ಮರುಭೂಮಿಯ ಆಳದಲ್ಲೊಂದು ಸುಂದರ ನಗರ:ಪತ್ತೆ ಹಚ್ಚಿದ್ದೇ 1,500 ವರ್ಷ ಹಳೆಯ ನಕ್ಷೆ

ಕಳೆದು ಹೋಗಿರುವ ಅದ್ಭುತ ಮತ್ತು ಸುಂದರ ನಗರವೊಂದನ್ನು ಪುರಾತತ್ವಜ್ಙರು ಪತ್ತೆ ಹಚ್ಚಿದ್ದಾರೆ. ಇದು ಅಂತಿಂಥ ನಗರ ಅಲ್ಲ. ಸಾವಿರಾರು ವರ್ಷಗಳ ಹಿಂದೆ ಮರಳಿನಲ್ಲಿ ಮುಚ್ಚಿ ಮಾಯವಾಗಿ ಹೋದ ಒಂದು ಊರು. ಈ ಊರು ಇದ್ದದ್ದು ಜೋರ್ಡಾನ್‌ನ ಡೆಡ್‌ಸೀ ಸಮೀಪದ ಮರುಭೂಮಿಯೊಂದರಲ್ಲಿ.

1,500 ವರ್ಷ ಹಳೆಯ ನಕ್ಷೆಯ ಮ್ಯಾಜಿಕ್‌:

ಈ ನಗರವನ್ನು ಪತ್ತೆ ಹಚ್ಚಲು ಕಾರಣವಾದ ಅಂಶ ಕೂಡಾ ತೀರಾ ಕುತೂಹಲಕಾರಿಯಾಗಿದೆ. ಪುರಾತತ್ವಜ್ಙರಿಗೆ ತುಂಬಾ ಹಳೆಯದಾದ ಒಂದು ನಕ್ಷೆ ಸಿಕ್ಕಿರುತ್ತದೆ. ಆ ನಕ್ಷೆ ಸುಮಾರು 1,500 ವರ್ಷಗಳಷ್ಟು ಹಳೆಯದ್ದು. ಇದನ್ನು ಮಡಬಾ ಮೊಸಾಯಿಕ್‌ ನಕ್ಷೆ ಎಂದು ಗುರುತಿಸಲಾಗಿದೆ. ಇದು ಜಗತ್ತಿನ ಅತಿ ಹಳೆಯ ನಕ್ಷೆ ಎನ್ನುವುದು ಕೂಡಾ ವಿಶೇಷ. ಈ ಮ್ಯಾಪ್‌ನಲ್ಲೊಂದು ನಗರವನ್ನು ಗುರುತಿಸಲಾಗಿದೆ. ಾದರೆ ಆ ನಗರ ಆ ಪ್ರದೇಶದಿಂಸ ಮಾಯವಾಗಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಆ ನಕ್ಷೆಯಲ್ಲಿ ಹೇಳಿದಂತೆ ಜೋರ್ಡಾನ್‌ ಮತ್ತು ಮೃತ್ಯು ಸಮುದ್ರದ ಆಗ್ನೇಯ ದಿಕ್ಕಿನಲ್ಲಿ ಉತ್ಖನನ ನಡೆಸಲಾಯಿತು. ಉತ್ಖನನ ಆರಂಭವಾಗಿದ್ದು ಸುಮಾರು ಮೂರು ವರ್ಷಗಳ ಹಿಂದೆ. ಎಲ್ಲರ ಅಚ್ಚರಿಗೆ ಕಾರಣವಾಗುವಂತೆ ಉತ್ಖನನ ನಡೆಸಿದ ಸ್ಥಳದಲ್ಲಿ ಸುಂದರ ನಗರಿಯೊಂದು ಗೋಚರಿಸಿತ್ತು. ಅದು ಸಂಪೂರ್ಣ ಮರಳಿನಿಂದಲೇ ಮುಚ್ಚಿಹೋದ ಥೈರಸ್‌ ಎಂಬ ನಗರ. ಇದು ಆರನೇ ಶತಮಾನದ ಬೈಜಾಂಟಿಯನ್‌ ನಾಗರೀಕತೆಗೆ ಸೇರಿದ ನಗರ. ಈ ನಗರದ ಸ್ಪಷ್ಟ ಚಿತ್ರಣ ಮೊಸಾಯಿಕ್‌ ನಕ್ಷೆಯಲ್ಲಿ ಇತ್ತು.

