ಚೀನಾ ವಿರುದ್ಧ ರೊಚ್ಚಿಗೆದ್ದರಾ ಅಮೆರಿಕ ಅಧ್ಯಕ್ಷ? ಜೋ ಬೈಡನ್ ಹೇಳಿದ್ದೇನು?
ಚೀನಾ ವಿರುದ್ಧ ಅಮೆರಿಕ ಮತ್ತೊಮ್ಮೆ ರೊಚ್ಚಿಗೆದ್ದಿದೆ, ಹಲವು ವರ್ಷಗಳಿಂದ ಚೀನಾ ಮತ್ತು ಅಮೆರಿಕ ನಡುವೆ ತಿಕ್ಕಾಟ ಇದ್ದೇ ಇತ್ತು. ಇತ್ತೀಚಿನ ವರ್ಷಗಳಲ್ಲಿ ಚೀನಾ ಮತ್ತು ಅಮೆರಿಕದ ನಡುವೆ ಜಗಳ ಜೋರಾಗಿತ್ತು. ಅಲ್ಲದೆ ದಕ್ಷಿಣ ಚೀನಾ ಸಮುದ್ರ ಭಾಗದ ವಿಚಾರದಲ್ಲಿ ಚೀನಾ ಹಲವು ಸಂದರ್ಭಗಳಲ್ಲಿ ಅಮೆರಿಕ ವಿರುದ್ಧ ಎಚ್ಚರಿಕೆ ಮಾತುಗಳನ್ನ ಆಡಿದೆ. ಹೀಗಿದ್ದಾಗಲೇ 'ಕ್ವಾಡ್' ಸಮ್ಮೇಳನ ನಡೆಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಚೀನಾ ಬಗ್ಗೆ ಹೇಳಿದ್ದೇನು? ಜಾಗತಿಕ ಮಟ್ಟದಲ್ಲಿ ಮತ್ತೆ ಚೀನಾ & ಅಮೆರಿಕ ನಡುವೆ ಫೈಟಿಂಗ್ ಶುರುವಾಗುತ್ತಾ?
ಜಗತ್ತಿನಲ್ಲಿ ಇದೀಗ ನಂಬರ್ 1 ಸ್ಥಾನಕ್ಕೆ ಫೈಟಿಂಗ್ ಶುರುವಾಗಿದೆ. ಅಮೆರಿಕ & ಚೀನಾ ಮಧ್ಯೆ ಇದೀಗ ನಂಬರ್ 1 ಸ್ಥಾನಕ್ಕೆ ಫೈಟಿಂಗ್ ಆರಂಭ ಆಗಿದೆ. ಇಂತಹ ಸಮಯದಲ್ಲೇ 'ಕ್ವಾಡ್'ನ ಒಕ್ಕೂಟ ರಚನೆ ಮಾಡಿ, ಭಾರತ & ಆಸ್ಟ್ರೇಲಿಯಾ & ಜಪಾನ್ ಜೊತೆಯಲ್ಲಿ ಅಮೆರಿಕ ಕೂಡ ಕೈಜೋಡಿಸಿದೆ. ಈ ಮೂಲಕ, ದಕ್ಷಿಣ ಚೀನಾ ಸಮುದ್ರ ಪ್ರದೇಶ ಹಾಗೂ ಹಿಂದೂ ಮಹಾ ಸಾಗರ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಅಮೆರಿಕ ಪ್ರಯತ್ನ ನಡೆಸುತ್ತಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಇದೇ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ದಿಢೀರ್ 'ಕ್ವಾಡ್' ಸಮ್ಮೇಳನ ಅಂದ್ರೆ 'ಕ್ವಾಡ್' ಶೃಂಗಸಭೆ ಕರೆದಿದ್ದಾರೆ. ಹಾಗಾದ್ರೆ ಚೀನಾ ವಿರುದ್ಧ ರೊಚ್ಚಿಗೆದ್ದ ಜೋ ಬೈಡನ್ ಹೇಳಿದ್ದೇನು?

