ಅಮೆರಿಕ & ಚೀನಾ ದಂಗಲ್: ಸಂಬಂಧಕ್ಕೆ ತೇಪೆ ಹಾಕುವ ಕೆಲಸ ಯಾಕೆ?

ಬೀಜಿಂಗ್: ಅಮೆರಿಕ ಮತ್ತು ಚೀನಾ ನಡುವೆ ಪರಿಸ್ಥಿತಿ ಕ್ಷಣಕ್ಷಣಕ್ಕೂ ವ್ಯತಿರಿಕ್ತವಾಗುತ್ತಿದೆ. ಅದರಲ್ಲೂ ತೈವಾನ್ ಹಾಗೂ ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಅಮೆರಿಕ ಎಂಟ್ರಿ ಆಗುತ್ತಿದ್ದಂತೆ ಚೀನಾ ರೊಚ್ಚಿಗೆದ್ದಿದೆ. ಎರಡೂ ದೇಶಗಳ ನಡುವೆ ಯುದ್ಧ ನಡೆಯುತ್ತಾ? ಅನ್ನೋ ಅನುಮಾನ ಕೂಡ ಮೂಡುವಂತಾಗಿದೆ. ಆದರೆ ಈಗ ಎರಡೂ ದೇಶಗಳ ಸಂಬಂಧಕ್ಕೆ ತೇಪೆ ಹಾಕುವ ಕೆಲಸ ಮುಂದುವರಿದಿದೆ.

ಅಮೆರಿಕ & ಚೀನಾ ಎರಡೂ ಬಲಿಷ್ಠ ರಾಷ್ಟ್ರಗಳು ಹಾಗೂ ಜಗತ್ತಿನ ನಂಬರ್ 1 ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ದೇಶಗಳು. ಪರಿಸ್ಥಿತಿ ಹೀಗಿದ್ದಾಗ ಇಬ್ಬರ ನಡುವೆ ಕಿತ್ತಾಟ ಬಲು ಜೋರಾಗಿ ನಡೆಯುತ್ತಿದೆ. ಹೀಗೆ ವಿಶ್ವದ 2 ದೊಡ್ಡ ಆರ್ಥಿಕ ದೇಶಗಳಾದ ಅಮೆರಿಕ & ಚೀನಾ ನಡುವೆ ನಿರಂತರ ಸಂಘರ್ಷ ಏರ್ಪಟ್ಟಿದೆ. ಆದರೆ ಇಬ್ಬರ ಸಿಟ್ಟು ಶಮನಕ್ಕೆ ಪ್ರಯತ್ನವೆಂಬಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಚೀನಾಕ್ಕೆ ಆಗಮಿಸಿದ್ದಾರೆ. ಇನ್ನು ಹೀಗೆ ದಿಢೀರ್ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಚೀನಾಗೆ ಬಂದಿದ್ದು ಏಕೆ? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ (Antony Blinken).

Antony Blinken visit to China is attracting the whole world

ಚೀನಾ ವಿರುದ್ಧ ಸೇಡು ಬಿಟ್ಟು ಶಾಂತಿ ಮಂತ್ರ?

ರಷ್ಯಾ & ಉಕ್ರೇನ್ ಪರಿಸ್ಥಿತಿ ಗಮನಿಸಿ ಹೇಳುವುದಾದ್ರೆ ಚೀನಾ ಜಾಗತಿಕ ವಿಚಾರದಲ್ಲಿ ಭಾರಿ ಪ್ರಭಾವ ಬೀರುತ್ತಿದೆ. ಇದೇ ಕಾರಣಕ್ಕೆ ಅಮೆರಿಕ ಕೂಡ ಆಗಾಗ ಚೀನಾ ನಾಯಕರನ್ನ ತನ್ನ ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸ್ತಿದೆ ಎಂಬ ಆರೋಪ ಇದೆ. ಆದ್ರೆ ಚೀನಾ ಈ ವಿಚಾರದಲ್ಲಿ ಸೋಲುತ್ತಿಲ್ಲ, ಈ ನಡುವೆ ರಷ್ಯಾಗೆ ತುಂಬಾ ಹತ್ತಿರವಾಗುತ್ತಿದೆ. ಅದರ ಜೊತೆ ಅಮೆರಿಕದ ವಿಮಾನ ಮತ್ತು ಯುದ್ಧ ಹಡಗುಗಳಿಗೆ ಎಚ್ಚರಿಕೆ ನೀಡಿ ಕಳಿಸಿದೆ ಚೀನಾ. ದಕ್ಷಿಣ ಚೀನಾ ಸಮುದ್ರದಲ್ಲಿ ಈ ಕಾರಣಕ್ಕೆ ಯುದ್ಧ ನಡೆಯುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಇದನ್ನು ಸರಿ ಮಾಡಿ ಹೋಗಲು 2 ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದಾರೆ ಆ್ಯಂಟನಿ ಬ್ಲಿಂಕೆನ್.

