 60 killed in Greece forest fires

ಹಲವು ಮನೆಗಳು, ಮನೆ ಮುಂದಿದ್ದ ಕಾರುಗಳು ಬೆಂಕಿಗೆ ಸಿಲುಕಿ, ಸುಟ್ಟು ಕರಕಲಾಗಿವೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, 200ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 15ಕ್ಕೂ ಅಧಿಕ ಮಂದಿ ಪರಿಸ್ಥಿತಿ ಗಂಭೀರವಾಗಿದೆ.

ಅಥೆನ್ಸ್​ನಿಂದ ಸುಮಾರು 30 ಕಿ.ಮೀ., ರಫೀನಾ ಪ್ರದೇಶದಲ್ಲಿ ಕಾಳ್ಗಿಚ್ಚು ಅಧಿಕವಾಗಿ ವ್ಯಾಪ್ತಿಸಿದೆ. ಬಿಸಿ ಗಾಳಿ, ಸುಡುವ ತಾಪಮಾನದ ಪರಿಣಾಮ ಕಾಳ್ಗಿಚ್ಚು ವ್ಯಾಪಿಸುತ್ತಿದೆ.

2007 ರ ಸಂಭವಿಸಿದ್ದ ಕಾಳ್ಗಿಚ್ಚಿನಲ್ಲಿ 60 ಮಂದಿ ಮೃತಪಟ್ಟಿದ್ದರು. ಇದಾದ ಬಳಿಕ ಈಗ ಇದು ದೊಡ್ಡ ದುರಂತ ಎನಿಸಿಕೊಂಡಿದೆ.


ಯುರೋಪಿಯನ್ ಯೂನಿಯನ್ ನಿಂದ ಗ್ರೀಸ್ ಗೆ ನೆರವು ಹರಿದು ಬಂದಿದೆ. ಸ್ಪೇನ್ ಹಾಗೂ ಸಿಪ್ರಸ್ ನಿಂದ ಅಗ್ನಿಶಾಮಕ ದಳ ರವಾನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+