37 ಉಗ್ರರನ್ನು ಹತ್ಯೆ ಮಾಡಿದ ಅಮೆರಿಕ ಸೇನೆ? ಎಲ್ಲಿ & ಯಾವಾಗ?
ಅದೇನು ಮನುಷ್ಯರೋ ಏನೋ.. ನೆಮ್ಮದಿಯಾಗಿ ಬಾಳುವುದು ಬಿಟ್ಟು ಯುದ್ಧ & ಹಿಂಸೆ ಅಂತಾ ಸಾಯುತ್ತಿದ್ದಾರೆ... ಅಷ್ಟಕ್ಕೂ ಈ ಮಾತನ್ನ ಮಧ್ಯಪ್ರಾಚ್ಯದ ಪರಿಸ್ಥಿತಿ ನೋಡಿದವರು ಹೇಳುತ್ತಲೇ ಇದ್ದಾರೆ. ಜಗತ್ತಿನಾದ್ಯಂತ ಇಂತಹ ಒಂದು ಚರ್ಚೆ ಬಲು ಜೋರಾಗಿದೆ. ಯಾಕೆ ಅಂದ್ರೆ ಇರಾನ್, ಲೆಬನಾನ್, ಸಿರಿಯಾ, ಗಾಜಾ ಪಟ್ಟಿ ಒಟ್ಟಾಗಿ ಇಸ್ರೇಲ್ ವಿರುದ್ಧ ಯುದ್ಧ ನಡೆಸುತ್ತಿವೆ. ಇದೇ ಸಮಯದಲ್ಲಿ ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕ ಹೋಗಿ ಸಿರಿಯಾದಲ್ಲಿ ಸರಿಯಾದ ಬಾಂಬ್ ಹಾಕಿಬಿಟ್ಟಿದೆ!
ಸಿರಿಯಾ ಸೊರಗಿ ಹೋಗಿದೆ, ಮೊದಲೇ ಹೇಳಿದಂತೆ ಸಮಸ್ಯೆ ಸುಳಿಗೆ ಸಿಲುಕಿ ತುತ್ತು ಅನ್ನಕ್ಕೆ ಕೂಡ ಸಿರಿಯಾದ ಜನರು ಪರದಾಡುವ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲೂ ಸಿರಿಯಾ ಹಿಂಸಾಚಾರ ತಣ್ಣಗಾಗುತ್ತಿಲ್ಲ. ಹೀಗಾಗಿ ಸಿರಿಯಾದ ನೆಲದಲ್ಲಿ ಶಾಂತಿ ಸ್ಥಾಪನೆ ಮಾಡೋಕೆ ಅಮೆರಿಕ ಕಾರ್ಯಾಚರಣೆ ನಡೆಸುತ್ತಿದೆ ಎನ್ನುತ್ತಿದೆ. ಈ ರೀತಿಯ ಕಾರ್ಯಾಚರಣೆಯ ವೇಳೆ ಒಂದೇ ಬಾರಿಗೆ ಬರೋಬ್ಬರಿ 37 ಉಗ್ರರ ಕಥೆ ಮುಗಿಸಿದ್ದೇವೆ ಅಂತಿದೆ ಅಮೆರಿಕ. ಹಾಗಾದರೆ ಹೇಗಿತ್ತು ಅಮೆರಿಕದ ಈ ಬಹುದೊಡ್ಡ ಕಾರ್ಯಾಚರಣೆ? ಮುಂದೆ ಓದಿ.

