ಈ ದೇಶದಲ್ಲಿ ಇಸ್ಲಾಂ, ಮುಸ್ಲಿಮರಿಗೆ ನಿಷೇಧ

ಲುಆಂಡಾ, ನ.25: ಇಡೀ ವಿಶ್ವದಲ್ಲಿ ವ್ಯಾಪಕವಾಗಿರುವ ಇಸ್ಲಾಂ ಧರ್ಮ ವಿರುದ್ಧ ನಿಷೇಧ ಹೇರುವ ಧೈರ್ಯವನ್ನು ಮೊಟ್ಟ ಮೊದಲ ಬಾರಿಗೆ ಅಫ್ರಿಕಾದ ದೇಶವೊಂದು ಮಾಡಿದೆ. ನೈಋತ್ಯ ಆಫ್ರಿಕಾದ ದೇಶ ಅಂಗೋಲಾ ಇಂಥದ್ದೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಇಸ್ಲಾಂ ಹಾಗೂ ಮುಸ್ಲಿಮರಿಗೆ ನಮ್ಮ ದೇಶದಲ್ಲಿ ನಿಷೇಧ ಹೇರಲಾಗಿದೆ ಎಂದು ಅಂಗೋಲಾದ ಸಂಸ್ಕೃತಿ ಖಾತೆ ಸ‌ಚಿವ ರೋಸಾ ಸೆಯುಜ್ ಘೋಷಿಸಿದ್ದಾರೆ. ಅಂಗೋಲಾದಲ್ಲಿ ಇಸ್ಲಾಂ ಧರ್ಮಕ್ಕೆ ನಿಷೇಧ ಹೇರುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕಾನೂನಾತ್ಮಕವಾಗಿ ಈ ಪ್ರಕ್ರಿಯೆ ಮುಂದುವರೆಯಲಿದೆ.

ಜಸ್ಟೀಸ್ ಹಾಗೂ ಮಾನವ ಹಕ್ಕುಗಳ ಸಚಿವಾಲಯದಿಂದ ಇಸ್ಲಾಂ ಹಾಗೂ ಮುಸ್ಲಿಮರಿಗೆ ಮಾನ್ಯತೆ ಸಿಕ್ಕಿಲ್ಲ. ಹೀಗಾಗಿ ಅಂಗೋಲದಲ್ಲಿ ತಲೆ ಎತ್ತಿರುವ ಮಸೀದಿಗಳನ್ನು ಮುಂದಿನ ಆದೇಶದವರೆಗೂ ಮುಚ್ಚುವಂತೆ ಸೂಚಿಸಲಾಗಿದೆ. ಇಷ್ಟೇ ಅಲ್ಲದೆ ದೇಶದೆಲ್ಲೆಡೆ ಇರುವ ಮಸೀದಿ, ಮದರಸಾ, ಮುಸ್ಲಿಂ ಪ್ರಾರ್ಥನಾ ಮಂದಿರಗಳನ್ನು ನೆಲಸಮಗೊಳಿಸಲು ಇಲ್ಲಿನ ಸರ್ಕಾರ ಮುಂದಾಗಿದೆ. ಈ ಬಗ್ಗೆ ಆದೇಶ ಇನ್ನೂ ಹೊರಬೀಳಬೇಕಿದೆ.

Angola becomes first nation to ban Islam and Muslims

ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಅನಧಿಕೃತ ಕಟ್ಟಡಗಳು, ಅನೈತಿಕ ಚಟುವಟಿಕೆ ತಾಣಗಳು ಹಾಗೂ ಧಾರ್ಮಿಕ ಕೇಂದ್ರಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಸಚಿವೆ ಸಿಲ್ವಾ ಹೇಳಿದ್ದಾರೆ. ಅಂಗೋಲಿಯನ್ ಸಂಸ್ಕೃತಿಗೆ ತದ್ವಿರುದ್ಧವಾದ ಯಾವುದೇ ಆಚರಣೆ, ಸಂಸ್ಕೃತಿ ಅಥವಾ ಧರ್ಮಗಳಿಗೆ ನಮ್ಮ ದೇಶದಲ್ಲಿ ಸ್ಥಳವಿಲ್ಲ ಎಂದು ಸಚಿವೆ ರೋಸಾ ಸೆಯುಜ್ ಸಿಲ್ವಾ ಹೇಳಿದ್ದಾರೆ.

