ಅಂಕಲ್‌ನ ಹೊಡಿತಿನಿ ಸುಬ್ಬಿ... ಅಂತಾ ಅಬ್ಬರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್! Israel And Iran

ಯುದ್ಧ ಒಂದು ಘೋರವಾಗುತ್ತಿದೆ, ಮನುಷ್ಯರ ಅವನತಿ ಕೂಡ ಹತ್ತಿರವೇ ಬರುತ್ತಿದೆ. ಹೀಗೆ ನೋಡ ನೋಡುತ್ತಲೇ ಎಲ್ಲೆಲ್ಲೂ ಬೆಂಕಿಯ ಮಳೆ ಸುರಿಸುವ ಮಿಸೈಲ್ & ಫೈಟರ್ ಜೆಟ್‌ಗಳ ಅಬ್ಬರ ಕೂಡ ಜೋರಾಗುತ್ತಿದೆ. ಅಂದಹಾಗೆ ಇದು ಮಧ್ಯಪ್ರಾಚ್ಯ ಭಾಗದ ಈಗಿನ ಪರಿಸ್ಥಿತಿ, ಹಾಗೂ ಇಡೀ ಜಗತ್ತಿಗೆ ಕಂಟಕ ತರುತ್ತಿರುವ ಈ ಯುದ್ಧ ಮತ್ತೊಂದು ಮಹಾಯುದ್ಧಕ್ಕೆ ಕೂಡ ಮುನ್ನುಡಿ ಬರೆಯಲು ಸಜ್ಜಾಗಿದೆ. ಇಂತಹ ಸಮಯದಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ!

ಇರಾನ್ & ಅಮೆರಿಕ ನಡುವೆ ಘೋರವಾದ ಶತ್ರುತ್ವ ಇದ್ದು, ಇಬ್ಬರೂ ಸ್ನೇಹದಿಂದ ಚರ್ಚೆ ಮಾಡುವುದು ಬಿಡಿ ಅದನ್ನು ಕನಸಲ್ಲೂ ನೆನಪು ಮಾಡಿಕೊಳ್ಳಲ್ಲ. ಯಾಕಂದ್ರೆ ಅಮೆರಿಕದ ವಿರುದ್ಧ ಇರಾನ್ ರೊಚ್ಚಿಗೆದ್ದಿದೆ, ಹಾಗೇ ಇರಾನ್ ವಿರುದ್ಧ ಇದೀಗ ಇಸ್ರೇಲ್ ಭಾರಿ ಘೋರ ದಾಳಿ ಮಾಡುತ್ತಿದೆ. ಹೀಗೆ, ಇಬ್ಬರ ನಡುವೆ ನಡೆಯುತ್ತಿರುವ ರಣಭೀಕರ ವಾರ್ ಸಂಚಲನ ಸೃಷ್ಟಿಸುವ ಜೊತೆಗೆ ಪರಮಾಣು ಅಸ್ತ್ರಗಳ ಬಳಕೆ ಬಗ್ಗೆ ಕೂಡ ಭಯ ಹುಟ್ಟಿಸಿದೆ. ಹಾಗಿದ್ರೆ ಅಮೆರಿಕ ಸೇನೆ ನೇರವಾಗಿ ಇರಾನ್ ನೆಲಕ್ಕೆ ನುಗ್ಗಿ ಕಾರ್ಯಾಚರಣೆ ನಡೆಸಲಿದೆಯಾ?

American President Donald Trump Said This About The Next Move Against Iran

ನಾವು ರೆಡಿ ಅಂತಿದ್ದಾರೆ ಟ್ರಂಪ್!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಇರಾನ್ ವಿರುದ್ಧ ಆಕ್ರೋಶದ ಕಹಳೆ ಮೊಳಗಿಸಿದ್ದಾರೆ. ನಾವು ಸುಮ್ಮನೆ ಕೂತಿಲ್ಲ, ಎಲ್ಲವನ್ನೂ ಪ್ಲಾನ್ ಮಾಡಿಯೇ ಇಡೀ ಇರಾನ್ ಆಕಾಶ ಸುತ್ತುವರಿದಿದ್ದೀವಿ. ನಮ್ಮ ಜೊತೆಗೆ ಇದೆಲ್ಲಾ ಇಟ್ಟುಕೊಳ್ಳಬೇಡಿ, ಅಂತಾ ಇದೀಗ ಡೊನಾಲ್ಡ್ ಟ್ರಂಪ್ ವಾರ್ನಿಂಗ್ ಮೆಸೇಜ್ ಕೊಟ್ಟಿದ್ದಾರೆ. ಹಾಗೇ ಇಸ್ರೇಲ್ ಜೊತೆಗೆ ಸೇರಿ ಇರಾನ್ ವಿರುದ್ಧ ನೇರವಾಗಿ ಯುದ್ಧ ಮಾಡುವ ಬಗ್ಗೆ ಕೂಡ ಪರೋಕ್ಷವಾಗಿ ಮುನ್ಸೂಚನೆ ನೀಡಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.

ಖಮೇನಿ ಕಥೆ ಮುಗಿಸಲು ಆಪರೇಷನ್?

ಗಾಜಾ & ಇಸ್ರೇಲ್, ಯೆಮನ್ & ಇಸ್ರೇಲ್, ಲೆಬನಾನ್ & ಇಸ್ರೇಲ್, ಸಿರಿಯಾ & ಇಸ್ರೇಲ್ ಯುದ್ಧ ನಡುವೆ ದಿಢೀರ್, ಇರಾನ್ ಜೊತೆಯಲ್ಲಿಯೂ ಇದೀಗ ಘೋರ ಯುದ್ಧವನ್ನು ಶುರು ಮಾಡಿದೆ ಇಸ್ರೇಲ್. ಮಧ್ಯಪ್ರಾಚ್ಯದಲ್ಲಿ ಭಾರಿ ದೊಡ್ಡ ಯುದ್ಧ ಶುರುವಾಗಿ, ಪರಮಾಣು ಸಾಮರ್ಥ್ಯವನ್ನ ಅಂದ್ರೆ ಅಣುಬಾಂಬ್ ಇರುವ ಇರಾನ್ ವಿರುದ್ಧವೇ ನೇರವಾಗಿ ದೊಡ್ಡ ಮಟ್ಟದ ದಾಳಿ ನಡೆಸಿ ಕಾರ್ಯಾಚರಣೆ ಮುಂದುವರಿಸಿದೆ ಇಸ್ರೇಲ್. ಹೀಗಿದ್ದಾಗ, ಇರಾನ್ ದೇಶದ ಸುಪ್ರೀಂ ಲೀಡರ್ ಅಂತಾ ಕರೆಯಲಾಗುವ ಖಮೇನಿ ಅಡಗಿ ಕೂತಿರುವ ಜಾಗ ನಮಗೆ ಗೊತ್ತಾಗಿದೆ, ಖಮೇನಿ ಕಥೆ ಕೂಡ ಮುಗಿಸಲಾಗುವುದು ಎಂಬ ಮುನ್ಸೂಚನೆ ನೀಡುತ್ತಿವೆ ಇಸ್ರೇಲ್ & ಅಮೆರಿಕ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+