ಅಯ್ಯೋ.. ಸುಮ್ ಸುಮ್ನೆ ಬಾಂಬ್ ಹಾಕಬೇಡಿ ಅಂತಿದೆ ಅಮೆರಿಕ!

ಅಮೆರಿಕ ಪರಿಸ್ಥಿತಿ ಗುಡಿಯಲ್ಲಿ ಇರುವ ಘಂಟೆಯಂತೆ ಆಗಿದೆ, ಯಾಕಂದ್ರೆ ರಷ್ಯಾದಿಂದ ಹಿಡಿದು ಸಣ್ಣ ದೇಶ ಉತ್ತರ ಕೊರಿಯಾ ತನಕ ಎಲ್ಲರೂ ಬಂದು ಬಂದು ಬಾರಿಸಿ ಹೋಗುತ್ತಿದ್ದಾರೆ. ಈ ರೀತಿ ಅಮೆರಿಕ ಸೋಲು ಅನುಭವಿಸಲು ಕಾರಣ ಹಲವು ಅನ್ನೋ ಆರೋಪ ಕೇಳಿಬರುತ್ತಿದೆ. ಹೀಗಿದ್ದಾಗಲೇ ಇಸ್ರೇಲ್ & ಹಮಾಸ್ ಯುದ್ಧ ಕೂಡ ಅಮೆರಿಕದ ಪಾಲಿಗೆ ತಲೆನೋವಾಗಿದೆ. ಇದೇ ಪರಿಸ್ಥಿತಿಯಲ್ಲಿ ಅಮೆರಿಕ ಅಧ್ಯಕ್ಷ ಬೈಡನ್ ಅಲರ್ಟ್ ಆಗಿದ್ದಾರೆ!

ರಷ್ಯಾ & ಉಕ್ರೇನ್ ಯುದ್ಧದ ರೀತಿ ಹಮಾಸ್ & ಇಸ್ರೇಲ್ ವಾರ್ ಕೂಡ ರಕ್ತ ಹರಿಸುತ್ತಿದೆ. ಇದೇ ಕಾರಣಕ್ಕೆ ಜಾಗತಿಕವಾಗಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಇಸ್ರೇಲ್‌ ಹಾಗೂ ಹಮಾಸ್‌ ಮಧ್ಯೆ ಯುದ್ಧ ಇನ್ನಷ್ಟು ಭೀಕರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಅಪಾಯವೂ ಇದೆ. ಈವರೆಗೆ ಗಾಜಾದ ಸುಮಾರು, 24 ಸಾವಿರ ನಾಗರಿಕರು ಈ ಯುದ್ಧದಲ್ಲಿ ಬಲಿಯಾಗಿದ್ದಾರೆ ಎನ್ನಲಾಗಿದೆ. ಹಾಗೇ ಗಾಜಾದ ಸುಮಾರು 23 ಲಕ್ಷ ಜನಸಂಖ್ಯೆಯಲ್ಲಿ ಶೇ 85ರಷ್ಟು ಜನ ಊರು ಬಿಟ್ಟಿದ್ದಾರಂತೆ. ಇದೇ ಪರಿಸ್ಥಿತಿಯಲ್ಲಿ ಅಮೆರಿಕ ಅಲರ್ಟ್ ಆಗಿ ಇಸ್ರೇಲ್‌ಗೆ ಬುದ್ಧಿ ಹೇಳಲು ಮುಂದಾಗಿದೆ.

American President Joe Biden And Israel PM Spoke About The Present Situation

ಅಮೆರಿಕಗೆ ಶುರುವಾಯ್ತು ತಲೆನೋವು

ಹೌದು, ಕದನ ವಿರಾಮ ಘೋಷಿಸಲು ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿಯದೆ ಸೇನಾ ಕಾರ್ಯಾಚರಣೆ ಮುಂದುವರಿಸಿರುವ ಇಸ್ರೇಲ್ ಈಗ ಅಮೆರಿಕಗೆ ಕೂಡ ಭಾರಿ ಟೆನ್ಷನ್ ಕೊಡುತ್ತಿದೆ. ಯಾಕಂದ್ರೆ ಇಸ್ರೇಲ್ ಪರ ನಿಂತಿರುವ ಅಮೆರಿಕಗೆ ಇದು ನುಂಗಲಾರದ ತುತ್ತು ಎನ್ನಬಹುದು. ಈ ಎಲ್ಲಾ ಬೆಳವಣಿಗೆ ಮಧ್ಯೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜತೆಗೆ ಮಾತುಕತೆ ನಡೆಸಿದ್ದಾರಂತೆ. ಈ ಮೂಲಕ ಭರ್ಜರಿ 1 ತಿಂಗಳ ಬಳಿಕ ಇಸ್ರೇಲ್ ಮತ್ತು ಅಮೆರಿಕದ ಮುಖ್ಯಸ್ಥರು ಚರ್ಚೆ ನಡೆಸಿದ್ದಾರೆ.

ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಮಾತನಾಡಿದ್ದೇನು?

ಅಷ್ಟಕ್ಕೂ ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿ, ಹಮಾಸ್ ಉಗ್ರರ ಸೆರೆಯಲ್ಲಿ ಇರುವ ಒತ್ತೆಯಾಳು ಬಿಡುಗಡೆಗೊಳಿಸಲು ನಡೆಸುತ್ತಿರುವ ಪ್ರಯತ್ನ ಸೇರಿದಂತೆ ಗಾಜಾದಲ್ಲಿನ ಸ್ಥಿತಿ ಬಗ್ಗೆ ಇಸ್ರೇಲ್ ಮತ್ತು ಅಮೆರಿಕದ ಮುಖ್ಯಸ್ಥರು ಮಾತುಕತೆ ನಡೆಸಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೀಗೆ ಗಂಭೀರ ಮಾತುಕತೆ ನಡೆಸಿದ್ದಾರಂತೆ. ಈ ಮೂಲಕ ಯುದ್ಧ ನಿಲ್ಲುತ್ತಾ? ಎಂಬ ಕುತೂಹಲ ಕೂಡ ಇದೀಗ ಮೊಳಕೆಯೊಡೆದಿದೆ.

ಅಮೆರಿಕ ವಿರುದ್ಧ ತೀವ್ರ ಆಕ್ರೋಶ

ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕ ಇದೀಗ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆಲ್ಲಾ ಕಾರಣ ಅಮೆರಿಕದ ನಿಲುವು. ಒಂದು ಕಡೆ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಇದೇ ಅಮೆರಿಕ ಯುದ್ಧ ನಿಲ್ಲಬೇಕು ಅಂತಿದೆ. ಆದರೆ ಇಸ್ರೇಲ್ & ಹಮಾಸ್ ಯುದ್ಧದಲ್ಲಿ ಜಗತ್ತಿನ ದೊಡ್ಡಣ್ಣ ಅಮೆರಿಕ ತನ್ನ ನಿಲುವು ಬದಲಾಯಿಸಿಕೊಂಡಿದೆ. ಹೀಗಾಗಿ ಇಸ್ರೇಲ್ & ಗಾಜಾದ ಯುದ್ಧವು ಅಮೆರಿಕಗೆ ನುಂಗಲಾರದ ತುತ್ತಾಗಿದೆ.

American President Joe Biden And Israel PM Spoke About The Present Situation

ಬುದ್ಧಿ ಹೇಳಿದೆಯಾ ಅಮೆರಿಕ?

ಇದೇ ಕಾರಣಕ್ಕೆ ಪ್ಯಾಲೆಸ್ತೀನ್‌ ನಾಗರಿಕರ ರಕ್ಷಣೆಗೆ ಒತ್ತು ನೀಡುವಂತೆ ಬೈಡನ್‌ ಆಡಳಿತ ಪದೇ ಪದೇ ಹೇಳುತ್ತಿದೆ. ಆದರೆ ಅದನ್ನ ಇಸ್ರೇಲ್ ಪರಿಗಣಿಸದೆ, ಗಾಜಾಪಟ್ಟಿ ಮೇಲೆ ದಾಳಿಯನ್ನು ಮಾಡುತ್ತಿದೆ ಎಂಬ ಆರೋಪ ಇದೆ. ಹೀಗಾಗಿ ಅಮೆರಿಕ ಮತ್ತು ಇಸ್ರೇಲ್ ನಡುವೆ ಸ್ನೇಹವು ಹಾಳಾಗಲಿದೆ ಎನ್ನಲಾಗಿತ್ತು. ಆದರೆ ಇದೀಗ ದಿಢೀರ್ ಅಮೆರಿಕ ಅಧ್ಯಕ್ಷ ಬೈಡನ್, ಇಸ್ರೇಲ್ ಪ್ರಧಾನಿಗೆ ಕಾಲ್ ಮಾಡಿ ಮಾತುಕತೆ ನಡೆಸಿದ್ದಾರೆ.

ಒಟ್ನಲ್ಲಿ ಹೇಗಾದ್ರೂ ಮಾಡಿ ಯುದ್ಧ ನಿಲ್ಲಿಸಬೇಕು ಅಂತಾ ವಿಶ್ವಸಂಸ್ಥೆ ತನ್ನ ಪ್ರಯತ್ನವನ್ನು ಮುಂದುವರಿಸಿದೆ. ಆದರೆ ಈ ಪ್ರಯತ್ನಕ್ಕೆ ಫಲ ಸಿಗುತ್ತಿಲ್ಲ. ಅದರಲ್ಲೂ, ಅಮೆರಿಕ ಕೆಲವು ದಿನಗಳ ಹಿಂದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಧಾರಕ್ಕೆ ಅಡ್ಡ ಬಂದಿತ್ತು. ಅಮೆರಿಕ ತನ್ನ ವೀಟೋ ಪವರ್ ಬಳಸಿತ್ತು. ಹೀಗಾಗಿ ಅಮೆರಿಕ ವಿರುದ್ಧ ಕೂಡ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಎಚ್ಚೆತ್ತುಕೊಂಡ ಅಮೆರಿಕ ಡ್ಯಾಮೇಜ್ ಕಂಟ್ರೋಲ್ ಮಾಡೋಕೆ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+