ಚೀನಾದಲ್ಲಿ ಭೀಕರ ಬಸ್ ಅಪಘಾತ; 36 ಜನರು ಬಲಿ
ಚೀನಾದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ 36 ಸಾವು. ಗುರುವಾರ ಮಧ್ಯರಾತ್ರಿ ಸಂಭವಿಸಿದ ಅಪಘಾತ. ಶಾಂಕ್ಸಿ ಪ್ರಾಂತ್ಯದಲ್ಲಿರುವ ಸುರಂಗದಲ್ಲಿ ಹಾದು ಹೋಗುವಾಗ ಸಂಭವಿಸಿದ ಅಪಘಾತ.
ಬೀಜಿಂಗ್, ಆಗಸ್ಟ್ 11: ಇಲ್ಲಿನ ಶಾಂಕ್ಸಿ ಪ್ರಾಂತ್ಯದಲ್ಲಿ ಗುರುವಾರ (ಆಗಸ್ಟ್ 10) ಮಧ್ಯರಾತ್ರಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಕನಿಷ್ಠ 36 ಪ್ರಯಾಣಿಕರು ಸಾವನ್ನಪ್ಪಿದ್ದು, 13 ಜನರು ಗಾಯಗೊಂಡಿದ್ದಾರೆ.
ಚೀನಾದ ವಾಯುವ್ಯ ಭಾಗದಲ್ಲಿರುವ ಚೆಂಗ್ಡು ಎಂಬ ಊರಿನಿಂದ ಹೊರಟಿದ್ದ ಬಸ್, ಚೀನಾದ ಕೇಂದ್ರ ಭಾಗದಲ್ಲಿರುವ ಲ್ಯೂಯೋಯಾಂಗ್ ನಗರಕ್ಕೆ ಪ್ರಯಾಣ ಬೆಳೆಸಿತ್ತು.

ಮಾರ್ಗ ಮಧ್ಯೆ, ಶಾಂಕ್ಸಿ ಪ್ರಾಂತ್ಯದಲ್ಲಿರುವ ಸುರಂಗ ಮಾರ್ಗದ ಮೂಲಕ ಹಾದು ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್, ಸುರಂಗದ ಗೋಡೆಗೆ ರಭಸವಾಗಿ ಢಿಕ್ಕಿ ಹೊಡೆದು ಪಲ್ಟಿಯಾಯಿತೆಂದು, ಅಪಘಾತದಲ್ಲಿ ಬದುಕುಳಿದ ಪ್ರಯಾಣಿಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚೀನಾದ ಸಿಯುಚುವಾನ್ ಪ್ರಾಂತ್ಯದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ್ದ ಭೂಕಂಪಕ್ಕೆ 20 ಜನರು ಮೃತರಾಗಿದ್ದ ದುರ್ಘಟನೆ ಮರೆಯುವ ಮುನ್ನವೇ ಈ ಬಸ್ ದುರಂತವಾಗಿರುವುದು ಚೀನಾದ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.












Click it and Unblock the Notifications