ಇಸ್ರೇಲ್ ಕಾರ್ಯಾಚರಣೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್...

ಮಧ್ಯಪ್ರಾಚ್ಯ ಭಾಗದಲ್ಲಿ ಯುದ್ಧದ ಬೆಂಕಿ ಹೊತ್ತಿಕೊಂಡಿದ್ದು, ಯಾವ ಕ್ಷಣದಲ್ಲಿ ಇದೆಲ್ಲಾ ಸ್ಫೋಟವಾಗಿ ದೊಡ್ಡ ಗಲಾಟೆ ಶುರುವಾಗುತ್ತೋ ಎಂಬ ಭಯ ಕಾಡುತ್ತಿದೆ. ಅದರಲ್ಲೂ ಈ ಸಮಯದಲ್ಲಿ ಇಸ್ರೇಲ್ ವಿರುದ್ಧ ಭೀಕರ ಯುದ್ಧ ನಡೆಸಲು ಹಲವು ದೇಶಗಳು ಸಜ್ಜಾಗಿದ್ದು, ಇಸ್ರೇಲ್ ಕೂಡ ತನ್ನ ಶತ್ರುಗಳ ಪಡೆಯ ಒಬ್ಬೊಬ್ಬರೇ ನಾಯಕರ ಹೆಣ ಬೀಳಿಸುತ್ತಿದೆ. ಹೀಗೆ ನಿನ್ನೆಯಷ್ಟೇ ಇಸ್ರೇಲ್ ನಡೆಸಿದ ಕಾರ್ಯಾಚರಣೆಗೆ ಹಿಜ್ಬುಲ್ಲಾ ಮುಖ್ಯಸ್ಥ ಜೀವ ಬಿಟ್ಟಿದ್ದು, ಇದರ ಬಗ್ಗೆ ಅಮೆರಿಕ ಅಧ್ಯಕ್ಷ ಹೇಳಿದ್ದೇನು?

ಅಂದಹಾಗೆ ಇಸ್ರೇಲ್ ಈಗ ದಕ್ಷಿಣ ಲೆಬನಾನ್ ಪ್ರದೇಶದಲ್ಲಿ ಹಿಜ್ಬುಲ್ಲಾ ಮೇಲೆ ದಾಳಿ ಮಾಡ್ತಿದೆ. ಹಿಜ್ಬುಲ್ಲಾ ಸಂಘಟನೆ ವಿರುದ್ಧ ಇಸ್ರೇಲ್ ಯಾವ ರೀತಿ ದಾಳಿ ಮಾಡುತ್ತಿದೆ ಎಂದರೆ, ಈಗಿನ ಪರಿಸ್ಥಿತಿ ನೋಡಿದರೆ ಹಿಜ್ಬುಲ್ಲಾ ಸಂಘಟನೆಯ ದೊಡ್ಡ ದೊಡ್ಡ ನಾಯಕರು ಜೀವ ಬಿಡುವುದು ಗ್ಯಾರಂಟಿ ಎನ್ನಲಾಗಿದೆ. ಅದೇ ರೀತಿ ಇದೀಗ, ಒಬ್ಬರಾದ ನಂತರ ಒಬ್ಬರು ಮುಖಂಡರು & ನಾಯಕರು ಜೀವ ಬಿಡುತ್ತಿದ್ದಾರೆ. ಇಸ್ರೇಲ್ ಮಿಲಿಟರಿಯ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಉಸಿರು ಚೆಲ್ಲಿರುವ ಸುದ್ದಿ ಮಿಂಚಿನಂತೆ ಸಂಚರಿಸಿದೆ. ಈ ಕುರಿತಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

American President Joe Biden Said This About Israel Operation

ಸಂತ್ರಸ್ತರಿಗೆ ನ್ಯಾಯ ಕೊಡಿಸಿದಂತೆ!

ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದೀಗ ಇಸ್ರೇಲ್ ಕಾರ್ಯಾಚರಣೆ ಬಗ್ಗೆ ಮಾತನಾಡಿದ್ದು, ಹಿಜ್ಬುಲ್ಲಾ ಸಂಘಟನೆ ಮುಖ್ಯಸ್ಥನ ಸಾವಿನಿಂದ ಸಂತ್ರಸ್ತರಿಗೆ ನ್ಯಾಯ ದೊರೆತಿದೆ ಎಂದಿದ್ದಾರೆ. ಈ ಮೂಲಕ ಸಂಕಷ್ಟದ ಸಮಯದಲ್ಲಿ ಮತ್ತೊಮ್ಮೆ ಇಸ್ರೇಲ್ ನೆರವಿಗೆ ನಿಂತಿದೆ ಅಮೆರಿಕದ ಸರ್ಕಾರ. ಇರಾನ್‌ ಬೆಂಬಲಿತ ಸಂಘಟನೆಗಳ ವಿರುದ್ಧ ನಿಂತಿರುವ ಅಮೆರಿಕ ಇದೀಗ ಈ ರೀತಿ ಇಸ್ರೇಲ್ ಪರವಾಗಿ ಸಮರ್ಥನೆ ಮಾಡಿಕೊಂಡಿದೆ ಎನ್ನಲಾಗಿದೆ. ಹಿಜ್ಬುಲ್ಲಾ ಬಂಡುಕೋರರ ಸಂಘಟನೆ ಮುಖ್ಯಸ್ಥ ಸಯ್ಯದ್‌ ಹಸನ್‌ ನಸ್ರಲ್ಲಾ ಸಾವು ಸಂತ್ರಸ್ತರಿಗೆ ನ್ಯಾಯ ಕೊಡಿಸಿದಂತೆ, ಎಂದಿರುವ ಜೋ ಬೈಡನ್ ಮಾತು ಚರ್ಚೆಗೂ ಕಾರಣವಾಗಿದೆ.

ಲೆಬನಾನ್, ಇರಾನ್, ಸಿರಿಯಾ...

ಇಸ್ರೇಲ್ ಬಗ್ಗೆ ಬೆಂಬಲ ವ್ಯಕ್ತಪಡಿಸಿ ಜೋ ಬೈಡನ್ ಅವರು ನೀಡಿರುವ ಹೇಳಿಕೆಯನ್ನ ಈಗ ಅಮೆರಿಕ ಶಕ್ತಿ ಕೇಂದ್ರ, ಅಂದ್ರೆ ಶ್ವೇತಭವನ ಹೇಳಿಕೆ ಬಿಡುಗಡೆ ಮೂಲಕ ಸಮರ್ಥಿಸಿಕೊಂಡಿದೆ. ಇದರ ಜೊತೆಗೆ ಇಸ್ರೇಲ್ ಬೆನ್ನಿಗೆ ಮತ್ತಷ್ಟು ಸೇನಾ ನೆರವು ನೀಡುವ ಬಗ್ಗೆ ಕೂಡ ಅಮೆರಿಕ ಇದೀಗ ಮಹತ್ವದ ಮುನ್ಸೂಚನೆ ನೀಡಿದೆ. ಅಮೆರಿಕದ ಈ ನಡೆಯು ಮಧ್ಯಪ್ರಾಚ್ಯ ಭಾಗದ ದೇಶಗಳಲ್ಲಿ ಮತ್ತಷ್ಟು ತಲ್ಲಣ ಸೃಷ್ಟಿ ಮಾಡುತ್ತಿದೆ. ಇನ್ನೊಂದು ಕಡೆ ಇಸ್ರೇಲ್ ಕೂಡ ತನ್ನ ಶತ್ರು ದೇಶಗಳಾದ ಲೆಬನಾನ್, ಇರಾನ್, ಸಿರಿಯಾ, ಗಾಜಾ ಪಟ್ಟಿ ಮೇಲೆ ಮತ್ತಷ್ಟು ಭೀಕರ ದಾಳಿಗೆ ಮುಂದಾಗಿದೆ ಎನ್ನಲಾಗಿದೆ. ಮತ್ತೊಂದು ಕಡೆ ಕೆಲವು ದಿನಗಳ ಹಿಂದಷ್ಟೇ ಇಸ್ರೇಲ್ ಪ್ರಧಾನಿ ಜೊತೆ ಮಾತುಕತೆ ನಡೆಸಿ, ಕದನ ವಿರಾಮ ಘೋಷಣೆ ಮಾಡಲು ಅಮೆರಿಕ ಮುಂದೆ ಬಂದಿತ್ತು. ಆದರೆ ಅಮೆರಿಕ & ಫ್ರಾನ್ಸ್ ಮಾಡಿದ್ದ ಈ ಪ್ರಯತ್ನ ಫ್ಲಾಪ್ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+