Archaelogists found city

ಉತ್ಖನನದಲ್ಲಿ ಸಾಕಷ್ಟು ಪುರಾವೆ ಪತ್ತೆ:

ಉತ್ಖನನ ಮುಂದುವರಿಸಿದಾಗ ಸಂಶೋಧಕರಿಗೆ ಇತಿಹಾಸದ ಸಾಕಷ್ಟು ಪುರಾವೆಗಳು ದೊರೆತವು. ಅಲ್ಲೊಂದು ಚರ್ಚ್‌ ಇರುವುದು ಕೂಡಾ ಗೋಚರಿಸಿತು. ಅದು ಮಡಬಾ ನಗರದ ಸಂತ ಜಾರ್ಜ್‌ ಚರ್ಚ್‌ ಎಂದು ಗುರುತಿಸಲಾಗಿದೆ. ನದಿ, ರಸ್ತೆ, ವ್ಯಾಪಾರ ಮಾರ್ಗ, ಧಾರ್ಮಿಕ ಹೆಗ್ಗುರುತುಗಳು ಅಲ್ಲಿ ಪತ್ತೆಯಾದವು.

500 ವರ್ಷಗಳ ಬಳಿಕ ಬಯಲಾಯ್ತು ಚಿನ್ನದ ಹಡಗಿನ ರಹಸ್ಯ: ಭಾರತದತ್ತ ಹೊರಟಿದ್ದ ನೌಕೆಯಲ್ಲಿ ಸಿಕ್ಕಿತು ಕೋಟಿ ಕೋಟಿ ಖಜಾನೆ
500 ವರ್ಷಗಳ ಬಳಿಕ ಬಯಲಾಯ್ತು ಚಿನ್ನದ ಹಡಗಿನ ರಹಸ್ಯ: ಭಾರತದತ್ತ ಹೊರಟಿದ್ದ ನೌಕೆಯಲ್ಲಿ ಸಿಕ್ಕಿತು ಕೋಟಿ ಕೋಟಿ ಖಜಾನೆ

ವಸತಿ, ವ್ಯಾಪಾರ ಅವಶೇಷಗಳೂ ಪತ್ತೆ:

ಸಂಶೋಧನೆಯನ್ನು ಇನ್ನಷ್ಟು ತೀವ್ರಗೊಳಿಸಿದಾಗ, ಅಲ್ಲಿ ವಸತಿ ರಚನೆಯ ಅವಶೇಷಗಳೂ ಸಿಕ್ಕಿದವು. ಶಿಸ್ತುಬದ್ದವಾಗಿ ಕಟ್ಟಿದ್ದ ಮನೆಗಳು ಸಂಶೋಧಕರ ಅಚ್ಚರಿಗೆ ಕಾರಣವಾಗಿತ್ತು. ಕುಂಬಾರಿಕೆ ತುಣುಕುಗಳು, ಗಾಜಿನ ಅವಶೇಷಗಳು ಹಾಗೂ ಕಲ್ಲಿನ ಉಪಕರಣಗಳೂ ಅಲ್ಲಿ ಪತ್ತೆಯಾದವು. ಆ ನಗರದಲ್ಲಿ ಆಲಿವ್‌ ಎಣ್ಣೆ ಉತ್ಪಾದಿಸಲಾಗುತ್ತಿತ್ತು ಎಂಬುದಕ್ಕೆ ಪುರಾವೆಗಳು ಸಿಕ್ಕಿದವು. ಕೃಷಿ ಚಟುವಟಿಕೆ ಕೂಡಾ ಯಥೇಚ್ಛವಾಗಿ ನಡೆಯುತ್ತಿತ್ತು ಎಂಬುದು ದೃಢ ಪಟ್ಟಿತ್ತು. ಥೈರಸ್‌ ಸಣ್ಣ ಧಾರ್ಮಿಕ ನಗರವಾಗಿದ್ದರೂ ಕೂಡಾ ಆರ್ಥಿಕವಾಗಿ ಬಲಗೊಂಡಿತ್ತು. ಕೃಷಿ ಇಲ್ಲಿನವರ ಪ್ರಧಾನ ಉದ್ಯೋಗವಾಗಿತ್ತು.

