Donald Trump: ಡೊನಾಲ್ಡ್ ಟ್ರಂಪ್ ಜೀವಕ್ಕೆ ಇರಾನ್ ಮೂಲಕ ಕಂಟಕ?
ಡೊನಾಲ್ಡ್ ಟ್ರಂಪ್‌ಗೆ ಚಳಿ ಬಿಟ್ಟು ಹೋಗಿದೆ, ಯಾಕಂದ್ರೆ ಟ್ರಂಪ್ ಜೀವಕ್ಕೆ ಪದೇ ಪದೇ ಸಮಸ್ಯೆ ಎದುರಾಗುತ್ತಿದೆ. ಡೊನಾಲ್ಡ್ ಟ್ರಂಪ್ ಜೀವಕ್ಕೆ ಕಂಟಕ ತರಲು ಹಲವು ಬಾರಿ ಪ್ರಯತ್ನ ಕೂಡ ನಡೆದಿದೆ. ಮೊದಲೇ ಸಮಸ್ಯೆಯ ಗೂಡಾಗಿರುವ ಅಮೆರಿಕದಲ್ಲಿ ಈ ರೀತಿ ಮಾಜಿ ಅಧ್ಯಕ್ಷನ ಜೀವಕ್ಕೆ ಕಂಟಕ ಎದುರಾಗಿರುವುದು ಮತ್ತೆ ಭಯ ಹುಟ್ಟುಹಾಕಿದೆ. ಇಂತಹ ಸಮಯದಲ್ಲೇ ಅಮೆರಿಕದ ಗುಪ್ತಚರ ಇಲಾಖೆ ಬೆಚ್ಚಿ ಬೀಳಿಸುವ ಮಾಹಿತಿ ಒಂದನ್ನ ನೀಡಿದ್ದು, ಡೊನಾಲ್ಡ್ ಟ್ರಂಪ್ ಮತ್ತೆ ನಲುಗಿ ಹೋಗಿದ್ದಾರೆ.
ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗುವ ಹುಮ್ಮಸ್ಸಿನಲ್ಲಿದ್ದಾರೆ. ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಅವರನ್ನ ಸೋಲಿಸಿ, ಡೊನಾಲ್ಡ್ ಟ್ರಂಪ್ ಈ ಪಟ್ಟ ಪಡೆಯಬೇಕಿದೆ. ಹೀಗಾಗಿ ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ಮಧ್ಯೆ ಅಧ್ಯಕ್ಷ ಪಟ್ಟಕ್ಕಾಗಿ ಮಾತಿನ ಮಹಾಯುದ್ಧವೇ ಶುರುವಾಗಿ ಹೋಗಿದೆ. ಪರಿಸ್ಥಿತಿ ಹೀಗಿದ್ದಾಗ, ಇನ್ನೊಂದು ಕಡೆ ಸಂಚಲನ ಸೃಷ್ಟಿ ಮಾಡುವ ಸುದ್ದಿಯೊಂದು ಅಮೆರಿಕ ಗುಪ್ತಚರ ದಳದ ಅಧಿಕಾರಿಗಳಿಂದ ಸಿಕ್ಕಿದೆ. ಅದು ಏನಪ್ಪಾ ಅಂದ್ರೆ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಅಂತಾ ಇದೀಗ ವಿದೇಶಿ ಶಕ್ತಿಗಳು ಪ್ರಯತ್ನ ಮಾಡುತ್ತಿವೆಯಂತೆ.

ಡೊನಾಲ್ಡ್ ಟ್ರಂಪ್ ಜೀವಕ್ಕೆ ಕಂಟಕ?
ಅಮೆರಿಕ ಗುಪ್ತಚರ ದಳದ ಅಧಿಕಾರಿಗಳು ಎಚ್ಚರಿಕೆ ನೀಡಿರುವಂತೆ, ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾನ್ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ಅಮೆರಿಕ ಗುಪ್ತಚರ ದಳದಿಂದ ಸಿಕ್ಕಿರುವ ಮಾಹಿತಿ ಆಧರಿಸಿ, ಡೊನಾಲ್ಡ್ ಟ್ರಂಪ್ ಪರ ಚುನಾವಣಾ ಅಭಿಯಾನದ ಸಂಘಟಕರು ಸ್ಫೋಟಕ ಆರೋಪ ಮಾಡಿದ್ದಾರೆ. ಅದ್ರಲ್ಲೂ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರ ಸಮಯದಲ್ಲೇ ಕಂಟಕ ಎದುರಾಗಿರುವ ಸ್ಫೋಟಕ ವಿಚಾರ ತಿಳಿಸಲಾಗಿದೆ. ಹೀಗಾಗಿ ಇದೀಗ ಟ್ರಂಪ್ ಅವರಿಗೆ ನೀಡಿರುವ ಭದ್ರತೆ ಹೆಚ್ಚಿಸಲಾಗಿದೆ.
ಡೊನಾಲ್ಡ್ ಟ್ರಂಪ್ ಹತ್ಯೆಗೆ ಪ್ರಯತ್ನ
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಿರುವ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಈಗಾಗಲೇ 2 ಬಾರಿ ಹತ್ಯೆಗೆ ಪ್ರಯತ್ನ ಮಾಡಲಾಗಿದೆ. ಇದೇ ವರ್ಷದ ಜುಲೈ 13ನೇ ತಾರೀಖು ಮೊದಲ ಬಾರಿಗೆ ಹತ್ಯೆಗೆ ಯತ್ನಿಸಲಾಗಿತ್ತು. ಆ ನಂತರ ಅಂದ್ರೆ ಸೆಪ್ಟೆಂಬರ್ 15ಕ್ಕೆ ಕೂಡ ಇದೇ ರೀತಿ, ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ಕೂಡ ಹತ್ಯೆಗೆ ವಿಫಲ ಯತ್ನವನ್ನ ಮಾಡಿದ್ದರು ಆಗಂತುಕರು. ನವೆಂಬರ್ 5 ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯು ನಡೆಯಲಿದೆ. ಅದಕ್ಕೂ ಮೊದಲು 2 ಬಾರಿ ಡೊನಾಲ್ಡ್ ಟ್ರಂಪ್ ಹತ್ಯೆಗೆ ಪ್ರಯತ್ನ ಮಾಡಿದ್ದು ಸಹಜವಾಗಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ.












Click it and Unblock the Notifications