ಅಮೆರಿಕ ಚುನಾವಣೆಯಲ್ಲೂ ಶುರುವಾಯ್ತಾ ಭಯದ ವಾತಾವರಣ? ಜೋ ಬೈಡನ್‌ಗೆ ಭಯ ಏಕೆ?

ಅಮೆರಿಕದಲ್ಲಿ ಚುನಾವಣೆ ನಡೆಯಲು ಇನ್ನು ಸರಿಯಾಗಿ ಒಂದು ತಿಂಗಳು ಬಾಕಿ ಇದ್ದು, ಈ ಬಾರಿಯ ಚುನಾವಣೆ ಅಮೆರಿಕದ ಭವಿಷ್ಯ ನಿರ್ಧಾರ ಮಾಡಲಿದೆ ಎಂಬ ಮಾತುಗಳು ಇದೀಗ ಓಡಾಡುತ್ತಿವೆ. ಹೀಗಿದ್ದಾಗ ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ನಡುವೆ ಭಾರಿ ಫೈಟ್ ಶುರುವಾಗಿದೆ. ಗೆಲುವಿಗಾಗಿ ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ತಮ್ಮ ಶಕ್ತಿಯ ಮೀರಿ ಹೋರಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ, ಅಮೆರಿಕ ಚುನಾವಣೆಯಲ್ಲೂ ಶುರುವಾಯ್ತಾ ಭಯದ ವಾತಾವರಣ? ಜೋ ಬೈಡನ್‌ಗೆ ಭಯ ಏಕೆ?

ಅಮೆರಿಕ ಅಧ್ಯಕ್ಷೀಯ ಚುನಾವಣೆ ಇನ್ನೇನು ಮುಂದಿನ ತಿಂಗಳು ಅಂದ್ರೆ ನವೆಂಬರ್ 5 ರಂದು ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ ಅಮೆರಿಕ ಸರ್ಕಾರ. ಪರಿಸ್ಥಿತಿ ಹೀಗೆ ಸೂಕ್ಷ್ಮವಾಗಿದ್ದು, ಸೋಲು & ಗೆಲುವಿನ ಲೆಕ್ಕಾಚಾರ ಕೂಡ ನಡೆಯುತ್ತಿದೆ. ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಇಬ್ಬರ ನಡುವೆ ಗೆಲುವು ಯಾರಿಗೆ? ಎಂಬ ಟ್ರಿಲಿಯನ್ ಡಾಲರ್ ಪ್ರಶ್ನೆ ಶುರುವಾಗಿದೆ. ಇಂತಹ ಸಮಯದಲ್ಲೇ ಅಮೆರಿಕದ ಹಾಲಿ ಅಧ್ಯಕ್ಷ ಹಾಗೂ ಅಮೆರಿಕ ಚುನಾವಣೆಯ ಅಖಾಡದಿಂದ ಹಿಂದೆ ಸರಿದಿದ್ದ ಜೋ ಬೈಡನ್ ಸ್ಫೋಟಕ ಆರೋಪ ಮಾಡಿ ಸುದ್ದಿಯಲ್ಲಿ ಇದ್ದಾರೆ.

American President Joe Biden Said This About Election

ಅಮೆರಿಕದಲ್ಲಿ ಗಲಾಟೆ ನಡೆಯುತ್ತಾ?

ಅಂದಹಾಗೆ ಜೋ ಬೈಡನ್ ಇದೀಗ ಹೇಳಿರುವಂತೆ, ನವೆಂಬರ್‌ 5ರ ಅಧ್ಯಕ್ಷೀಯ ಚುನಾವಣೆ ಶಾಂತಿಯುತವಾಗಿ ನಡೆಯುವುದು ಅನುಮಾನ ಎಂದಿದ್ದಾರೆ ಬೈಡನ್. ಹೀಗೆ ಜೋ ಬೈಡನ್‌ರ ಹೇಳಿಕೆ ಇದೀಗ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಯಾಕೆ ಅಂದ್ರೆ ಈಗಾಗಲೇ ಡೊನಾಲ್ಡ್ ಟ್ರಂಪ್ ಮೇಲೆ 2 ಬಾರಿ ಹತ್ಯೆ ಪ್ರಯತ್ನ ನಡೆದಿದೆ.

ಹೀಗಿದ್ದಾಗ ಜೋ ಬೈಡನ್ ಕೂಡ ಅಮೆರಿಕದಲ್ಲಿ ಶಾಂತಿ ಕದಡುವ ಸಾಧ್ಯತೆ ಇದೆ ಎಂದಿರುವುದು ಅಲ್ಲಿ ಮತ್ತೊಂದು ಆತಂಕ ಸೃಷ್ಟಿ ಮಾಡಿದೆ. ಜೋ ಬೈಡನ್ ತಮ್ಮ ಹೇಳಿಕೆ ಸಮರ್ಥಿಸಿಕೊಂಡು 2020ರ ಅಧ್ಯಕ್ಷೀಯ ಚುನಾವಣೆ ಸೋಲನ್ನು ಡೊನಾಲ್ಡ್ ಟ್ರಂಪ್ ಈಗಲೂ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ಅಲ್ಲದೆ ಇದೆಲ್ಲವನ್ನೂ ನೋಡುತ್ತಿದ್ದರೆ ನವೆಂಬರ್‌ 5ರ ಅಧ್ಯಕ್ಷೀಯ ಚುನಾವಣೆ ಶಾಂತಿಯುತವಾಗಿ ನಡೆಯುವುದು ಅನುಮಾನ ಎಂಬ ರೀತಿ ಹೇಳಿಕೆ ನೀಡಿದ್ದಾರೆ ಬೈಡನ್.

ಡೊನಾಲ್ಡ್ ಟ್ರಂಪ್‌ಗೆ ಬೈಡನ್ ಎಚ್ಚರಿಕೆ?

ಜೋ ಬೈಡನ್ ಇದೀಗ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಪ್ರಚೋದನಕಾರಿ ಭಾಷಣಗಳನ್ನ ಪ್ರಸ್ತಾಪ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರ ವೇಳೆ ಬಳಕೆಯಾಗುತ್ತಿರುವ ಆಕ್ರಮಣಕಾರಿ ಭಾಷೆಯ ಬಗ್ಗೆ ಈಗ, ಜೋ ಬೈಡನ್‌ಗೆ ಸಂಸದರು & ವಿಶ್ಲೇಷಕರು ಮುನ್ನೆಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಅಮೆರಿಕದಲ್ಲಿ ಶಾಂತಿಯನ್ನ ಹಾಳು ಮಾಡಬಹುದು ಎಂಬ ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಜೋ ಬೈಡನ್ ನೇರವಾಗೇ ಡೊನಾಲ್ಡ್ ಟ್ರಂಪ್‌ಗೆ ವಾರ್ನಿಂಗ್ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗಳು ಹಾಗೂ ಹಿಂದಿನ ಚುನಾವಣಾ ಫಲಿತಾಂಶದ ಬಗ್ಗೆ ಡೊನಾಲ್ಡ್ ಟ್ರಂಪ್ ಮಾತು ಅಪಾಯಕಾರಿ ಎಂದಿದ್ದಾರೆ ಜೋ ಬೈಡನ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+