Jornal de Angola ದಲ್ಲಿ ಸರ್ಕಾರ ಹೇರಿರುವ ನಿರ್ಬಂಧ, ನಿಷೇಧಿತ ಕ್ರಿಯೆಗಳ ಪಟ್ಟಿ ಪ್ರಕಟಿಸಲಾಗಿದೆ. ಸಂಸ್ಕೃತಿ ಸಚಿವಾಲಯ, ಜಸ್ಟೀಸ್ ಹಾಗೂ ಮಾನವ ಹಕ್ಕುಗಳ ಸಚಿವಾಲಯಗಳ ಶಿಫಾರಸ್ಸಿಗೆ ಅಂಗೋಲಾದ ಅಧ್ಯಕ್ಷ ಅಂಕಿತ ಹಾಕಿದ್ದಾರೆ. 'ಇದು ದೇಶದಲ್ಲಿ ಇಸ್ಲಾಮೀಕರಣದ ಅಂತ್ಯ' ಎಂದು ಅಧ್ಯಕ್ಷ ಜೋಸ್ ಎಡುರ್ಡೋ ಡೋಸ್ ಸ್ಯಾಂಟೋಸ್ ಪ್ರತಿಕ್ರಿಯಿಸಿದ್ದಾರೆ.

ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿರುವ ಪುಟ್ಟ ರಾಷ್ಟ್ರ ಅಂಗೋಲಾ ಇಂಥದ್ದೊಂದು ಮಹತ್ವದ ನಿರ್ಣಯ ಕೈಗೊಂಡಿದೆ. ಜಾಂಬಿಯಾ, ಅಟ್ಲಾಂಟಿಕ್ ಸಮುದ್ರ, ಕಾಂಗೋ ಗಣರಾಜ್ಯ, ನಮೀಬಿಯಾ ದೇಶಗಳನ್ನು ನೆರೆ ರಾಷ್ಟ್ರವಾಗಿ ಹೊಂದಿದೆ. ಸುಮಾರು 400 ವರ್ಷಗಳ ಕಾಲ ಪೋರ್ಚುಗೀಸರ ಹಿಡಿತದಲ್ಲಿದ್ದ ಅಂಗೋಲಾದಲ್ಲಿ ಇಂದಿಗೂ ಪೋರ್ಚುಗೀಸ್ ದೇಶದ ಅಧಿಕೃತ ಭಾಷೆ.

ಅಂಗೋಲಾದಲ್ಲಿ ಸಾವಿರಕ್ಕೂ ಅಧಿಕ ಕ್ರೈಸ್ತ ಸಮುದಾಯಗಳಿದ್ದು ಹೆಚ್ಚಾಗಿ ರೋಮನ್ ಕ್ಯಾಥಲಿಕ್ ಹಾಗೂ ಪ್ರೊಟೆಸ್ಟಂಟ್ ಪಂಗಡಗಳಿಗೆ ಸೇರಿದ ಜನರನ್ನು ಕಾಣಬಹುದು. ಹೀಗಾಗಿ ದಟ್ಟವಾಗಿ ಕ್ರೈಸ್ತ ಧರ್ಮದ ಪ್ರಭಾವವಿರುವ ಈ ರಾಷ್ಟ್ರದ ಮೇಲೆ ಇಸ್ಲಾಂ ಧರ್ಮದ ನೆರಳು ಬೀಳದಂತೆ ತಡೆಗಟ್ಟಲು ಸ್ಥಳೀಯ ಆಡಳಿತ ನಿಷೇಧದ ಕ್ರಮ ಕೈಗೊಂಡಿದೆ. ಅಂದ ಹಾಗೆ, ಅಂಗೋಲಾ ದೇಶ ಆಫ್ರಿಕಾದ ಅತಿ ಹೆಚ್ಚು ತೈಲ, ಇಂಧನ ಪೂರೈಕೆ ಮಾಡುತ್ತಿದ್ದು 'ಕುವೈಟ್ ಆಫ್ ಆಫ್ರಿಕಾ' ಎಂಬ ಹೆಸರು ಹೊಂದಿದೆ. ಹೀಗಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಆಫ್ರಿಕಾ ದೇಶದ ಮೇಲೆ ಕಣ್ಣು ಬಿದ್ದಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+