ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷರಾಗುವುದು ಗ್ಯಾರಂಟಿ: ಹಿಂಗೆ ಹೇಳಿದ್ದು ಯಾರು?

ಕಮಲಾ ಹ್ಯಾರಿಸ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದೇ ತಡ, ಡೊನಾಲ್ಡ್ ಟ್ರಂಪ್ ಹಣೆಬರಹ ಬದಲಾಗಿ ಹೋಗಿದೆ. ಯಾಕಂದ್ರೆ ಅಮೆರಿಕದ ಹಾಲಿ ಉಪಾಧ್ಯಕ್ಷೆ ಹಾಗೂ ಡೆಮಾಕ್ರಟಿಕ್ ಪಕ್ಷದ ಅಮೆರಿಕ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಆಗಿರುವ ಕಮಲಾ ಹ್ಯಾರಿಸ್ ಸಿಕ್ಕಾಪಟ್ಟೆ ಜನ ಬೆಂಬಲ ಪಡೆಯುತ್ತಿದ್ದಾರೆ. ಇದಕ್ಕೂ ಮೊದಲು ಜೋ ಬೈಡನ್ ಅವರ ವಿರುದ್ಧ ಅಮೆರಿಕ ಮತದಾರರು ಕೋಪಗೊಂಡಿದ್ದರು. ಆದರೆ ಇದೀಗ ಸ್ವತಃ ಜೋ ಬೈಡನ್ ಅವರು ಕಮಲಾ ಬಗ್ಗೆ ಏನು ಹೇಳಿದ್ದಾರೆ ಗೊತ್ತೆ?

ಹೌದು, ಇದೀಗ ಕಮಲಾ ಹ್ಯಾರಿಸ್ ಪರವಾಗಿ ಅಮೆರಿಕದ ದೊಡ್ಡ ದೊಡ್ಡ ರಾಜಕಾರಣಿಗಳ ದಂಡೇ ಪ್ರಚಾರ ಕಾರ್ಯ ನಡೆಸುತ್ತಿದೆ. ಅಮೆರಿಕದ ಮೂವರು ಮಾಜಿ ಅಧ್ಯಕ್ಷರು & ಮಾಜಿ ಉಪಾಧ್ಯಕ್ಷರು ಕೂಡ ಕಮಲಾ ಹ್ಯಾರಿಸ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ಮೂಲಕ ಡೊನಾಲ್ಡ್ ಟ್ರಂಪ್ ಹೀನಾಯ ಸೋಲಿಗೆ ಪಣತೊಟ್ಟು ನಿಂತಿದ್ದಾರೆ ಇವರೆಲ್ಲರೂ. ಯಾಕಂದ್ರೆ ಟ್ರಂಪ್ ವಿರುದ್ಧ ದೊಡ್ಡ ಪಡೆಯೇ ಅಲರ್ಟ್ ಆಗಿದೆ. ಇಷ್ಟೆಲ್ಲದರ ನಡುವೆ ಇದೀಗ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರೇ ಕಮಲಾ ಹ್ಯಾರಿಸ್ ಪರ ಮಹತ್ವದ ಹೇಳಿಕೆ ನೀಡಿದ್ದಾರೆ. ಇದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡವೇ ಶೇಕ್ ಶೇಕ್ ಆಗುವಂತೆ ಮಾಡಿದೆ.

American President Joe Biden Said This About Kamala Harris

ಡೊನಾಲ್ಡ್ ಟ್ರಂಪ್ ಸೋಲಿಗೆ ರಣಕಹಳೆ!

ಅಮೆರಿಕದ ಚಿಕಾಗೋ ಕಾರ್ಯಕ್ರಮ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ, ಯಾಕಂದ್ರೆ ಈ ಕಾರ್ಯಕ್ರಮದಲ್ಲೇ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಕಮಲಾ ಹ್ಯಾರಿಸ್‌ಗೆ ಪಕ್ಷದ ಉತ್ತರಾಧಿಕಾರ ಹಸ್ತಾಂತರ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಜೋ ಬೈಡನ್, ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗುವುದು ಗ್ಯಾರಂಟಿ ಎಂದು ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಡೊನಾಲ್ಡ್ ಟ್ರಂಪ್ ವಿರುದ್ಧ ಜೋ ಬೈಡನ್ ತೊಡೆ ತಟ್ಟಿದ್ದಾರೆ. ಅಮೆರಿಕದ ಮತದಾರರು ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಪರ ಒಲವು ತೋರಿಸುತ್ತಿದ್ದು, ಡೊನಾಲ್ಡ್ ಟ್ರಂಪ್ & ಬೆಂಬಲಿಗರು ಚಿಂತೆ ಮಾಡುವಂತಾಗಿದೆ.

ಪರದಾಡುತ್ತಿರುವ ಡೊನಾಲ್ಡ್ ಟ್ರಂಪ್?

ಒಟ್ನಲ್ಲಿ ಭಾರತ ಮೂಲದ ಮಹಿಳೆ ಒಬ್ಬರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ ಎನ್ನಬಹುದು. ಅದರಲ್ಲೂ ಇವರೇ ಅಮೆರಿಕದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷರೂ ಆಗಲಿದ್ದಾರೆ ಎಂಬುದು ಮತ್ತೊಂದು ಇತಿಹಾಸ. ಇದೇ ಕಾರಣಕ್ಕಾಗಿ, ಇಡೀ ಅಮೆರಿಕ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಲು ಇದೀಗ ಮತದಾನ ಮಾಡೋದಕ್ಕೆ ಕೂಡ ಕಾಯುತ್ತಿದೆ. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಕೂಡ ಗೆಲುವಿಗಾಗಿ ಎಲ್ಲಾ ರೀತಿಯಲ್ಲಿ ಪ್ರಯತ್ನ ಆರಂಭಿಸಿದ್ದು, ಟ್ರಂಪ್ ಪ್ರಯತ್ನಗಳು ಯಾವುದೇ ರೀತಿಯಲ್ಲಿ ವರ್ಕೌಟ್ ಆಗುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+