ಡೊನಾಲ್ಡ್ ಟ್ರಂಪ್ ಟ್ಯಾಕ್ಸ್ ಯುದ್ಧದಿಂದ ಖುದ್ದು ಅಮೆರಿಕಗೆ ದೊಡ್ಡ ನಷ್ಟ?
ಜಗತ್ತಿನ ದೊಡ್ಡಣ್ಣ ಅಮೆರಿಕ ಈಗ ಹಲವು ವಿಚಾರಗಳಿಗೆ ಚರ್ಚೆಯಲ್ಲಿದೆ. ಅದರಲ್ಲೂ ಈ ದೇಶದ ಆಡಳಿತ ದೊನಾಲ್ಡ್ ಟ್ರಂಪ್ ಅವರ ಕೈಗೆ ಸಿಕ್ಕ ನಂತರ ಹಲವು ರೀತಿ ಕಿತ್ತಾಟಗಳೂ ಶುರುವಾಗಿವೆ. ಒಂದು ಕಡೆ ಸಾಲದ ಸುಳಿಯಲ್ಲಿ ಸಿಲುಕಿರುವ ಅಮೆರಿಕ ಇದೀಗ ಒದ್ದಾಡುತ್ತಾ ಜೀವನ ನಡೆಸಲು ಪರದಾಡುತ್ತಿದೆ. ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಅವರು ಭಾರಿ ದೊಡ್ಡ ಪ್ರಮಾಣದ ತೆರಿಗೆ ಹಾಕಲು ಮುಂದಾಗಿದ್ದಾರೆ. ಆದರೆ ಈ ಅಸ್ತ್ರವೇ ತಿರುಗಿ ಬೀಳುವ ಲಕ್ಷಣ ಗೋಚರಿಸುತ್ತಿದೆ.
ಡೊನಾಲ್ಡ್ ಟ್ರಂಪ್ ತೆರಿಗೆ ಯುದ್ಧದ ಪರಿಣಾಮ ಈಗಾಗಲೇ ಹಲವು ದೇಶಗಳು ಅಮೆರಿಕದ ವಿರುದ್ಧ ತಿರುಗಿಬಿದ್ದಿವೆ. ಅದರಲ್ಲೂ ಅಮೆರಿಕದ ಅಕ್ಕಪಕ್ಕದ ದೇಶಗಳೇ ಗರಂ ಆಗಿದ್ದು, ಆ ಮೂಲಕ ಭವಿಷ್ಯದಲ್ಲಿ ತನ್ನ ಸ್ನೇಹಿತ ದೇಶಗಳನ್ನೂ ಅಮೆರಿಕ ಕಳೆದುಕೊಳ್ಳುತ್ತಾ? ಎನ್ನುವ ಪ್ರಶ್ನೆ ಮೂಡಿದೆ. ಅದಕ್ಕೆ ಉತ್ತರ ಇನ್ನೂ ಹುಡುಕುವಾಗಲೇ ಟ್ರಂಪ್ ಅವರ ತೆರಿಗೆ ಯುದ್ಧದಿಂದ ಅಮೆರಿಕಗೆ ದೊಡ್ಡ ನಷ್ಟವಾಗುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾದ್ರೆ ಬೇರೆ ದೇಶಗಳಿಗೆ ಹೆಚ್ಚಿನ ತೆರಿಗೆ ಹಾಕಿದರೆ ಅಮೆರಿಕ ಹೇಗೆ ನಷ್ಟ ಅನುಭವಿಸುತ್ತೆ?

ನಷ್ಟದ ಸುಳಿಗೆ ಸಿಲುಕುತ್ತಾ ಅಮೆರಿಕ?
ಜಗತ್ತಿನಲ್ಲಿ ಅತಿಹೆಚ್ಚು ವಸ್ತುಗಳನ್ನು ಸರಬರಾಜು ಮಾಡುವುದು ಅಮೆರಿಕ. ಹೀಗಾಗಿ ಇದೀಗ ಅಮೆರಿಕ ಬೇರೆ ದೇಶಗಳ ಮೇಲೆ ಅತಿಹೆಚ್ಚು ತೆರಿಗೆ ವಿಧಿಸಲು ಮುಂದಾದರೆ, ನಂತರ ಎದುರಾಳಿ ದೇಶಗಳು ಕೂಡ ಹೆಚ್ಚಿನ ತೆರಿಗೆ ಹಾಕುತ್ತವೆ. ಈ ಮೂಲಕ ಅಮೆರಿಕ ಸುಮಾರು 4.5 ಟ್ರಿಲಿಯನ್ ಡಾಲರ್ ನಷ್ಟ ಅನುಭವಿಸಬಹುದು ಎಂಬ ಚರ್ಚೆ ಶುರುವಾಗಿದೆ. ಜಾಗತಿಕ ಮಟ್ಟದಲ್ಲಿ ಈ ರೀತಿ ಅಮೆರಿಕ ವರ್ತನೆ ತೋರುತ್ತಿದ್ದರೆ, ನಂಬರ್ 1 ಪಟ್ಟ ಕೂಡ ಕಳಚಿ ಬೀಳುವ ಆತಂಕ ಇದೀಗ ಶುರುವಾಗಿದೆ.












Click it and Unblock the Notifications