ಅಮೆರಿಕ ಅಧ್ಯಕ್ಷ ಹೇಳಿದ್ದು ಏನು?
ಅಂದಹಾಗೆ 'ಕ್ವಾಡ್' ಶೃಂಗಸಭೆ ಸಮಯದಲ್ಲಿ ಜೋ ಬೈಡನ್ ಅವರು, ಚೀನಾ ವಿರುದ್ಧ ಗರಂ ಆಗಿ ನೀಡಿರುವ ಹೇಳಿಕೆ 'ಹಾಟ್ ಮೈಕ್' ಮೂಲಕ ಊರಿಗೆಲ್ಲಾ ತಿಳಿಯುವಂತಾಗಿದೆ. ಬೈಡನ್ ಅವರ ಈ ಹೇಳಿಕೆಯ ಪ್ರಕಾರ, ಚೀನಾ 'ಕ್ವಾಡ್' ಒಕ್ಕೂಟದ ಸದಸ್ಯ ದೇಶಗಳನ್ನು ಪರೀಕ್ಷೆ ಮಾಡುತ್ತಿದೆ ಎಂದಿದ್ದಾರೆ. ಈ ಮೂಲಕ ಚೀನಾ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿ ನಿಲ್ಲುತ್ತಿರುವ ವಿಚಾರವನ್ನು ಜೋ ಬೈಡನ್ ಪ್ರಸ್ತಾಪ ಮಾಡಿದ್ದಾರೆ. ಇದೇ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಕಿಶಿಡಾ ಕೂಡ ಹಾಜರಿದ್ದರು. ಹೀಗಾಗಿ, ಜೋ ಬೈಡನ್ ಹೇಳಿಕೆ ಇದೀಗ ಸಂಚಲನ ಸೃಷ್ಟಿ ಮಾಡುವ ಜೊತೆಗೆ ಸಾಕಷ್ಟು ಮಹತ್ವ ಕೂಡ ಪಡೆದುಕೊಂಡಿದೆ.
ದಕ್ಷಿಣ ಚೀನಾ ಸಮುದ್ರದ ಬಗ್ಗೆ...
ಹಾಗೇ ಜೋ ಬೈಡನ್, ಆಕ್ರಮಣಕಾರಿ ವರ್ತನೆಯು ಇಂಡೋ-ಪೆಸಿಫಿಕ್ ಭಾಗದಲ್ಲಿ ಆರ್ಥಿಕತೆ, ತಂತ್ರಜ್ಞಾನ ಸೇರಿ ವಿವಿಧ ರೀತಿ ಪರೀಕ್ಷೆ ಎದುರಾಗುವಂತೆ ಮಾಡಿದೆ ಎಂದಿದ್ದಾರೆ. ಈ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ. ಹಾಗೇ ಮತ್ತೊಂದು ಕಡೆ ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರ ಪ್ರದೇಶಗಳ ಬಗ್ಗೆಯೂ ಕೂಡ ಜೋ ಬೈಡನ್ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ ದಕ್ಷಿಣ ಚೀನಾ ಸಮುದ್ರ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ವಿಚಾರ ಹಾಗೂ ಅದನ್ನ ವಿಯೆಟ್ನಾಂ, ಮಲೇಷ್ಯಾ, ಫಿಲಿಪ್ಪೀನ್ಸ್, ಬ್ರೂನೈ ಸೇರಿದಂತೆ ತೈವಾನ್ ದೇಶಗಳು ಈಗ ವಿರೋಧ ಮಾಡುತ್ತಿರುವ ಬಗ್ಗೆ ಕೂಡ ಇದೇ ವೇಳೆ ಪ್ರಸ್ತಾಪ ಮಾಡಲಾಗಿದೆ ಎನ್ನಲಾಗಿದೆ.












Click it and Unblock the Notifications