ಅಮೆರಿಕದಲ್ಲಿ ಭಾರತೀಯ ಮೂಲದ ಯುವಕ ಸಾವು
ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದುತ್ತಿದ್ದ ಆಲಾಪ್ ನರಸಿಪುರ ಎಂಬ ಭಾರತೀಯ ವಿದ್ಯಾರ್ಥಿಯ ಮೃತದೇಹ ನಿನ್ನೆ (ಮೇ 20) ಪತ್ತೆಯಾಗಿದೆ.
ಅಮೆರಿಕ, ಮೇ 20: ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದುತ್ತಿದ್ದ ಆಲಾಪ್ ನರಸಿಪುರ ಎಂಬ ಭಾರತೀಯ ವಿದ್ಯಾರ್ಥಿಯ ಮೃತದೇಹ ನಿನ್ನೆ (ಮೇ 20) ಪತ್ತೆಯಾಗಿದೆ.
ಕೆಲದಿನಗಳಿಂದ ಆಲಾಪ್ ಕಾಣೆಯಾಗಿದ್ದಾನೆಂದು ಆಲಾಪ್ ದೂರು ನೀಡಿದ ಹಿನ್ನೆಲಯಲ್ಲಿ ಆಲಾಪ್ ಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಫಾಲ್ ಗ್ರೀಕ್ ಎಂಬಲ್ಲಿ ನಿನ್ನೆ ಆತನ ಮೃತದೇಹ ದೊರಕಿದೆ. ಆಲಾಪ್ ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಆತ ಅತ್ಯಂತ ಚಟುವಟಿಕೆಯ ವಿದ್ಯಾರ್ಥಿಯಾಗಿದ್ದು, ಎಂದಿಗೂ ಬೇಸರದಿಂದ ಇರುತ್ತಿರಲಿಲ್ಲ, ಆತನ ಸಾವಿನ ಬಗ್ಗೆ ಏನೇನೂ ತಿಳಿದಿಲ್ಲ ಎನ್ನುತ್ತಾರೆ ಆಲಾಪ್ ಸ್ನೇಹಿತರು.
ಆಲಾಪ್ ಭಾರತದವರಾಗಿದ್ದು, ಇವರ ಕುಟುಂಬದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
{promotion-urls}












Click it and Unblock the Notifications