ದೊಡ್ಡಣ್ಣನ ಮನವಿಗೆ ಚೀನಾ ಒಪ್ಪುತ್ತಾ?

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಇಂದು ಬೆಳಗ್ಗೆ ಚೀನಾ ರಾಜಧಾನಿ ಬೀಜಿಂಗ್‌ಗೆ ಬಂದಿಳಿದರು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಧಿಕಾರ ವಹಿಸಿಕೊಂಡ ಬಳಿಕ & ಕಳೆದ 5 ವರ್ಷದಲ್ಲಿ ಚೀನಾ ಪ್ರವಾಸ ಕೈಗೊಂಡ ಅಮೆರಿಕದ ಮೊದಲ ಉನ್ನತ ಅಧಿಕಾರಿ ಕೂಡ ಆ್ಯಂಟನಿ ಬ್ಲಿಂಕೆನ್ ಎನ್ನಬಹುದು. ಏಕೆಂದರೆ ಎರಡೂ ದೇಶಗಳ ನಡುವೆ ದ್ವೇಷದ ಬೆಂಕಿ ಹೊತ್ತಿ ಉರಿಯುತ್ತಿದೆ. ಈ ಕಾರಣಕ್ಕೆ ಎರಡೂ ರಾಷ್ಟ್ರಗಳು ಒಬ್ಬರ ಮೇಲೆ ಮತ್ತೊಬ್ಬರು ಬಾಂಬ್ ಹಾಕುವಷ್ಟು ರೊಚ್ಚಿಗೆದ್ದಿದ್ದರು. ಅದರಲ್ಲೂ ಕಳೆದ ಫೆಬ್ರುವರಿ ತಿಂಗಳಲ್ಲಿ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಅಮೆರಿಕ ಹೊಡೆದುರುಳಿಸಿತ್ತು. ಇದೇ ಕಾರಣಕ್ಕೆ ಆ್ಯಂಟನಿ ಬ್ಲಿಂಕೆನ್ ಚೀನಾ ಭೇಟಿ ಕೂಡ ತಡವಾಗಿತ್ತು.

ಚೀನಾ ಜೊತೆ ಏನೆಲ್ಲಾ ಚರ್ಚೆ ನಡೆಯುತ್ತೆ?

ಇನ್ನು ಬ್ಲಿಂಕೆನ್ ಇಂದು ಚೀನಾ ವಿದೇಶಾಂಗ ಸಚಿವ ಕಿನ್ ಗಾಂಗ್, ರಾಜತಾಂತ್ರಿಕ ವಾಂಗ್ ಯಿ ಭೇಟಿಯಾಗಲಿದ್ದಾರೆ. ಸೋಮವಾರ ಅಂದರೆ ನಾಳೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭೇಟಿಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಇದರ ಜೊತೆಗೆ ತೈವಾನ್‌ ಜೊತೆಗಿನ ವ್ಯಾಪಾರ, ಚೀನಾದ ಮಾನವ ಹಕ್ಕುಗಳ ಸ್ಥಿತಿಗತಿ, ದಕ್ಷಿಣ ಚೀನಾ ಸಾಗರದಲ್ಲಿ ಚೀನಾ ಸೇನೆ ಚಟುವಟಿಕೆ, ಉಕ್ರೇನ್ & ರಷ್ಯಾ ಸಂಘರ್ಷ ಸೇರಿದಂತೆ ಎರಡೂ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳ ಭಂಡಾರವನ್ನೇ ಚರ್ಚೆ ಮಾಡಲಿದ್ದಾರೆ. ಈ ಮಾತುಕತೆ ಮೂಲಕ ಪರಿಸ್ಥಿತಿ ಸರಿಯಾಗುತ್ತೆ ಎಂಬ ನಿರೀಕ್ಷೆಯಲ್ಲಿ ಅಮೆರಿಕ ಇದೆ. ಆದ್ರೆ ಚೀನಾ ಮಾತ್ರ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಅಂತಿದ್ದಾರೆ ತಜ್ಞರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+