ಇಸ್ರೇಲ್ ಹಿಡಿತದಲ್ಲಿ ಉಸಿರುಗಟ್ಟಿದ ಹಿಜ್ಬುಲ್ಲಾ: ಮತ್ತೊಬ್ಬ ಮುಖಂಡನ ಸಾವು?
ಇಸ್ರೇಲ್ ಸೇನೆ ಇದೀಗ ತನ್ನ ಶತ್ರು ನೆಲವನ್ನು ನಡುಗಿಸುತ್ತಿದ್ದು, ಭೀಕರವಾಗಿ ದಾಳಿ ನಡೆಸಿ ಒಬ್ಬೊಬ್ಬರನ್ನೇ ಮುಗಿಸುತ್ತಿದೆ. ಅದರಲ್ಲೂ ಹಿಜ್ಬುಲ್ಲಾ ಸಂಘಟನೆಯ ಮುಖಂಡರನ್ನ ಈಗ ಮುಗಿಸಿ ಹಾಕಲು ಇಸ್ರೇಲ್ ಸೇನೆ ದೊಡ್ಡ ಕಾರ್ಯಾಚರಣೆ ನಡೆಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಹಿಜ್ಬುಲ್ಲಾ ಮುಖ್ಯಸ್ಥನ ಕಥೆ ಮುಗಿಸಿದ್ದ ಇಸ್ರೇಲ್ ಸೇನೆ, ಇದೀಗ ಹಿಜ್ಬುಲ್ಲಾ ಸಂಘಟನೆಯ ಮತ್ತೊಬ್ಬ ಮುಖಂಡನನ್ನು ಕೊಂದು ಹಾಕಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾದರೆ ಇದೀಗ ಮೃತಪಟ್ಟಿರುವ ಹಿಜ್ಬುಲ್ಲಾ ಮುಖಂಡ ಯಾರು?
ದಕ್ಷಿಣ ಲೆಬನಾನ್ ಪ್ರದೇಶದ ಮೇಲೆ ಮನಸ್ಸಿಗೆ ಬಂದಂತೆ ದಾಳಿ ನಡೆಸುತ್ತಿರುವ ಇಸ್ರೇಲ್‌ನ ಮಿಲಿಟರಿ, ಹಿಜ್ಬುಲ್ಲಾ ಮುಖಂಡರು ಅಡಗಿ ಕೂತಿರುವ ಸ್ಥಳಗಳ ಬಗ್ಗೆ ಮಾಹಿತಿ ಪಡೆದಿದೆ. ಹೀಗಾಗಿಯೇ ಪಕ್ಕಾ ಪ್ಲಾನ್ ಮಾಡಿ ಹಿಜ್ಬುಲ್ಲಾ ಮುಖಂಡರು ಇರುವ ಜಾಗಗಳ ಮೇಲೆ ಈಗ ಡೆಡ್ಲಿ ಅಟ್ಯಾಕ್ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಮೃತಪಟ್ಟಿರುವ ಸುದ್ದಿ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ, ಮತ್ತೊಂದು ಸ್ಫೋಟಕ ಸುದ್ದಿ ಇದೀಗ ಹೊರಬಿದ್ದಿದೆ. ಅದು ಏನು ಅಂದ್ರೆ ಇಸ್ರೇಲ್ ನಡೆಸಿದ ಭೀಕರ ದಾಳಿಗೆ ಹಿಜ್ಬುಲ್ಲಾ ಕೇಂದ್ರ ಸಮಿತಿಯ ಉಪ ಮುಖ್ಯಸ್ಥ ಮೃತಪಟ್ಟಿರುವುದು ಕನ್ಫರ್ಮ್ ಆಗಿದೆ.

ಹಿಜ್ಬುಲ್ಲಾದ ಒಬ್ಬೊಬ್ಬರ ಕಥೆ...
ಇಸ್ರೇಲ್ ಮಿಲಿಟರಿ ಯಾವಾಗ ಗಾಜಾ ಪಟ್ಟಿ ವಿರುದ್ಧ ದಾಳಿ ಆರಂಭ ಮಾಡಿತ್ತೋ, ಆಗಲೇ ನೋಡಿ ಹೊಸ ಆತಂಕ ಆವರಿಸಿದ್ದು. ಯಾಕಂದ್ರೆ ಇಸ್ರೇಲ್ ಮಿಲಿಟರಿ ಹೀಗೆ ಗಾಜಾ ಪಟ್ಟಿಯ ಮೇಲೆ ದಾಳಿ ಶುರು ಮಾಡಿದ ನಂತರ ಮಧ್ಯಪ್ರಾಚ್ಯದ ಹಲವು ದೇಶಗಳು ತಿರುಗಿಬಿದ್ದವು. ಈ ಬೆಳವಣಿಗೆ ನಡುವೆ, ಹಲವು ಶತ್ರುಗಳು ಇಸ್ರೇಲ್ ಮೇಲೆ ಎರಗಿ ಬಂದಿವೆ. ಲೆಬನಾನ್, ಇರಾನ್ ಸೇರಿದಂತೆ ಸಿರಿಯಾ ಕೂಡ ಇಸ್ರೇಲ್ ಮಿಲಿಟರಿ ಮೇಲೆ ದಾಳಿ ಮಾಡಲು ಸಜ್ಜಾಗಿವೆ. ಹೀಗೆ, ಪರಿಸ್ಥಿತಿ ಸೂಕ್ಷ್ಮವಾಗಿರುವ ಸಮಯದಲ್ಲೇ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್ ಮಿಲಿಟರಿ ಇದೀಗ ಹಿಜ್ಬುಲ್ಲಾ ಕೇಂದ್ರ ಸಮಿತಿಯ ಉಪ ಮುಖ್ಯಸ್ಥ ನಬಿಲ್ ಕಾವುಕ್ ಹತ್ಯೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಕಣ್ಣೀರು ಹಾಕಿದ ನ್ಯೂಸ್ ಆಂಕರ್
ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಮೃತಪಟ್ಟ ಸುದ್ದಿ ಇಸ್ರೇಲ್ ದೇಶದಲ್ಲಿ ಭಾರಿ ಖುಷಿ ಕೊಟ್ಟಿದ್ದರೆ, ಇನ್ನೊಂದು ಕಡೆ ಇರಾನ್, ಲೆಬನಾನ್, ಸಿರಿಯಾ ದೇಶದಲ್ಲಿ ಈ ಸುದ್ದಿ ಬೆಂಕಿ ಹಚ್ಚಿದೆ. ಅದರಲ್ಲೂ ನ್ಯೂಸ್ ಆಂಕರ್ ಸಮೇತ ಈ ಸುದ್ದಿ ಕೇಳಿ ಕಣ್ಣೀರು ಹಾಕಿರುವ ವಿಚಾರ ವೈರಲ್ ಆಗುತ್ತಿದೆ. ಲೆಬನಾನ್‌ನ ನ್ಯೂಸ್ ಚಾನಲ್ ಒಂದರ ಆಂಕರ್ ಒಬ್ಬರು ಈ ಸುದ್ದಿ ಓದುವಾಗ, ಅಂದ್ರೆ ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಮೃತಪಟ್ಟ ಸುದ್ದಿ ಓದುವಾಗ ಕಣ್ಣೀರು ಹಾಕಿದ್ದಾರೆ. ನ್ಯೂಸ್ ಆಂಕರ್ ಈ ರೀತಿಯಾಗಿ ಕಣ್ಣೀರು ಹಾಕುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.












Click it and Unblock the Notifications