ಸೆಪ್ಟೆಂಬರ್ 16 & 24ರಂದು ಕಾರ್ಯಾಚರಣೆ
ಸಿರಿಯಾ ಭಾಗದ ಮೇಲೆ ಅಮೆರಿಕ ಮೊದಲಿನಿಂದ ಕೂಡ ದಾಳಿ ನಡೆಸುತ್ತಿದೆ. ಸಿರಿಯಾ ಈ ಮೊದಲಿನಿಂದ ಕೂಡ ಹಿಂಸೆಯ ಬಲೆಯಲ್ಲಿ ಸಿಲುಕಿ ನಲುಗಿದೆ. ಅದ್ರಲ್ಲೂ ಸಿರಿಯಾದಲ್ಲಿ, ಅಮೆರಿಕ & ಸಿರಿಯಾ ಉಗ್ರರ ನಡುವೆ ನಡೆಯುತ್ತಿರುವ ತಿಕ್ಕಾಟ ಸೈಲೆಂಟ್ ಆಗುತ್ತಿಲ್ಲ. ಇದೇ ಕಾರಣಕ್ಕೆ ಮಧ್ಯಪ್ರಾಚ್ಯ ದೇಶಗಳಲ್ಲಿ ಹೊತ್ತಿಕೊಂಡಿರುವ ಬೆಂಕಿ ಆರುವ ಲಕ್ಷಣ ಕಾಣುತ್ತಿಲ್ಲ.
ಇಂತಹ ಸಮಯದಲ್ಲೇ ಅಮೆರಿಕ ಇದೀಗ ಸ್ಫೋಟಕ ಸತ್ಯ ಒಂದನ್ನ ಹೇಳಿದ್ದು, ಅಮೆರಿಕದ ಸೇನೆ ಸಿರಿಯಾದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ 37 ಉಗ್ರರನ್ನ ಹತ್ಯೆ ಮಾಡಲಾಗಿದೆಯಂತೆ. ಇದೇ ತಿಂಗಳು ಅಂದ್ರೆ ಸೆಪ್ಟೆಂಬರ್ 16 & 24ರ ಮಂಗಳವಾರ ನಡೆಸಿದ ವೈಮಾನಿಕ ದಾಳಿಗೆ ಬಲಿಯಾಗಿದ್ದಾರೆ ಈ ಉಗ್ರರು ಎನ್ನಲಾಗಿದೆ.
ಉಗ್ರರ ಮಾಹಿತಿ ಸಿಕ್ಕಿದ್ದು ಹೇಗೆ?
ಅಂದಹಾಗೆ ಇದೀಗ ಅಮೆರಿಕ ನೀಡಿರುವ ಮಾಹಿತಿ ಪ್ರಕಾರ, ಹತ್ಯೆ ಆಗಿರುವ ಉಗ್ರರಿಗೆ ಹಲವು ವರ್ಷಗಳಿಂದ ಅಲ್ ಖೈದಾ ಜೊತೆಗೆ ನಂಟು ಇತ್ತು ಎಂಬ ಆರೋಪ ಮಾಡಲಾಗಿದೆ. ಅಲ್ಲದೆ ಉಗ್ರರ ನೆಲೆಗಳನ್ನ ಸರಿಯಾಗಿ ಗುರುತಿಸಿ, ಅಮೆರಿಕದ ವಾಯುಪಡೆ ಈ ರೀತಿಯ ದಾಳಿಯನ್ನ ನಡೆಸಿದೆ ಎಂದು ತಿಳಿಸಲಾಗಿದೆ. ಸೆ. 16ರ ಸೋಮವಾರ ಸಿರಿಯಾದ ಮಧ್ಯಭಾಗದಲ್ಲಿ ಇದೇ ರೀತಿ ಕಾರ್ಯಾಚರಣೆ ನಡೆಸಿ 28 ಉಗ್ರರನ್ನು ಹತ್ಯೆ ಮಾಡಿದೆ ಅಮೆರಿಕ ಎನ್ನಲಾಗಿದೆ. ಅಲ್ಲದೆ ಸೆಪ್ಟೆಂಬರ್ 24 ರಂದು ಕೂಡ ಇದೇ ರೀತಿಯ ದಾಳಿ ನಡೆದಿದೆ. ಅತ್ತ ಇಸ್ರೇಲ್ ಸೇನೆ ಕೂಡ ಕಾರ್ಯಾಚರಣೆ ನಡೆಸುತ್ತಿದ್ದು, ದಿನದಿಂದ ದಿನಕ್ಕೆ ಈ ಭಾಗದಲ್ಲಿ ಪರಿಸ್ಥಿತಿ ಕೈಮೀರುತ್ತಿದೆ.












Click it and Unblock the Notifications