ಮೃತ್ಯು ಸಾಗರವನ್ನು ಬಳಸಿಕೊಂಡು ಜನ ವ್ಯಾಪಾರ ಮಾರ್ಗಗಳನ್ನು ವಿಸ್ತರಿಸಿದ್ದರು ಎಂಬುದನ್ನು ಸಂಶೋಧಕರು ದೃಢಪಡಿಸಿದ್ದಾರೆ. ಇದು ಕ್ರೈಸ್ತರ ಒಂದು ಚಟುವಟಿಕೆಯ ನಗರ ಎಂದು ಸಂಶೋಧಕರು ಹೇಳುತ್ತಾರೆ.

ಭೂಮಿಯ 700 ಕಿಲೋಮೀಟರ್ ಆಳದಲ್ಲಿರುವ ಗುಪ್ತ ಸಾಗರ ಪತ್ತೆ :ಎಲ್ಲಾ ಸಾಗರಗಳಿಗಿಂತ ಮೂರು ಪಟ್ಟು ವಿಶಾಲವಿದು
ಭೂಮಿಯ 700 ಕಿಲೋಮೀಟರ್ ಆಳದಲ್ಲಿರುವ ಗುಪ್ತ ಸಾಗರ ಪತ್ತೆ :ಎಲ್ಲಾ ಸಾಗರಗಳಿಗಿಂತ ಮೂರು ಪಟ್ಟು ವಿಶಾಲವಿದು

ನಗರ ಮರಳಿನಲ್ಲಿ ಹುದುಗಿ ಹೋಗಿದ್ದು ಹೇಗೆ?

ಹಾಗಾದರೆ ಈ ನಗರ ಮರಳಿನಲ್ಲಿ ಹುದುಗಿ ಹೋಗಿದ್ದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಭೂಕಂಪನದ ಕಾರಣಕ್ಕೆ ಈ ನಗರ ಭೂಮಿಯಡಿ ಸೇರಿರಬಹುದು ಎಂದು ತಜ್ಷರು ಹೇಳುತ್ತಾರೆ. ಕ್ರಮೇಣ ಬೈಜಾಂಟಿಯನ್‌ ಆಳ್ವಿಕೆ ಇಸ್ಲಾಮಿಗೆ ಬದಲಾಗಿದ್ದು ಕೂಡಾ ನಗರದ ಅವನತಿಗೆ ಕಾರಣ ಎಂದು ಭಾವಿಸಲಾಗಿದೆ. ಇಷ್ಟೇ ಅಲ್ಲ, ಮರುಭೂಮಿಯ ಕೆಸರು ಮತ್ತು ಸವಕಳಿ ಈ ನಗರದ ಬಹುದೊಡ್ಡ ಭಾಗವನ್ನು ಆಪೋಶಣಕ್ಕೆ ತೆಗೆದುಕೊಂಡಿದೆ. ಕ್ರಮೇಣ ಮೇಲ್ಮೈಯಲ್ಲಿ ಕೆಲವೊಂದು ಅವಶೇಷಗಳನ್ನು ಬಿಟ್ಟು ಸಂಪೂರ್ಣ ನಗರವೇ ಅಸ್ತಿತ್ವದಿಂದ ಕೊನೆಯಾಯಿತು.

ಸಂಶೋಧನೆ ಅತಿದೊಡ್ಡ ಕೊಡುಗೆ:

ಅಚ್ಚರಿಯ ವಿಷಯವೆಂದರೆ ಪುರಾತನ ನಕ್ಷೆಯೊಂದನ್ನು ಹಿಡಿದು ಈ ಮರಳಲ್ಲಿ ಹೂತು ಹೋದ ನಗರವನ್ನು ಪತ್ತೆ ಹಚ್ಚಿದ್ದು. ಉಪಗ್ರಹ ಮತ್ತು ಡಿಜಿಟಲ್‌ ಮ್ಯಾಪಿಂಗ್‌ ಬಳಸಿ ಈ ನಗರವನ್ನು ಮತ್ತೆ ಇತಿಹಾಸದ ನಿಕಶದಲ್ಲಿ ಓರೆ ಹಚ್ಚಲಾಗುತ್ತಿದೆ. ನಾಗರಿಕತೆಯ ಅಧ್ಯಯನಕ್ಕೆ ಈ ಸಂಶೋಧನೆ ಅತಿದೊಡ್ಡ ಕೊಡುಗೆಯಾಗಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+