Sunita Williams: ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ಪಯಣಕ್ಕೆ ವಿದಾಯ, ನಾಸಾದಿಂದ ನಿವೃತ್ತಿ
ಟೆಕ್ಸಾಸ್: ರಾಷ್ಟ್ರೀಯ ವಾಯುಯಾನ ಮತ್ತು ಬಾಹ್ಯಾಕಾಶ ಆಡಳಿತದ (NASA) 27 ವರ್ಷಗಳಿಂದ ಗಗನಯಾನಿಯಾಗಿದ್ದ ಸುನಿತಾ ವಿಲಿಯಮ್ಸ್ (Astronaut Sunita Williams) 27 ಅವರು ನಿವೃತ್ತಿಯಾಗಿದ್ದಾರೆ. ಈ ಬಗ್ಗೆ ನಾಸಾ ಜನವರಿ 20ರಂದು ಮಂಗಳವಾರ ಅಧಿಕೃತ ಮಾಹಿತಿ ನೀಡಿದೆ.
ಸುದೀರ್ಘ ಬಾಹ್ಯಾಕಾಶ ಪಯಣಕ್ಕೆ ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ಅವರು ವಿದಾಯ ಹೇಳಿದ್ದಾರೆ. 2025 ಡಿಸೆಂಬರ್ 27ರಂದು ನಾಸಾ ಸೇವೆಯಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ನಾಸಾ ನೆನ್ನೆ ಮಂಗಳವಾರ (ಜ.20) ಬಹಿರಂಗಪಡಿಸಿದೆ. ವಿಜ್ಞಾನ, ತಂತ್ರಜ್ಞಾನದಲ್ಲಿ ಸುನಿತಾ ಅವರ ಸಾಧನೆ ಅಮೋಘವಾದದ್ದು. ಬಾಹ್ಯಾಕಾಶದಲ್ಲಿ 608 ದಿನ ಕಳೆದು ಯಶಸ್ವಿಯಾಗಿ ಭೂಮಿಗೆ ಮರಳಿದ ದಿಟ್ಟ ಮಹಿಳೆ.

ಚಂದ್ರಯಾನ, ಮಂಗಳಯಾನದ ನಾಸಾ ಪ್ರಯತ್ನಗಳಿಗೆ ಅವರ ಯೋಜನೆ ಭದ್ರ ಅಡಿಪಾಯ ಹಾಕಿದೆ. ಅವರು ನಾಸಾ ಹಾಗೂ ದೇಶಕ್ಕೆ ನೀಡಿದ ಸೇವೆಗೆ ಧನ್ಯವಾದಗಳು ಎಂದು ನಾಸಾ ಆಡಳಿತಾಧಿಕಾರಿ ಜಾರೆಡ್ ಐಸಾಕ್ ಮ್ಯಾನ್ ತಿಳಿಸಿದ್ದಾರೆ.
ಬ್ಯಾಹ್ಯಾಕಾಶದಲ್ಲಿ ಮ್ಯಾರಾಥಾನ್ ಓಡಿದ್ದ ಗಗನಯಾನಿ
ಸುನಿತಾ ವಿಲಯಮ್ಸ್ ಅವರ ಪೂರ್ವಜರು ಭಾರತದ ಗುಜರಾತ್ ಮೂಲದವರು. ಸುನಿತಾ ಅವರ ತಂದೆ ದೀಪಕ್ ಪಾಂಡ್ಯಾ ಅವರು 1957ರಲ್ಲಿ ಅಮೆರಿಕಾ ಮೂಲದ ಮಹಿಳೆಯನ್ನು ವಿವಾಹವಾದರು. ಅಲ್ಲಿಂದ ವಿಲಿಯಮ್ಸ್ ಅವರ ಮುಂದಿನ ಪೀಳಿಗೆಯು ಅಮೆರಿಕಾದಲ್ಲಿ ನೆಲೆಸಿತು. ಮೊದಲಿನಿಂದಲೂ ಬಾಹ್ಯಾಕಾಶ, ವಿಜ್ಞಾನ, ಗಗನಯಾನ ಬಗ್ಗೆ ಆಸಕ್ತಿ ಹೊಂದಿದ್ದ ಸುನಿತಾ ಅವರು 1998ರಲ್ಲಿ ನಾಸಾ ಸೇರಿದರು. ಬ್ಯಾಹ್ಯಾಕಾಶದಲ್ಲಿ ಮ್ಯಾರಾಥಾನ್ ಓಡಿದ ಮೊದಲಿಗರು. ಒಟ್ಟು 09 ಬಾಹ್ಯಾಕಾಶ ನಡಿಗೆಗಳನ್ನು ಪೂರ್ಣಗೊಳಿಸಿದ್ದಾರೆ. 62. 6 ಗಂಟೆಗಳ ಸುದೀರ್ಘ ಬಾಹ್ಯಾಕಾಶ ನಡಿಗೆ ನಡೆದಿದ್ದಾರೆ.
ಸುನಿತಾ ವಿಲಿಯಮ್ಸ್ ಮೂರು ಬಾಹ್ಯಾಕಾಶ ಮಿಷನ್ಗಳನ್ನು ಪೂರೈಸಿದ್ದಾರೆ. 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಬಳಿಕ ಅಲ್ಲಿಂದ ಕಳೆದ ವರ್ಷ ಭೂಮಿಗೆ ತಮ್ಮ ತಂಡದೊಂದಿಗೆ ಸುರಕ್ಷಿತವಾಗಿ ಮರಳಿದ್ದರು. ಅದಾದ ಬಳಿಕ ಅವರು ನಾಸಾ ಸೇವೆಯಿಂದ ನಿವೃತ್ತಿ ಘೋಷಿಸಿದ್ದರು. ಅದನ್ನು ನಾಸಾ 2026ರಲ್ಲಿ ಘೋಷಿಸಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications