3ನೇ ಮಹಾಯುದ್ಧ ಶುರು? ಪುಟಿನ್‌ಗೆ ವಾರ್ನಿಂಗ್ ಕೊಟ್ಟ ಅಮೆರಿಕ, ಯುದ್ಧ ಘೋಷಿಸುತ್ತಾರಾ ಪುಟಿನ್?
ರಷ್ಯಾ & ಅಮೆರಿಕ ಮಧ್ಯೆ ಜಿದ್ದು ಶುರುವಾಗಿ ಬರೋಬ್ಬರಿ 75 ವರ್ಷಕ್ಕೂ ಹೆಚ್ಚು ಸಮಯ ಕಳೆದು ಹೋಗಿದೆ. ಆದರೂ ಈ ಎರಡೂ ದೇಶಗಳ ನಡುವೆ ರಾಜಿ ನಡೆಯುತ್ತಿಲ್ಲ. ಹೀಗಾಗಿ ಎರಡೂ ದೇಶಗಳು ಹಾವು & ಮುಂಗುಸಿ ರೀತಿ ಕಿತ್ತಾಡುತ್ತಿವೆ. ಇದೇ ಸಮಯದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಶತ್ರು ಅಲೆಕ್ಸಿ ನವಲ್ನಿ ರಷ್ಯಾ ಜೈಲಿನಲ್ಲೆ ಜೀವ ಬಿಟ್ಟಿದ್ದಾರೆ. ಹೀಗಿದ್ದಾಗ ಅಮೆರಿಕ ಅಧ್ಯಕ್ಷ ಜೋ ಬೈಡನ್, ಇದೀಗ ಪುಟಿನ್ ವಿರುದ್ಧ ಕೆಂಡ ಕಾರಿದ್ದಾರೆ. ಹೀಗಾಗಿಯೇ 3ನೇ ಮಹಾಯುದ್ಧದ ಭೀತಿ ಆವರಿಸಿದೆ, ಯಾಕೆ ಹೇಳಿ?
ಮೊದಲೆ ಹೇಳಿದಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ದೊಡ್ಡ ವಿರೋಧಿ ಅಂತಾನೆ ಅಲೆಕ್ಸಿ ನವಲ್ನಿ ಅವ್ರನ್ನ ಗುರುತಿಸಲಾಗಿತ್ತು. ಹೀಗೆ ಅಲೆಕ್ಸಿ ನವಲ್ನಿ ವಿರುದ್ಧ ವಿಧ್ವಂಸಕ ಕೃತ್ಯ ಆರೋಪ ಹೊರಿಸಿ, 19 ವರ್ಷ ಕಾರಾಗೃಹ ಶಿಕ್ಷೆ ಕೂಡ ವಿಧಿಸಲಾಗಿತ್ತು. ಆದರೆ ಹೀಗೆ ಶಿಕ್ಷೆಗೆ ಗುರಿಯಾಗಿದ್ದ ಅಲೆಕ್ಸಿ ನವಲ್ನಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ, ಬೇರೆ ಜೈಲಿಗೆ ಶಿಫ್ಟ್ ಆಗಿದ್ದರು.

ಇನ್ನೂ ರಷ್ಯಾದ ವ್ಲಾದಿಮಿರ್ ಪ್ರಾಂತ್ಯದ ಕೇಂದ್ರೀಯ ಕಾರಾಗೃಹದಿಂದ, ಭಾರಿ ಭದ್ರತೆ ಇರುವ ಕಾರಾಗೃಹಕ್ಕೆ ಪುಟಿನ್ ಶತ್ರು ನವಲ್ನಿಯನ್ನ ಶಿಫ್ಟ್ ಮಾಡಲಾಗಿತ್ತು. ಆದರೆ ಈಗ ನವಲ್ನಿ ಜೀವ ಹೋಗಿಬಿಟ್ಟಿದೆ. ಹೀಗಾಗಿಯೇ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಇದೀಗ ಪುಟಿನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದು 3ನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಡುತ್ತಿದ್ದು, ಅದರ ಇಂಚಿಂಚು ಕಾರಣ ಇಲ್ಲಿ ತಿಳಿಯೋಣ ಮುಂದೆ ಓದಿ.
ಅಮೆರಿಕದ ವಾರ್ನಿಂಗ್ ಹೇಗಿತ್ತು?
ಅಲೆಕ್ಸಿ ನವಲ್ನಿ ಸಾವಿಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಾರಣ ಅಂತಾ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದೀಗ ಗಂಭೀರ ಆರೋಪ ಮಾಡಿದ್ದಾರೆ. ಅದರಲ್ಲೂ ರಷ್ಯಾ & ಉಕ್ರೇನ್‌ನ ನಡುವೆ ಭೀಕರ ಯುದ್ಧ, ಹಿಂಸಾಚಾರ ನಡೆಯುವ ಸಮಯದಲ್ಲೇ ಜೋ ಬೈಡನ್ ಹೀಗೆಲ್ಲಾ ಹೇಳಿಕೆ ನೀಡಿರುವುದು ಭಾರಿ ಗೊಂದಲ ಸೃಷ್ಟಿ ಮಾಡಿದೆ. ಅಮೆರಿಕ ಅಧ್ಯಕ್ಷರ, ಅಧಿಕೃತವಾದ ಸರ್ಕಾರಿ ನಿವಾಸ ವೈಟ್‌ಹೌಸ್ ಅಂದ್ರೆ ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡನ್, ಅಲೆಕ್ಸಿ ನವಲ್ನಿ ಸಾವು ನೋಡಿ ನನಗೆ ಆಶ್ಚರ್ಯ ಆಗಲಿಲ್ಲ. ಆದ್ರೆ ನನ್ನಲ್ಲಿ ಘಟನೆ ಆಕ್ರೋಶ ಮೂಡಿಸಿದೆ. ನವಲ್ನಿ ನಿಧನ ಪರಿಣಾಮ, ರಷ್ಯಾದ ಆಡಳಿತ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಎದುರಾಗಬಹುದು ಅಂತಾ ವಾರ್ನಿಂಗ್ ಕೊಟ್ಟಿದ್ದಾರೆ.

3ನೇ ಮಹಾಯುದ್ಧ ಫಿಕ್ಸ್ ಆಯ್ತಾ?
ತಮ್ಮ ಮಾತು ಮುಂದುವರಿಸಿ ವಾಗ್ದಾಳಿ ನಡೆಸಿದ ಬೈಡನ್, ಪುಟಿನ್ ಸರ್ಕಾರದ ಭ್ರಷ್ಟಾಚಾರ & ಹಿಂಸಾಚಾರ ವಿರುದ್ಧ ಧ್ವನಿಯೆತ್ತಿದ್ದ ವಿರೋಧ ಪಕ್ಷದ ನಾಯಕನಿಗೆ ಸಂದ ಗೌರವ ಇದಾಗಿದೆ. ನವಲ್ನಿ ಸಾವಿಗೆ ಕಾರಣ ಆದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಅಂತಾ ಬೈಡನ್ ಗುಡುಗಿದ್ದಾರೆ. ಅಲ್ಲದೆ ನವಲ್ನಿಗೆ ಏನಾಯಿತು ಅಂತಾ ನಮಗೆ ನಿಖರವಾಗಿ ತಿಳಿದಿಲ್ಲ. ಆದ್ರೂ ನವಲ್ನಿ ಸಾವಿನ ಹಿಂದೆ ಪುಟಿನ್ & ಅವರ ಸಹಚರರ ಕೈವಾಡವೂ ಇದೆ ಅನ್ನೋದರಲ್ಲಿ ಡೌಟ್ ಇಲ್ಲ ಎಂದಿದ್ದಾರೆ ಅಮೆರಿಕ ಅಧ್ಯಕ್ಷ ಜೋ ಬೈಡನ್. ಹೀಗಾಗಿ 3ನೇ ಮಹಾಯುದ್ಧ ಫಿಕ್ಸ್ ಆಯ್ತಾ? ಅನ್ನೋ ಆತಂಕ ಆವರಿಸಿದೆ.

ಹೀಗೆ ಅಮೆರಿಕ ಅಧ್ಯಕ್ಷರು ಮಾಡಿರುವ ಆರೋಪದ ಪರಿಣಾಮ, ಮೊದಲೇ ಕೋಪಗೊಂಡ ರಷ್ಯಾ ಇದೀಗ ಅಮೆರಿಕ ವಿರುದ್ಧ ಯುದ್ಧ ಸಾರುತ್ತಾ? ಅನ್ನೋ ಭಯ ಆವರಿಸಿದೆ. ಯಾಕೆ ಅಂದ್ರೆ ಈಗಾಗಲೇ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ಹಿನ್ನೆಲೆ, ಅಮೆರಿಕ & ರಷ್ಯಾ ಮಧ್ಯೆ ದೊಡ್ಡ ಕಿರಿಕ್ ನಡೆಯುತ್ತಿದೆ. ಹೀಗಿದ್ದಾಗಲೇ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ರ ಮಾತುಗಳು, ರಷ್ಯಾ ಅಧ್ಯಕ್ಷರನ್ನ ಕೆರಳಿಸಿದೆ. ಹೀಗಾಗಿ 3ನೇ ಮಹಾಯುದ್ಧದ ಕಾರ್ಮೋಡ ಎಲ್ಲೆಲ್ಲೂ ಆವರಿಸಿದೆ.












Click it and Unblock the Notifications