ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಿಂದ 30 ಮಂದಿ ಸಾವು
ಕಾಬೂಲ್, ಏಪ್ರಿಲ್ 16: ತಾಲಿಬಾನ್ ದಾಳಿಗೆ ತತ್ತರಿಸಿದ್ದ ಅಫ್ಘಾನಿಸ್ತಾನ ದೇಶದ ಪ್ರಜೆಗಳು ಪಾಕಿಸ್ತಾನದಿಂದಲೂ ತೀವ್ರ ಹಾನಿಗೆ ತುತ್ತಾಗುತ್ತಿದ್ದು, ಕಾಬೂಲ್ ನಲ್ಲಿ ಖೋಸ್ಟ್ ಪ್ರಾಂತ್ಯದ ಮೇಲೆ ಪಾಕಿಸ್ತಾನದ ವಾಯುಸೇನೆಯ ವಿಮಾನಗಳು ವೈಮಾನಿಕ ದಾಳಿ ಮಾಡಿದ್ದು, ಅಫ್ಘಾನಿಸ್ತಾನ ರಾಷ್ಟ್ರದ 30ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರಿದಿಯಾಗಿದೆ.
ಅಫ್ಘಾನಿಸ್ತಾನವನ್ನು ತನ್ನ ಹಿಡಿತದಲ್ಲಿ ಹಿಡಿದುಕೊಂಡಿರುವ ತಾಲಿಬಾನ್ ಹಾಗೂ ಪಾಕಿಸ್ತಾನದ ದೇಶದ ಮಧ್ಯ ಉದ್ವಿಗ್ನತೆ ಹೆಚ್ಚಾಗುತ್ತಿದ್ದು ಶುಕ್ರವಾರ ರಾತ್ರಿ ಸಮಯದಲ್ಲಿ ತಾಲಿಬಾನ್ ವಿರುದ್ಧ ಪಾಕಿಸ್ತಾನ ದಾಳಿ ನಡೆಸಿದೆ ಎನ್ನಲಾಗಿದೆ.
ಅಫ್ಘಾನಿಸ್ತಾನಲ್ಲಿ ಆಕ್ರಮಣಕಾರಿ ಆಡಳಿತವನ್ನು ನಡೆಸುತ್ತಿರುವ ತಾಲಿಬಾನ್, ಪಾಕಿಸ್ತಾನದ ಸೇನೆಯ ವಿರುದ್ಧ ದಾಳಿ ಮಾಡುವ ಉದ್ದೇಶ ಹೊಂದಿದ್ದು, ಇದಕ್ಕೆ ಮೂಲ ಕಾರಣ ಪಾಕಿಸ್ತಾನವೇ ಸಾಕಿ ಬೆಳೆಸಿರುವ ಆಕ್ರಮಣಕಾರಿ ತಾಲಿಬಾನ್ ಸೇನೆಯಾಗಿದೆ. ಕಾಬೂಲ್ ಗಡಿ ಪ್ರದೇಶದಲ್ಲಿ ಪಾಕಿಸ್ತಾನಕ್ಕೂ ತಕ್ಕ ಉತ್ತರ ನೀಡಬಲ್ಲವು ಎಂಬುದನ್ನು ತಿಳಿದ ಪಾಕಿಸ್ತಾನ ವಾಯುಸೇನೆ ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದೆ.

30ಕ್ಕೂ ಹೆಚ್ಚು ಅಫ್ಘಾನಿಸ್ತಾನ ನಾಗರಿಕರು ಸಾವು:
ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಗೆ 30ಕ್ಕೂ ಹೆಚ್ಚು ಅಫ್ಘಾನಿಸ್ತಾನದ ನಾಗರಿಕರು ಸಾವನ್ನಪ್ಪಿದ್ದಾರೆ. ಮಹಿಳೆಯರು, ಮಕ್ಕಳು ಹಾಗೂ ಜನರು ವಾಸವಿದ್ದ ಖೋಸ್ಟ್ ಪ್ರಾಂತ್ಯದ ಮೇಲೆ ಶುಕ್ರವಾರ ರಾತ್ರಿ ಪಾಕಿಸ್ತಾನದ ಯುದ್ಧ ವಿಮಾನಗಳು ವೈಮಾನಿಕ ದಾಳಿ ನಡೆಸಿವೆ. ಈ ದಾಳಿಯಲ್ಲಿ ಬಾಂಬ್‌ಗಳ ಸುರಿಮಳೆ ಸುರಿಸಿದ್ದು, ಅಫ್ಘಾನಿಸ್ತಾನ ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
25ಕ್ಕೂ ಹೆಚ್ಚು ವಿಮಾನಗಳಿಂದ ದಾಳಿ:
ಪಾಕಿಸ್ತಾನ ವಾಯುಸೇನೆಯ 25ಕ್ಕೂ ಹೆಚ್ಚು ವಿಮಾನಗಳು ಖೋಸ್ಟ್ ಪ್ರಾಂತ್ಯದ ಸ್ವೌರಾ ಜಿಲ್ಲೆಯ ವಿರ್ಪಾರ್, ಮಂಡೇಹ್, ಶೈದಿ, ಕೈ ಮತ್ತು ಸ್ಥಳೀಯ ಗ್ರಾಮಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದವು. ಖೋಸ್ಟ್ ಪ್ರಾಂತ್ಯದ ತಾಲಿಬಾನ್ ಪೊಲೀಸ್ ಮುಖ್ಯಸ್ಥರ ವಕ್ತಾರ ಮುಸ್ತಗ್ಫರ್ ಗೆರ್ಬಾಝ್ ಅವರು ಖಾಸಗಿ ಪತ್ರಿಕೆಗೆ ಹೇಳಿಕೆ ನೀಡಿದ್ದು ಪಾಕಿಸ್ತಾನ ಏರ್ ಸ್ಟ್ರೈಕ್ ದಾಳಿಯನ್ನು ಖಚಿತಪಡಿಸಿದ್ದಾರೆ. ವಜಿರಿಸ್ಥಾನ್ ಪ್ರದೇಶದ ದೊಡ್ಡ ಜನಾಂಗೀಯ ಗುಂಪುಗಳು ವಾಸವಿದ್ದವು. ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 30 ಜನರು ಸಾವನ್ನಪ್ಪಿದ್ದಾರೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.
ಇನ್ನು ದಾಳಿಯ ಸಮಯದಲ್ಲಿ ಉತ್ತರ ವರ್ಜೀರಿಸ್ಥಾನಲ್ಲಿ ಪಾಕಿಸ್ತಾನ ನಡೆಸಿರುವ ಈ ದಾಳಿಗೆ ಹಲವು ಸರ್ಕಾರಿ ವಿರೋಧಿ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪಾಕಿಸ್ತಾನ ವರದಿ ಮಾಡಿದೆ. ಆದರೆ ಈವರಿಗೂ ಪಾಕಿಸ್ತಾನ ಸೇನೆಯಾಗಲಿ, ಸರ್ಕಾರವಾಗಲಿ ಮತ್ತು ಪಾಕಿಸ್ತಾನ ವಿದೇಶಾಂಗ ಸಚಿವಾಲಯವಾಗಲಿ ಇನ್ನೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications