ನೀವು ಟ್ವಿಟ್ಟರ್ ನಲ್ಲಿದ್ದೀರಾ?: ಪ್ರಧಾನಿ ಮೋದಿಗೆ ಅಮೆರಿಕ ಪತ್ರಕರ್ತೆ ಪ್ರಶ್ನೆ
ಸೇಂಟ್ ಪೀಟರ್ಸ್ ಬರ್ಗ್, ಜೂನ್ 2: ಅಮೆರಿಕ ಪತ್ರಕರ್ತೆ ಮೆಗಿನ್ ಕೆಲ್ಲಿ ಸದ್ಯಕ್ಕೆ ಸುದ್ದಿಯಲ್ಲಿದ್ದಾರೆ. ಆಕೆ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಭೇಟಿಯಾಗಿದ್ದು ಒಂದು ಕಾರಣವಾದರೆ, ಟ್ವಿಟ್ಟರ್ ನಲ್ಲಿ ಜಗತ್ತಿನಲ್ಲೇ ಎರಡನೇ ಅತಿ ಹೆಚ್ಚು ಫಾಲೋವರ್ ಗಳಿರುವ ಮೋದಿ ಅವರನ್ನು ಆಕೆ ಕೇಳಿದ ಪ್ರಶ್ನೆಗೆ ವಿಪರೀತ ಸುದ್ದಿಯಲ್ಲಿದ್ದಾರೆ.
ಕೆಲ್ಲಿ ಹೊಸ ಷೋವೊಂದನ್ನು ಆರಂಭಿಸಿದ್ದು, ಮೋದಿ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಕಾರ್ಯಕ್ರಮ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕಾನ್ ಸ್ಟಾಟಿನ್ ಅರಮನೆಯಲ್ಲಿ ಆಕೆಯ ಕಾರ್ಯಕ್ರಮದ ಸಲುವಾಗಿ ಇಬ್ಬರು ನಾಯಕರನ್ನು ಭೇಟಿ ಮಾಡಿದ್ದಾರೆ. ಆ ವೇಳೆ ಪ್ರಧಾನಿ ಮೋದಿ, ಛತ್ರಿ ಹಿಡಿದು ನಿಂತಿರುವ ನಿಮ್ಮ ಫೋಟೋ ನೋಡಿದೆ ಎಂದು ಆಕೆಗೆ ಹೇಳಿದ್ದಾರೆ.[ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ ವೇಶ್ಯೆ ಕೇಳಿಕೊಂಡಿದ್ದೇನು?]

ಅದಕ್ಕೆ ಪ್ರತಿಕ್ರಿಯಿಸಿದ ಕೆಲ್ಲಿ, ಓಹ್ ಹೌದಾ, ನೀವದನ್ನು ನೋಡಿದ್ರಾ? ನಿಮ್ಮದು ಟ್ವಿಟ್ಟರ್ ಖಾತೆ ಇದೆಯಾ? ಎಂದಿದ್ದಾರೆ. ಈ ಮಾತು ಕೇಳಿದವರೆ ಮೋದಿ, ಸುಮ್ಮನೆ ನಕ್ಕಿದ್ದಾರೆ. ಈ ಘಟನೆಗೆ ಭಾರತೀಯರು ಪ್ರತಿಕ್ರಿಯೆ ನೀಡಿದ ರೀತಿ ಸಕತ್ತಾಗಿದೆ. ಆರ್ ಡಿ ಓಸ್ತ್ವಾಲ್ ಎಂಬ ಖಾತೆ ಮೂಲಕ, ಇದು ಸಚಿನ್ ಯಾರು ಎಂದು ಶರಪೋವಾ ಕೇಳಿದಂತಿದೆ ಎಂದಿದ್ದಾರೆ.
ಆಕಾಶ್ ಭಸೀನ್ ಎಂಬುವವರು, ನೀವು ಟ್ವಿಟ್ಟರ್ ನಲ್ಲಿದ್ದೀರಾ ಎಂದು ತಪ್ಪಾದ ವ್ಯಕ್ತಿಗೆ ಕೇಳಿದ್ದೀರಿ. ನೀವು ಪತ್ರಕರ್ತೆ, ಸ್ವಲ್ಪ ಸಿದ್ಧತೆ ಮಾಡಿಕೊಳ್ಳಬೇಕು ಎಂದಿದ್ದಾರೆ.[ನಮ್ಮ ವಿಮಾನ ಹೈಜಾಕ್ ಆಗಿದೆ, ಮೋದೀಜಿ, ಕಾಪಾಡಿ!]
ಮಹೇಶ್, ಖಂಡಿತವಾಗಿಯೂ ಆಕೆ ಯಾವುದೇ ಸಿದ್ಧತೆ ನಡೆಸಿಲ್ಲ. ಟ್ವಿಟ್ಟರ್ ನಲ್ಲಿ ಅಷ್ಟೊಂದು ಫಾಲೋವರ್ ಇರುವ ರಾಜಕಾರಣಿಯನ್ನು ಈ ಪ್ರಶ್ನೆ ಕೇಳೋದಾ?

ಅಂದಹಾಗೆ, ನರೇಂದ್ರ ಮೋದಿ ಅವರಿಗೆ ಟ್ವಿಟ್ಟರ್ ನಲ್ಲಿ ಮೂರು ಕೋಟಿಗೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಇನ್ನು ಫೇಸ್ ಬುಕ್ ನಲ್ಲಿ ನಾಲ್ಕು ಕೋಟಿಗೂ ಹೆಚ್ಚು. ಅಮೆರಿಕದ ಡೊನಾಲ್ಡ್ ಟ್ರಂಪ್ ನಂತರ ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಇರೋದು ನರೇಂದ್ರ ಮೋದಿ ಅವರಿಗೆ.[ಫೇಸ್ಬುಕ್ ನಲ್ಲಿ ವಿಶ್ವಕ್ಕೆ ನಮ್ಮ ಮೋದಿನೇ ನಂಬರ್ 1]
ವಿಡಿಯೋ, ಫೋಟೋ, ಶುಭಾಶಯಗಳು, ಹೇಳಿಕೆ ನೀಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಚಟುವಟಿಕೆಯಿಂದ ಇರುವವರು ನರೇಂದ್ರ ಮೋದಿ. ಇನ್ನು ಅವರ ಅಧಿಕೃತ ಹ್ಯಾಂಡಲ್ @PMOIndia ಗೆ ಒಂದು ಕೋಟಿ ಎಂಬತ್ತೆರಡು ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ.












Click it and Unblock the Notifications