ಕೊವಿಡ್ 19: ಆಸ್ಟ್ರಾಜೆನೆಕಾ ಲಸಿಕೆ ಬಳಕೆ ಆರಂಭಿಸಿದ ಯುಕೆ

ಯುಕೆಯಲ್ಲಿ ಕೊವಿಡ್ 19 ರೋಗಿಗಳ ಮೇಲೆ ಆಸ್ಟ್ರಾಜೆನೆಕಾ ಲಸಿಕೆ ಪ್ರಯೋಗವನ್ನು ಆರಂಭಿಸಿದ್ದಾರೆ.

Recommended Video

      Neelakanta Bhanu Prakash ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕ್ಯುಲೇಟರ್ | Oneindia Kannada

      ಈ ಲಸಿಕೆಯನ್ನು ಪ್ರತಿಕಾಯಗಳ ವೃದ್ಧಿಗಾಗಿ ನೀಡಲಾಗುತ್ತಿದೆ. ಇದು ಕೊರೊನಾ ಸೋಂಕನ್ನು ಕಡಿಮೆ ಮಾಡಬಹುದು ಎಂದು ಅಂದಾಜಿಸಲಾಗಿದೆ.

      ಈ ಲಸಿಕೆಯನ್ನು AZD7442 ಎಂದು ಕರೆಯಲಾಗುತ್ತದೆ. ಈಗಾಗಲೇ ಸೋಂಕಿಗೆ ತುತ್ತಾಗಿರುವವರಿಗೆ ಲಸಿಕೆ ನೀಡಲಾಗುತ್ತಿದ್ದು, ಈ ಲಸಿಕೆ ರೋಗಿಗಳನ್ನು ಕೊರೊನಾದಿಂದ ಮುಕ್ತರನ್ನಾಗಿಸುತ್ತದೆ.

      AstraZeneca Begins COVID-19 Drug Trial In UK

      9 ಕೋಟಿ ಸಂಭಾವ್ಯ ಕೊರೊನಾ ಲಸಿಕೆ ಖರೀದಿಗೆ ಬ್ರಿಟನ್ ಸಜ್ಜಾಗಿದೆ. ಬ್ರಿಟನ್‌ನಲ್ಲಿ ಕೊರೊನಾ ಸೋಂಕು ವಿಪರೀತವಾಗಿದ್ದು, 90 ಮಿಲಿಯನ್(9 ಕೋಟಿ) ಸಂಭಾವ್ಯ ಕೊರೊನಾ ಲಸಿಕೆ ಪಡೆಯಲು ಅನೇಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

      ಪಿಫೈಜರ್ ಇಂಕ್, ಬಯೋಎನ್ ಟೆಕ್, ಫ್ರೆಂಚ್ ಕ್ರೂಪ್ ಆಫ್ ವಾಲ್‌ನೆವಾ ಜೊತೆ ಒಪ್ಪಂದ ನಡೆದಿದೆ. ಬ್ರಿಟನ್ ಬಯೋ ಎನ್ ಟೆಕ್ ,ಪಿಫೈಜರ್ ನಿಂದ 30(3 ಕೋಟಿ) ಮಿಲಿಯನ್ ಲಸಿಕೆಯನ್ನು ಪಡೆಯಲಿದೆ.

      ಬಯೋ ಎನ್‌ಟೆಕ್ ಯುಎಸ್ ಫಾರ್ಮಾಸುಟಿಕಲ್ ಪಿಫೈಜರ್ ಜೊತೆ ಸೇರಿ ಲಸಿಕೆ ಸಿದ್ಧಪಡಿಸುತ್ತಿದೆ. 150ಕ್ಕಿಂತಲೂ ಹೆಚ್ಚು ಕೊರೊನಾ ಲಸಿಕೆಗಳು ಸಿದ್ಧಗೊಳ್ಳುತ್ತಿವೆ.

      ಇದಕ್ಕೂ ಮುನ್ನ ಯುಎಸ್ ಬಯೋಟೆಕ್ ಫರ್ಮ್ ಮಾಡೆರ್ನಾ ತಮ್ಮ ಲಸಿಕೆ ಅಂತಿಮ ಹಂತದಲ್ಲಿದೆ ಎಂದು ಹೇಳಿತ್ತು. ಜುಲೈ 27ಕ್ಕೆ ಅಂತಿಮ ಹಂತದ ಪರೀಕ್ಷೆಯನ್ನು ನಡೆಸುವುದಾಗಿ ತಿಳಿಸಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+